Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 16:7 - ಕನ್ನಡ ಸತ್ಯವೇದವು C.L. Bible (BSI)

7 ದೇವರೇ, ದುಃಖದಿಂದ ನೀ ನನ್ನನ್ನು ಸವೆಸಿರುವೆ ನನ್ನ ಬಂಧುಬಳಗದವರನ್ನು ಸದೆಬಡಿದಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆದರೆ ಈಗ ಆತನು ನನ್ನನ್ನು ಕುಂದಿಸಿದ್ದಾನೆ; (ದೇವಾ) ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಈಗಲಂತು ಆತನು ನನ್ನನ್ನು ಕುಂದಿಸಿದ್ದಾನೆ; [ದೇವಾ,] ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ದೇವರೇ, ನೀನು ನನ್ನನ್ನು ನಿಶ್ಯಕ್ತನನ್ನಾಗಿ ಮಾಡಿರುವೆ. ನನ್ನ ಇಡೀ ಕುಟುಂಬವನ್ನು ನಾಶ ಮಾಡಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ದೇವರೇ, ನೀವು ನನ್ನನ್ನು ಬಲಹೀನಪಡಿಸಿದ್ದೀರಿ; ನೀವು ನನ್ನ ಕುಟುಂಬದವರನ್ನೆಲ್ಲಾ ಇಲ್ಲದಂತೆ ಮಾಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 16:7
13 ತಿಳಿವುಗಳ ಹೋಲಿಕೆ  

ನನ್ನ ಪಾಲಿಗೆ ಬಂದಿವೆ ಬೇಸರಿಕೆಯ ಮಾಸಗಳು ನನಗೆ ನೇಮಕವಾಗಿವೆ ಆಯಾಸದ ರಾತ್ರಿಗಳು.


ಆದಕಾರಣ ನಿಮ್ಮನ್ನು ಕಠಿಣವಾಗಿ ದಂಡಿಸುವೆನು. ನಿಮ್ಮ ಪಾಪದ ನಿಮಿತ್ತ ನಾಶವಾಗುವಿರಿ.


ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು.


“ನನ್ನ ಬಾಳೇ ನನಗೆ ಬೇಸರವಾಗಿದೆ ಎದೆಬಿಚ್ಚಿ ಮೊರೆಯಿಡುತ್ತಿರುವೆ ಕಹಿ ಮನದಿಂದ ನುಡಿಯುತ್ತಿರುವೆ.


ಬದುಕು ನನಗೆ ಬೇಸರ; ನಿರಂತರ ಬಾಳು ನನಗೆ ಅನಿಷ್ಟ ನನ್ನ ದಿನಗಳು ನಿರರ್ಥಕ, ನನ್ನ ಗೊಡವೆ ನಿನಗೆ ಬೇಕಿಲ್ಲ.


ದಣಿದವರಿಗೆ ದೊರಕುವುದು ಆ ಕೂಪದಲಿ ವಿಶ್ರಾಂತಿ ಅಣಗುವುದಲ್ಲಿ ದುರುಳರು ಕೊಡುವ ಹಾವಳಿ.


ಗೆಳೆಯರು ನನ್ನನ್ನು ಹೀಗಳೆಯುತ್ತಿರುವರು ನಾನೋ ಸುರಿಸುತ್ತಿರುವೆ ದೇವರ ಮುಂದೆ ಕಣ್ಣೀರು.


ಸೋದರನನ್ನೂ ನನ್ನಿಂದ ದೇವರು ದೂರವಾಗಿರಿಸಿದ್ದಾನೆ ಪರಿಚಿತರೆಲ್ಲರು ನನ್ನನು ತೊರೆದುಬಿಟ್ಟಿದ್ದಾರೆ.


ನನಗೆ ಯಾವ ಸಹಾಯವೂ ಇಲ್ಲವಲ್ಲ! ನನ್ನ ತ್ರಾಣ ತೊಲಗಿಹೋಗಿದೆಯಲ್ಲಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು