Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 10:21 - ಕನ್ನಡ ಸತ್ಯವೇದವು C.L. Bible (BSI)

21 ಮರಳಿ ಹಿಂದಿರುಗಲಾಗದ ನಾಡನು ನಾನು ಸೇರಲಿರುವೆ ಅಂಧಕಾರವೂ ಗಾಢಾಂಧಕಾರವೂ ಅಲ್ಲಿ ತುಂಬಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ನಾನು ಅಂಧಕಾರದಿಂದಲೂ, ಮರಣಾಂಧಕಾರದಿಂದಲೂ ತುಂಬಿದ ದೇಶಕ್ಕೆ ಹೋಗುವುದರೊಳಗೆ ಸ್ವಲ್ಪ ಹರ್ಷಗೊಳ್ಳಲು ಅವಕಾಶವಾಗಲಿ. ಆ ದೇಶದಿಂದ ತಿರುಗಿ ಬರಲಾರೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನಾನು ಅಂಧಕಾರದಿಂದಲೂ ಮರಣಾಂಧಕಾರದಿಂದಲೂ ತುಂಬಿದ ದೇಶಕ್ಕೆ ಹೋಗುವದರೊಳಗೆ ಸ್ವಲ್ಪ ಹರ್ಷಗೊಳ್ಳಲು ಅವಕಾಶವಾಗಲಿ. ಆ ದೇಶದಿಂದ ತಿರಿಗಿ ಬರಲಾರೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಯಾರೂ ಮರಳಿ ಬರಲಾಗದಂಥ ಕತ್ತಲೆಯ ಸ್ಥಳಕ್ಕೂ ಮರಣಾಂಧಕಾರದ ಸ್ಥಳಕ್ಕೂ ಹೋಗುವ ಮೊದಲೇ ನನಗಿರುವ ಅಲ್ಪಕಾಲವನ್ನು ಆನಂದಿಸಲು ಅವಕಾಶಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ನಾನು ಹಿಂದಿರುಗಲಾಗದ ಮಬ್ಬಾಗಿರುವ ಕತ್ತಲೆಯ ದೇಶಕ್ಕೆ ಸೇರಲಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 10:21
21 ತಿಳಿವುಗಳ ಹೋಲಿಕೆ  

ಕಾರ್ಮೋಡಗಳು ಅದನ್ನು ಕವಿಯಲಿ ಇರುಳೂ ಮರಣದ ನೆರಳೂ ಅದನ್ನು ಆಕ್ರಮಿಸಲಿ ಹಗಲನ್ನೇ ಮಬ್ಬಾಗಿಸುವ ಮುಸುಕು ಅದನ್ನು ಹೆದರಿಸಲಿ.


ಈಗ ಸತ್ತಿದ್ದಾನೆ ಅಲ್ಲವೆ? ನಾನೇಕೆ ಉಪವಾಸ ಮಾಡಬೇಕು? ಅವನನ್ನು ಹಿಂದಕ್ಕೆ ತರಲು ನನ್ನಿಂದಾದೀತೇ? ನಾನಾಗಿ ಅವನ ಬಳಿಗೆ ಹೋಗಬೇಕೇ ಹೊರತು ಅವನು ನನ್ನ ಬಳಿಗೆ ಬರುವುದಿಲ್ಲ,” ಎಂದು ಉತ್ತರಕೊಟ್ಟನು.


ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ I ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ I ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ II


ನನ್ನ ವರ್ಷಗಳು ಕಳೆದುಹೋಗುತ್ತಿವೆ ಹಿಂತಿರುಗಲಾಗದ ಹಾದಿಯನು ನಾನು ಹಿಡಿಯಲಿರುವೆ.


ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನಂತೆ ಇದ್ದೇವೆ ನಾವು. ಮನುಷ್ಯರ ಪ್ರಾಣತೆಗೆಯುವುದಕ್ಕೆ ದೇವರಿಗೆ ಇಷ್ಟ ಇಲ್ಲ; ಹೊರದೂಡಲಾದವನು ತಿರುಗಿ ಬಳಿಗೆ ಬರುವ ಹಾಗೆ ಅವರು ಸದುಪಾಯಗಳನ್ನು ಕಲ್ಪಿಸುವವರಾಗಿರುತ್ತಾರೆ.


ಅವರು - ‘ನಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿ, ಕಾಡುಮೇಡು, ಹಳ್ಳಕೊಳ್ಳ, ಕಗ್ಗತ್ತಲು, ನಿರ್ಜಲ, ನಿರ್ಜನ ಹಾಗೂ ಯಾರೂ ಹಾದುಹೋಗದ ಬೆಂಗಾಡಿನ ಮಾರ್ಗವಾಗಿ ನಡೆಸಿಬಂದ ಆ ಸರ್ವೇಶ್ವರ ಎಲ್ಲಿ?’ ಎಂದುಕೊಳ್ಳಲಿಲ್ಲವೆ?


ಜೀವಲೋಕದಲ್ಲಿ ಇನ್ನು ದೇವನನ್ನು ಕಾಣೆನೆಂದುಕೊಂಡೆ ಭೂಲೋಕನಿವಾಸಿಗಳಲ್ಲಿ ಒಬ್ಬನನ್ನೂ ನೋಡಲಾರೆನೆಂದುಕೊಂಡೆ.


ದಬ್ಬಿರುವೆ ನೀನೆನ್ನನು ಅಧೋಲೋಕಕೆ I ಅಗಾಧಸ್ಥಳಕೆ, ಗಾಢ ಅಂಧಕಾರಕೆ II


ಆಗ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ ಕಣ್ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆ.


ಕಾರ್ಗತ್ತಲೂ ಗಾಢಾಂಧಕಾರವೂ ಅಲ್ಲಿವೆ ಅರಾಜಕತೆಯೂ ಕಾರಿರುಳೂ ಅದನು ಆವರಿಸಿವೆ ಬೆಳಕೇ ಕಾರಿರುಳಾಗಿ ಆ ನಾಡನ್ನು ಕವಿದಿದೆ.”


ಆತನ ದೃಷ್ಟಿಯಿಂದ ದುರುಳರು ಅಡಗಿಕೊಳ್ಳುವಂತಿಲ್ಲ ಅಂಥವರನ್ನು ಅಡಗಿಸಬಲ್ಲ ಇರುಳಿಲ್ಲ ಕಾರಿರುಳೂ ಇಲ್ಲ.


ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ?


ನಾ ಕಾಲವಾಗಿ ಕಣ್ಮರೆಯಾಗುವೆ ಇಲ್ಲಿಂದ I ಆ ಮುನ್ನ ಹೊರಳಿಸು ಕೋಪದೃಷ್ಟಿಯನು ನನ್ನಿಂದ I ನಾ ಬಾಳುವಂತೆ ಮಾಡು ಪ್ರಭು, ಸಂತಸದಿಂದ II


ಪಾತಾಳವನ್ನೇ ನನ್ನ ಮನೆಯೆಂದು ನಾನು ಭಾವಿಸಿದೆನಾದರೆ ಕತ್ತಲಲ್ಲೇ ನನ್ನ ಹಾಸಿಗೆಯನ್ನು ಹಾಕಿಕೊಂಡೆನಾದರೆ,


ನೆಲೆಯಾಗಿರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II


ನಾನಾದರೋ ಪ್ರಭೂ, ಮೊರೆಯಿಡುವೆ ನಿನಗೆ I ಉದಯದಲೆ ಸೇರುವುದೆನ್ನ ಜಪ ನಿನ್ನ ಸನ್ನಿಧಿಗೆ II


ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲ ಪೂರ್ಣಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿಕ್ಕಿರುವ ಪಾತಾಳದಲ್ಲಿ ಯಾವ ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.


ಯುವಕನೇ, ಯೌವನದಲ್ಲಿ ಆನಂದಿಸು. ಯೌವನ ದಿನಗಳಲ್ಲಿ ಹೃತ್ಪೂರ್ವಕವಾಗಿ ಸಂತೋಷಿಸು. ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೊ. ಆದರೆ ಈ ಎಲ್ಲ ವಿಷಯಗಳಲ್ಲಿ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವರೆಂಬುದನ್ನು ಮನದಲ್ಲಿಡು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು