Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 16:15 - ಕನ್ನಡ ಸತ್ಯವೇದವು C.L. Bible (BSI)

15 ಗೋಣಿತಟ್ಟನ್ನು ಹೊಲಿದು ಮೈಗೆ ಹಾಕಿಕೊಂಡಿರುವೆ ನನ್ನ ಕೊಂಬನ್ನು ಬೂದಿಯೊಳಗೆ ಬಾಗಿಸಿಟ್ಟಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಗೋಣಿಯನ್ನು ಹೊಲೆದು ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಕೊಂಬನ್ನು ಧೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಗೋಣಿಯನ್ನು ಹೊಲಿದು ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಕೊಂಬನ್ನು ದೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 “ನಾನು ಬಹು ದುಃಖಿತನಾಗಿದ್ದೇನೆ; ಗೋಣಿತಟ್ಟನ್ನು ಸುತ್ತಿಕೊಂಡಿದ್ದೇನೆ; ಸೋತುಹೋದೆನೆಂದು ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 “ನಾನು ಗೋಣಿತಟ್ಟು ಹೊಲಿದು ನನ್ನ ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಗೌರವವನ್ನು ಧೂಳಿನಲ್ಲಿ ಮರೆಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 16:15
12 ತಿಳಿವುಗಳ ಹೋಲಿಕೆ  

ದುಃಖ ತಾಳಲಾಗದೆ ತನ್ನ ಬಟ್ಟೆಯನ್ನು ಹರಿದುಕೊಂಡ; ನಡುವಿಗೆ ಗೋಣಿತಟ್ಟನ್ನು ಸುತ್ತಿಕೊಂಡ; ತನ್ನ ಮಗನಿಗಾಗಿ ಬಹುದಿನಗಳವರೆಗೂ ಅತ್ತು ಪ್ರಲಾಪಿಸಿದ.


ಎನ್ನ ಬೆನ್ನಟ್ಟಿ ಬರಲಿ ವೈರಿ, ಕಾಲಿಂದೆನ್ನ ಮೆಟ್ಟಿ ತುಳಿಯಲಿ I ಎನ್ನ ಮಾನವನು ಮಣ್ಣುಪಾಲಾಗಿಸಲಿ, ನನ್ನನು ಸೋಲಿಸಿಬಿಡಲಿ II


ಎಂದೇ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಆ ದಿನದಂದು ನಿಮಗೆ ಆಜ್ಞಾಪಿಸಿ : “ನೀವು ಅತ್ತು ಪ್ರಲಾಪಿಸಬೇಕು, ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು,” ಎಂದು ಹೇಳಿದರು.


ಕಾಣಿಸಿಕೊಳ್ಳದಿರಲಿ ನಿಮ್ಮ ಕೋರೆಕೊಂಬುಗಳು I ಮಾತೆತ್ತದಿರಲಿ ನಿಮ್ಮಗಳ ಕೊಬ್ಬಿದಾ ಕಂಠಗಳು” II


ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿದುಕೊಂಡನು; ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನಮನಸ್ಸಿನಿಂದ ವರ್ತಿಸಿದನು.


ಕತ್ತರಿಸುವನು ಕೆಡುಕರ ಕೋರೆಕೋಡುಗಳನು I ಎತ್ತರಿಸುವನು ಸಜ್ಜನರ ಕೋರೆಕೊಂಬುಗಳನು II


ನನ್ನನು ಕೆಸರಿನಲ್ಲಿ ಕೆಡವಿದ್ದಾರೆ ನನ್ನನು ಭಸ್ಮಕ್ಕೆ ಸಮಾನನನ್ನಾಗಿಸಿದ್ದಾರೆ.


ಚದರಿಹೋಗುವರು ಸರ್ವೇಶ್ವರನ ವಿರೋಧಿಗಳು ಆಗಸದಿಂದಾತ ಅವರ ವಿರುದ್ಧ ಗರ್ಜಿಸಲು! ನ್ಯಾಯ ತೀರಿಸುವನಾತ ಜಗದ ಕಟ್ಟಕಡೆಯವರೆಗೆ ಶಕ್ತಿಸಾಮರ್ಥ್ಯವನೀವನು ತಾ ನೇಮಿಸಿದರಸನಿಗೆ ಏರಿಸುವನು ತನ್ನಭಿಷಿಕ್ತನ ಒಲುಮೆಯನು ಉನ್ನತಿಗೆ.


ಹನ್ನಳು ಹೀಗೆಂದು ಭಜಿಸಿದಳು: “ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ ನನಗಿದೆ ಶತ್ರುಗಳನ್ನೂ ಧಿಕ್ಕರಿಸುವ ಶಕ್ತಿ ನನಗಿತ್ತಿರುವನಾ ಸಂತಸದಾಯಕ ಮುಕ್ತಿ.


ನನ್ನ ಘನತೆಯನ್ನು ಸುಲಿದುಬಿಟ್ಟಿದ್ದಾನೆ ನನ್ನ ಕಿರೀಟವನ್ನು ಕಿತ್ತುಹಾಕಿದ್ದಾನೆ.


ಗೋಣಿತಟ್ಟನು ನಾನುಟ್ಟುಕೊಂಡೆನಯ್ಯಾ I ಅಣಕ ಅವಹೇಳನಕೆ ಗುರಿಯಾದೆನಯ್ಯಾ II


ಮಣ್ಣು ಮುಕ್ಕಬೇಕಾಗಿ ಬಂದರೂ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು