Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 17:14 - ಕನ್ನಡ ಸತ್ಯವೇದವು C.L. Bible (BSI)

14 ಸಮಾಧಿಯನ್ನೇ ‘ನನ್ನ ತಂದೆ’ ಎಂದು ಕರೆದೆನಾದರೆ ಹುಳುವನ್ನೇ ‘ನನ್ನ ತಾಯಿ, ನನ್ನ ತಂಗಿ’ ಎಂದೆನಾದರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಸಮಾಧಿಯನ್ನು, ‘ನೀನು, ನನ್ನ ತಂದೆ’ ಎಂದೂ ಹುಳವನ್ನು, ‘ನನ್ನ ತಾಯಿ, ನನ್ನ ತಂಗಿ’ ಎಂದೂ ಕರೆಯುವುದಾದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಶ್ಮಶಾನವನ್ನು, ನೀನು ನನ್ನ ತಂದೆ ಎಂದೂ ಹುಳವನ್ನು, ನನ್ನ ತಾಯಿ, ನನ್ನ ತಂಗಿ ಎಂದೂ ಕರೆಯುವದಾದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಾನು ಸಮಾಧಿಗೆ, ‘ನೀನೇ ನನ್ನ ತಂದೆ’ಯೆಂದು ಹುಳವಿಗೆ, ‘ನೀನೇ ನನ್ನ ತಾಯಿ, ನೀನೇ ನನ್ನ ತಂಗಿ’ ಎಂದು ಹೇಳುವುದಾದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಸಮಾಧಿಗೆ, ‘ನೀನು ನನ್ನ ತಂದೆ’ ಎಂದೂ, ಹುಳಕ್ಕೆ, ‘ನನ್ನ ತಾಯಿ, ನನ್ನ ತಂಗಿ’ ಎಂದೂ ನಾನು ಕರೆಯುವುದಾದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 17:14
15 ತಿಳಿವುಗಳ ಹೋಲಿಕೆ  

ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I ಬಿಟ್ಟುಕೊಡುವುದಿಲ್ಲ ನಿನ್ನ ಆ ಭಕ್ತನನು ಪಾತಾಳಕೆ II


ಸತ್ತವರ ಪುನರುತ್ಥಾನವೂ ಹಾಗೆಯೇ. ಬಿತ್ತುವಂಥದ್ದು ಅಳಿದುಹೋಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದುದು. ಬಿತ್ತಿದ್ದು ಬಲಹೀನವಾದುದು; ಪುನರುತ್ಥಾನಹೊಂದುವಂಥದ್ದು, ಬಲಿಷ್ಠವಾದುದು.


ಇಳಿದಿದೆ ನಿನ್ನ ವೈಭವ, ವೀಣಾನಾದ ಪಾತಾಳಕೆ ನಿನಗೀಗ ಹುಳುಗಳೇ ಹಾಸಿಗೆ, ಕ್ರಿಮಿಗಳೇ ಹೊದಿಕೆ.


ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ I ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ II


ನನ್ನ ಚರ್ಮ ಉದುರುತ್ತಿದೆ ಕರ್ರಗಾಗಿ ನನ್ನೆಲುಬು ಉರಿಯುತ್ತಿದೆ ತಾಪಕ್ಕೊಳಗಾಗಿ.


ಹೆತ್ತಕರುಳೇ ಅವನನು ಮರೆತುಬಿಡುವುದು ಹುಳು ಅವನ ಹೆಣವನು ಆಸೆಯಿಂದ ಕಬಳಿಸುವುದು. ಇನ್ನು ಅವನ ನೆನಪು ಯಾರಿಗೂ ಇರದು ಅಕ್ರಮವು ಮುರಿದುಬಿದ್ದ ಮರದಂತಾಗುವುದು.


ಇವರಿಬ್ಬರೂ ಮಣ್ಣಿನಲ್ಲಿ ಹೂಣಲ್ಪಡುತ್ತಾರೆ ಹುಳುಗಳು ಅವರನು ಮುತ್ತಿಕೊಳ್ಳುತ್ತವೆ.


ಕೊಳೆತ ಪದಾರ್ಥದಂತೆ, ನುಸಿಹಿಡಿದ ಬಟ್ಟೆಯಂತೆ ನಾನು ಕ್ಷಯಿಸಿ ಹೋಗುತ್ತಿರುವೆ.”


ನನ್ನ ಚರ್ಮ ಹೀಗೆ ಬಿರಿದು ಹಾಳಾದರೂ ದೇಹಧಾರಿಯಾಗಿಯೇ ನಾನು ನೋಡುವೆನು ದೇವರನು.


ನನ್ನ ಮಾಂಸ ಮುಸುಕಿದೆ ಹುಳುಹುಪ್ಪಟೆಗಳಿಂದ ನನ್ನ ಚರ್ಮ ಬಿರಿದಿದೆ ಕಜ್ಜಿಕಡಿತಗಳಿಂದ.


ಇಂತಿರಲು ಹುಳುವಿನಂಥ ನರನು ಏತರವನು? ಕ್ರಿಮಿಯಂಥ ನರನು ಎಷ್ಟುಮಾತ್ರದವನು?”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು