Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 18:17 - ಕನ್ನಡ ಸತ್ಯವೇದವು C.L. Bible (BSI)

17 ಅವನ ಸ್ಮರಣೆ ಅಳಿದುಹೋಗುವುದು ಜಗದಲಿ ಇಲ್ಲವಾಗುವುದು ಅವನ ಹೆಸರು ನಾಡಿನಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅವನ ಸ್ಮರಣೆಯು ಭೂಮಿಯಲ್ಲಿ ಅಳಿದುಹೋಗುವುದು, ಅವನ ಹೆಸರು ಹೊರಗಣ ಪ್ರಾಂತ್ಯಗಳಲ್ಲಿಯೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅವನ ಸ್ಮರಣೆಯು ಭೂವಿುಯಲ್ಲಿ ಅಳಿದುಹೋಗುವದು, ಅವನ ಹೆಸರು ಹೊರಗಣ ಪ್ರಾಂತ್ಯಗಳಲ್ಲಿಯೂ ನಿಲ್ಲುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಭೂಮಿಯ ಮೇಲಿರುವ ಜನರು ಅವನನ್ನು ಜ್ಞಾಪಿಸಿಕೊಳ್ಳುವುದಿಲ್ಲ; ಇನ್ನು ಮೇಲೆ ಅವನನ್ನು ಯಾರೂ ಜ್ಞಾಪಿಸಿಕೊಳ್ಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅವನ ಸ್ಮರಣೆಯು ಭೂಮಿಯಿಂದ ಅಳಿದುಹೋಗುವುದು; ನಾಡಿನಲ್ಲಿ ಅವನ ಹೆಸರು ಇಲ್ಲದೆ ಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 18:17
13 ತಿಳಿವುಗಳ ಹೋಲಿಕೆ  

ಸಜ್ಜನರ ಸ್ಮರಣೆ ಮಂಗಳಕರ; ದುರ್ಜನರ ಹೆಸರು ಅಸಹ್ಯಕರ.


ದುರ್ಜನರಿಗಾದರೋ ಪ್ರಭು ವಿಮುಖನು I ಅವರ ಹೆಸರನು ಧರೆಯಿಂದ ಅಳಿಸುವನು II


ನಿರ್ಮೂಲವಾಗಲಿ ಅವನಾ ಪೀಳಿಗೆ I ನಿರ್ನಾಮವಾಗಲಿ ಮರುವಂಶದೊಳಗೆ II


ದುರುಳರಾದರೋ ನಾಡಿನಿಂದ ಬೇರ್ಪಡುವರು, ದ್ರೋಹಿಗಳು ಅಲ್ಲಿಂದ ಅಳಿದು ನಾಶವಾಗುವರು.


ಇಂತೆನ್ನುತಿಹರು : “ಬನ್ನಿ ಸಂಹರಿಸೋಣ I ಆತನ ಜನಾಂಗ ಉಳಿಯದಂತೆ ಮಾಡೋಣ I ಇಸ್ರಯೇಲೆಂಬ ನಾಮವನಳಿಸಿಬಿಡೋಣ” II


ನಿಮ್ಮ ಸ್ಮೃತಿಗಳು ಬೂದಿಯ ಸಾಮತಿಗಳು ನಿಮ್ಮ ವಾದಗಳು ಮಣ್ಣಿನ ಗೋಡೆಗಳು.


ಹೆತ್ತಕರುಳೇ ಅವನನು ಮರೆತುಬಿಡುವುದು ಹುಳು ಅವನ ಹೆಣವನು ಆಸೆಯಿಂದ ಕಬಳಿಸುವುದು. ಇನ್ನು ಅವನ ನೆನಪು ಯಾರಿಗೂ ಇರದು ಅಕ್ರಮವು ಮುರಿದುಬಿದ್ದ ಮರದಂತಾಗುವುದು.


ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ I ಅವನ ಹೆಸರೇ ಇಲ್ಲದಂತಾಗಲಿ ಧರೆಯಲಿ II


ಅಸ್ಸೀರಿಯವೇ, ಸರ್ವೇಶ್ವರನಾದ ನಾನು ನಿನ್ನ ಬಗ್ಗೆ ಹೊರಡಿಸಿದ ಆಜ್ಞೆ ಏನೆಂದರೆ: ಹೆಸರೆತ್ತಲು ನಿನಗೆ ಸಂತಾನವೇ ಇಲ್ಲದಂತಾಗುವುದು. ನಿನ್ನ ದೇವರುಗಳ ಗುಡಿಗಳಲ್ಲಿರುವ ಕೆತ್ತನೆಯ ವಿಗ್ರಹವನ್ನೂ ಎರಕದ ಬೊಂಬೆಯನ್ನೂ ಒಡೆದುಹಾಕುವೆನು. ನಿನಗೆ ಸಮಾಧಿಯೊಂದನ್ನು ಸಿದ್ಧಗೊಳಿಸುವೆನು; ಏಕೆಂದರೆ ನೀನು ಕೆಡುಕ.”


ನಿಶ್ಶೇಷವಾಗಿ ಹೋದರು ವಿರೋಧಿಗಳು I ನಾಶವಾಗಿ ಹೋದವು ಅವರ ನಗರಗಳು I ಇಲ್ಲವಾದವು ಅವರ ಯಾವ ನೆನಪುಗಳು II


“ಇವನ ಸಾವೆಂದು? ಇವ ನಿರ್ನಾಮವಾಗುವದೆಂತು?” I ನನಗೆ ಕೇಡು ಬಯಸುವವರ ಕುಹಕ ನುಡಿಯಿದು II


ಸ್ವಂತ ಜನರನೇ ಕೊಂದ ನಿನಗೆ ಸ್ವಂತ ನಾಡನೇ ನಾಶಗೈದ ನಿನಗೆ ಸಿಗದು ರಾಜ್ಯವೈಭವದ ಸಂಸ್ಕಾರ ಗೋರಿಗೆ, ‘ಹೇಳಹೆಸರಿಲ್ಲದ ಗತಿ ದುರುಳರ ಸಂತಾನಕೆ’.


ಮಡಿದುಹೋದರು ಆ ಒಡೆಯರೆಲ್ಲ ಮರಳಿ ಅವರ ಪ್ರೇತಗಳು ಎದ್ದುಬರುವಂತಿಲ್ಲ. ನೀನವರನು ಬಡಿದು ನಸುಕಿಹಾಕಿರುವೆ ಅವರ ನೆನಪನೆ ಅಳಿಸಿಹಾಕಿರುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು