Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 11:10 - ಕನ್ನಡ ಸತ್ಯವೇದವು C.L. Bible (BSI)

10 ಆತ ಹಾದುಹೋದರೂ ಸೆರೆಹಿಡಿದರೂ ನ್ಯಾಯಾಲಯಕ್ಕೆ ಎಳೆದರೂ ತಡೆವರಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆತನು ಹಾದುಹೋದರೂ, ಸೆರೆಯಲ್ಲಿಟ್ಟರೂ, ನ್ಯಾಯವಿಚಾರಣೆಗೆ ಕರೆದರೂ ಆತನನ್ನು ತಳ್ಳಿಬಿಡುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆತನು ಹಾದುಹೋದರೂ ಸೆರೆಯಲ್ಲಿಟ್ಟರೂ ನ್ಯಾಯವಿಚಾರಣೆಗೆ ಕರೆದರೂ ಆತನನ್ನು ತಳ್ಳಿಬಿಡುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 “ದೇವರು ನಿನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಎಳೆದುಕೊಂಡು ಬರುವುದಾದರೆ ಆತನನ್ನು ತಡೆಯಬಲ್ಲವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 “ದೇವರು ಬಂದು ನಿನ್ನನ್ನು ಸೆರೆಮನೆಯಲ್ಲಿಟ್ಟರೂ, ನ್ಯಾಯವಿಚಾರಣೆಗೆ ಕರೆದರೂ, ದೇವರನ್ನು ತಡೆಯುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 11:10
13 ತಿಳಿವುಗಳ ಹೋಲಿಕೆ  

“ಫಿಲದೆಲ್ಫಿಯದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ : ಸತ್ಯವಂತನೂ ಪರಿಶುದ್ಧನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಮನೆತನದ ಬೀಗದ ಕೈ ನನ್ನಲ್ಲಿ ಇದೆ. ನಾನು ಬಾಗಿಲನ್ನು ತೆರೆದರೆ ಬೇರೆ ಯಾರೂ ಅದನ್ನು ಮುಚ್ಚಲಾಗದು. ನಾನು ಬಾಗಿಲನ್ನು ಮುಚ್ಚಿದರೆ ಬೇರೆ ಯಾರೂ ಅದನ್ನು ತೆರೆಯಲಾಗದು. ಈಗ ನಾನು ನಿನಗೆ ಹೇಳುವುದೇನೆಂದರೆ :


ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು ಆತ ಸೆರೆಹಿಡಿದವರನ್ನು ಯಾರಿಂದಲೂ ಬಿಡಿಸಲಾಗದು.


ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.


ಕೇಳಿ, ಇದನ್ನು ಮೊದಲು ತಿಳಿಸಿದವನು ನಾನೇ ಸಿಯೋನಿಗೆ; ಶುಭಸಂದೇಶಕ ದೂತನನ್ನು ಕಳುಹಿಸಿದವನು ನಾನೇ ಜೆರುಸಲೇಮಿಗೆ.


ವಿರೋಧಿಗಳ ವಶಕ್ಕೆ ಎನ್ನನು ನೀ ಬಿಟ್ಟುಬಿಡಲಿಲ್ಲ I ನಿರಾತಂಕದೆಡೆಯಲಿ ನನ್ನ ನಿಲ್ಲಿಸಿದೆಯಲ್ಲಾ II


“ಭೂಗರ್ಭವನ್ನು ಭೇದಿಸಿಕೊಂಡು ಬಂದ ಸಮುದ್ರವನು ದ್ವಾರಗಳಿಂದ ಬಂಧಿಸಿ ಮುಚ್ಚಿದವನಾರು?


ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?


ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.


ಗಾಯಮಾಡುವವನೂ ಗಾಯಕಟ್ಟುವವನೂ ದೇವರೇ ಹೊಡೆಯುವುದೂ, ಗುಣಪಡಿಸುವುದೂ ಆತನ ಕೈಯೇ.


ಒಬ್ಬನಿಂದ ಸಾವಿರ ಮಂದಿ ಸೋತುಹೋದುದು’ ಒಬ್ಬರಿಗಂಜಿ ಹತ್ತುಸಾವಿರ ಓಡಿಹೋದುದು, ಅವರ ಪೊರೆಬಂಡೆಯಾತ ಅವರನು ವೈರಿಗೊಪ್ಪಿಸಿದ್ದರಿಂದಲ್ಲವೆ? ಅವರ ಸರ್ವೇಶ್ವರನು ಅವರನು ಕೈಬಿಟ್ಟುದರಿಂದಲ್ಲವೆ?


ಅದು ಭೂಮಿಗಿಂತಲು ಉದ್ದ ಸಮುದ್ರಕ್ಕಿಂತಲು ಅಗಲ.


ವ್ಯರ್ಥಗೊಳಿಸುವವರಾರು ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯ ಯೋಜನೆಯನು? ಹಿಂತೆಗೆವವರಾರು ಅವರೆತ್ತಿದ ಕೈಯನು?.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು