Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 14:10 - ಕನ್ನಡ ಸತ್ಯವೇದವು C.L. Bible (BSI)

10 ಮನುಜನೋ ಬಿದ್ದಿರುತ್ತಾನೆ ಸತ್ತು ಕೊನೆಯುಸಿರೆಳೆದಾಗ ಎಲ್ಲವು ಮುಗಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಮನುಷ್ಯನಾದರೋ ಸತ್ತು ಬೋರಲುಬೀಳುವನು, ಪ್ರಾಣಹೋಗಲು ಅವನ ಅಂತ್ಯವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮನುಷ್ಯನಾದರೋ ಸತ್ತು ಬೋರಲ ಬೀಳುವನು, ಪ್ರಾಣಹೋಗಲು ಅವನು ಎಲ್ಲಿಯೋ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಮನುಷ್ಯನಾದರೋ ಸತ್ತು ಕೊನೆಗೊಳ್ಳುವನು. ಪ್ರಾಣ ಹೋದಾಗ ಇಲ್ಲವಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆದರೆ ಮನುಷ್ಯನು ಸತ್ತು ಬಿದ್ದಿರುತ್ತಾನೆ; ಅವನು ಕೊನೆಯುಸಿರೆಳೆದಾಗ ಅವನ ಅಂತ್ಯವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 14:10
20 ತಿಳಿವುಗಳ ಹೋಲಿಕೆ  

ನನ್ನ ಚರ್ಮ ಹೀಗೆ ಬಿರಿದು ಹಾಳಾದರೂ ದೇಹಧಾರಿಯಾಗಿಯೇ ನಾನು ನೋಡುವೆನು ದೇವರನು.


ಸತ್ತು ಮಲಗಿದ ಮನುಜ ಏಳುವಂತಿಲ್ಲ. ಅಳಿದುಹೋದರೂ ಆಕಾಶಮಂಡಲ ಅವನು ಎಚ್ಚರಗೊಳ್ಳುವುದಿಲ್ಲ, ಎಬ್ಬಿಸಲ್ಪಡುವುದಿಲ್ಲ.


ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದ ನಂತರ ಯಕೋಬನು ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು, ಮೃತರಾದ ಪಿತೃಗಳ ಬಳಿಗೆ ಸೇರಿದನು.


ಆಕ್ಷಣವೇ ಆಕೆಯೂ ಸತ್ತು ಅವನ ಕಾಲಬಳಿ ಬಿದ್ದಳು. ಒಳಗೆ ಬಂದ ಯುವಕರು ಆಕೆಯೂ ಸತ್ತುಬಿದ್ದಿರುವುದನ್ನು ಕಂಡು ಆಕೆಯನ್ನು ಹೊತ್ತುಕೊಂಡು ಹೋಗಿ ಪತಿಯ ಪಕ್ಕದಲ್ಲೇ ಸಮಾಧಿಮಾಡಿದರು.


ಯೇಸುಸ್ವಾಮಿ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಅಸುನೀಗಿದರು.


ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆಯಿಂದಿರುತ್ತಾನೆ.


ದುರ್ಜನರು ನಿರಾಶೆಯಿಂದ ಕಂಗೆಡುವರು ಪ್ರಾಣಬಿಡಬೇಕೆಂಬುದೇ ಅವರ ಆಶೆಯಾಗಿರುವುದು.”


ತಾಯ ಗರ್ಭದಿಂದ ನನ್ನನ್ನೇಕೆ ಹೊರತೆಗೆದೆ? ನಾನು ಸತ್ತುಹೋಗಬಹುದಿತ್ತು ಯಾರೂ ನೋಡುವುದಕ್ಕೆ ಮುಂಚೆ!


ಹುಟ್ಟುವಾಗಲೇ ನಾನೇಕೆ ಸಾಯಲಿಲ್ಲ? ಉದರದಿಂದ ಬಂದೊಡನೆ ನಾನೇಕೆ ಮಡಿಯಲಿಲ್ಲ?


ನಾವು ನಿಮ್ಮ ದೃಷ್ಟಿಯಲ್ಲಿ ಪರದೇಶಿಗಳು; ನಮ್ಮ ಪೂರ್ವಜರಂತೆ ಪ್ರವಾಸಿಗಳು. ನಮ್ಮ ಆಯುಷ್ಕಾಲ ನೆರಳಿನಂತೆ; ನಮಗಿಲ್ಲ, ಯಾವ ನಿರೀಕ್ಷೆ.


ಆಗ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ ಕಣ್ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆ.


ದೇವರು ನಿಮ್ಮನ್ನು ಪರಿಶೋಧಿಸಿದರೆ ನಿಮಗೆ ಒಳಿತೆ? ಮನುಷ್ಯರಂತೆ ಆತನನ್ನು ಮೋಸಗೊಳಿಸಲಾದೀತೆ?


ಮಳೆ ವಾಸನೆಯಿಂದಲೆ ಅದು ಮೊಳೆಯುವುದು ಗಿಡದ ಹಾಗೆ ಅದು ಕವಲೊಡೆದುಕೊಳ್ಳುವುದು.


ನನ್ನ ಅಪರಾದವನ್ನು ನೀನು ಕ್ಷಮಿಸಬಾರದೆ? ನನ್ನ ದೋಷವನ್ನು ನೀನು ಪರಿಹರಿಸಬಾರದೆ? ಮಣ್ಣಿನೊಳಗೆ ಬಿದ್ದಿರುವೆ ನಾನು ಈಗ ನಾನು ಇಲ್ಲವಾಗಿರುವೆ ನೀ ಹುಡುಕುವಾಗ.


ತನ್ನ ಮಲದ ಹಾಗೆ ನಿತ್ಯಕ್ಕು ಅವನು ನಶಿಸಿಹೋಗುವನು ಅವನನು ಅರಿತವರೆಲ್ಲರೂ “ಅವನೆಲ್ಲಿಯೋ!’ ಎಂದು ಹೇಳುವರು.


ಎಲ್ಲ ಪ್ರಾಣಿಗಳೂ ಒಂದೇ ಸ್ಥಳಕ್ಕೆ ಹೋಗುತ್ತವೆ. ಎಲ್ಲವೂ ಮಣ್ಣಿನಿಂದ ಆದವು, ಎಲ್ಲವೂ ಮರಳಿ ಮಣ್ಣಿಗೆ ಸೇರುತ್ತವೆ.


ಮನುಷ್ಯನ ಆತ್ಮ ಮೇಲಕ್ಕೆ ಏರುತ್ತದೋ? ಪಶುವಿನ ಆತ್ಮ ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ? ಯಾರಿಗೆ ಗೊತ್ತು?”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು