Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 13:24 - ಕನ್ನಡ ಸತ್ಯವೇದವು C.L. Bible (BSI)

24 ನೀನೇಕೆ ನನಗೆ ವಿಮುಖನಾಗಿರುವೆ? ನನ್ನನ್ನೇಕೆ ಶತ್ರು ಎಂದೆಣಿಸುವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಏಕೆ ನಿನ್ನ ಮುಖವನ್ನು ಮರೆಮಾಡುತ್ತಿ? ನನ್ನನ್ನು ಶತ್ರುವೆಂದೆಣಿಸಿರುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ನೀನು ವಿಮುಖನಾಗಿ ನನ್ನನ್ನು ಶತ್ರುವೆಂದೆಣಿಸಿರುವದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ದೇವರೇ, ನೀನೇಕೆ ನನಗೆ ಮರೆಯಾಗಿರುವೆ? ನನ್ನನ್ನೇಕೆ ನಿನ್ನ ಶತ್ರುವೆಂದು ಪರಿಗಣಿಸಿರುವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ? ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 13:24
21 ತಿಳಿವುಗಳ ಹೋಲಿಕೆ  

ತನ್ನ ಕೋಪಾಗ್ನಿಯನು ನನ್ನ ಮೇಲೆ ಧಗಧಗಿಸಿದ್ದಾನೆ ನನ್ನನ್ನು ತನ್ನ ವೈರಿಯೆಂದೇ ಪರಿಗಣಿಸಿದ್ದಾನೆ.


ಸ್ವಾಮಿಯೇ ಶತ್ರುವಾಗಿ ಕಬಳಿಸಿದ ಇಸ್ರಯೇಲನ್ನು ನಾಶಮಾಡಿದ ಅದರ ಅರಮನೆಗಳೆಲ್ಲವನ್ನು ನೆಲಸಮಗೊಳಿಸಿದ ಅದರ ಕೋಟೆಕೊತ್ತಲಗಳನ್ನು ಯಥೇಚ್ಛವಾಗಿಸಿದ ಯೆಹೂದ ನಾಡಿನ ಗೋಳಾಟವನ್ನು.


ಎಷ್ಟುಕಾಲ ಪ್ರಭು, ನೀ ಎನ್ನ ಪೂರ್ತಿ ಮರೆತಿರುವೆ? I ಇನ್ನೆಷ್ಟರ ತನಕ ನೀನೆನಗೆ ವಿಮುಖನಾಗಿರುವೆ? II


ಯಕೋಬನ ಮನೆತನದವರಿಗೆ ತನ್ನ ಮುಖವನ್ನು ಮರೆಯಿಸಿಕೊಂಡು ಇರುವ ಸ್ವಾಮಿಗಾಗಿ ಕಾದಿರುವೆನು. ಸ್ವಾಮಿಯನ್ನೇ ಎದುರು ನೋಡುತ್ತಿರುವೆನು.


ಪ್ರಭು, ನನ್ನ ತಳ್ಳಿಬಿಟ್ಟೆಯೇಕೆ? I ಮುಖವನು ತಿರುಗಿಸಿಕೊಂಡೆಯೇಕೆ? II


ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು? I ಮರೆತಿರುವೆಯೇಕೆ ನಮ್ಮ ಹಿಂಸೆ ಬಾಧೆಯನು? II


‘ಆದರೂ ನನ್ನಲ್ಲಿ ದೇವರು ತಪ್ಪುಕಂಡುಹಿಡಿಯಬೇಕೆಂದಿದ್ದಾನೆ ನನ್ನನ್ನು ತನ್ನ ಶತ್ರುವೆಂದೇ ಭಾವಿಸಿದ್ದಾನೆ.


ಎಂದೇ ಇಂತೆಂದುಕೊಂಡನು; ಇವರಿಗೆ ವಿಮುಖನಾಗುವೆನು, ಇವರಿಗೊದಗಲಿರುವ ಗತಿಯನು ನೋಡುವೆನು. ಸತ್ಯವರಿತೂ ಅನುಸರಿಸದೆ ಹೋದರು ಈ ವಿದ್ರೋಹ ಮಕ್ಕಳಂತವರು.


ಆದರೂ ಅವನನ್ನು ಶತ್ರುವೆಂದು ಭಾವಿಸದೆ, ಸಹೋದರನಂತೆ ಕಂಡು, ಬುದ್ಧಿಹೇಳಿರಿ.


ನನ್ನಿಂದೇಕೆ ಪ್ರಭು, ಅಷ್ಟು ದೂರವಿರುವೆ? I ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? II


ನನ್ನ ಕರೆಗೆ ಕಿವಿಗೊಡುವನೊಬ್ಬನು ಈಗಿದ್ದರೆ ಲೇಸಾಗಿರುತ್ತಿತ್ತು (ಇಗೋ ನೋಡಿ, ನನ್ನ ಕೈರುಜು; ನನಗುತ್ತರಕೊಡಲಿ ಸರ್ವಶಕ್ತನು;) ಬರೆದುಕೊಡಲಿ ವಿರೋಧಿ ನನ್ನ ಆಪಾದನಾ ಪತ್ರವನು.


ನನಗೆ ನೀನು ಕ್ರೂರನಾಗಿಬಿಟ್ಟಿರುವೆ ನಿನ್ನ ಭುಜಬಲದಿಂದ ಹಿಂಸಿಸುತ್ತಿರುವೆ.


ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ ನನ್ನ ವೈರಿ ನನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ.


ನಾನು ದೇವರಿಗೆ ಇಂತೆನ್ನುವೆ: ‘ನನ್ನನ್ನು ನಿರ್ಣಯಿಸಬೇಡ ಅಪರಾಧಿಯೆಂದು ನನ್ನ ಮೇಲೆ ನಿನಗಿರುವ ಆಪಾದನೆಯನು ತಿಳಿಸಿಬಿಡು.


ಆಗ ಸಮುವೇಲನು, “ಸರ್ವೇಶ್ವರ ನಿನ್ನನ್ನು ಕೈಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವುದೇಕೆ?


ದೇವರಂತೆ ನೀವೂ ನನ್ನನು ದಂಡಿಸುವುದೇಕೆ? ನನ್ನನ್ನು ಛಿನ್ನಪನ್ನವಾಗಿಸಿದ್ದೀರಿ, ಇದು ಸಾಲದೆ ನಿಮಗೆ?


ನಾನು ತಲೆಯೆತ್ತಿದರೆ ಬೇಟೆಯಾಡುವೆ ನನ್ನನ್ನು ಸಿಂಹದಂತೆ ಮತ್ತೆ ನಿನ್ನ ಶಕ್ತಿ ಸಾಮರ್ಥ್ಯವನ್ನು ನನ್ನ ಮೇಲೆ ಪ್ರಯೋಗಿಸುವೆ.


ನನಗೆ ವಿರುದ್ಧ ಹೊಸ ಹೊಸ ಸಾಕ್ಷಿಗಳನ್ನು ಬರಮಾಡುವೆ ನನ್ನ ಮೇಲೆ ಹೆಚ್ಚುಹೆಚ್ಚಾಗಿ ಸಿಟ್ಟುಗೊಳ್ಳುವೆ ಅಲೆಅಲೆಯಾಗಿ ಹಗೆಗಳನ್ನು ನನ್ನ ಮೇಲೆ ಧಾಳಿಮಾಡ ಬಿಡುವೆ.


ಮಣ್ಣುಪಾಲಾಗಿದೆ ನಮ್ಮ ಪ್ರಾಣ I ನೆಲ ಕಚ್ಚಿಕೊಂಡಿದೆ ನಮ್ಮ ದೇಹ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು