Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 10:15 - ಕನ್ನಡ ಸತ್ಯವೇದವು C.L. Bible (BSI)

15 ನಾನು ದುರ್ಮಾರ್ಗಿಯಾದರಂತೂ ನನಗಿಲ್ಲ ಗತಿ ಸನ್ಮಾರ್ಗಿಯಾದರೂ ಕೂಡ ನಡೆವಂತಿಲ್ಲ ತಲೆಯೆತ್ತಿ ಏಕೆಂದರೆ ನಾಚಿ ನಿಂತಿರುವೆ, ಯಾತನೆಯ ಹೊರೆಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅಯ್ಯೋ, ನಾನು ದುರ್ಮಾರ್ಗಿಯಾದರೆ ನನಗೇನು ಗತಿ! ನಾನು ಸನ್ಮಾರ್ಗಿಯಾದರೂ, ನನ್ನ ಶ್ರಮೆಗಳನ್ನು ನೋಡುತ್ತಾ ಅವಮಾನಭರಿತನಾಗಿ ತಲೆಯೆತ್ತಲಾರೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅಯ್ಯೋ, ನಾನು ದುರ್ಮಾರ್ಗಿಯಾದರಂತು ನನಗೇನು ಗತಿ! ನಾನು ಸನ್ಮಾರ್ಗಿಯಾದರೂ ನನ್ನ ಶ್ರಮೆಗಳನ್ನು ನೋಡುತ್ತಾ ಅಪಮಾನಭರಿತನಾಗಿ ತಲೆಯೆತ್ತಲಾರೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಾನು ದೋಷಿಯಾಗಿದ್ದರೆ, ನನ್ನ ಗತಿಯನ್ನು ಏನು ಹೇಳಲಿ? ನಾನು ಸನ್ಮಾರ್ಗಿಯಾಗಿದ್ದರೂ ನನ್ನ ಶ್ರಮೆಗಳನ್ನು ನೋಡುತ್ತಾ ಅವಮಾನದಿಂದ ನನ್ನ ತಲೆಯೆತ್ತಲಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಾನು ಅಪರಾಧಿಯಾಗಿದ್ದರೆ ನನಗೆ ಕಷ್ಟ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತಲಾರೆ; ಏಕೆಂದರೆ, ನಾಚಿಕೆಯಿಂದ ನಾನು ತುಂಬಿದ್ದೇನೆ, ನಾನು ಬಾಧೆಯಿಂದ ಮುಳುಗಿಹೋಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 10:15
23 ತಿಳಿವುಗಳ ಹೋಲಿಕೆ  

ದುರ್ಜನರಿಗೆ ಧಿಕ್ಕಾರ! ಅವರ ಕೃತ್ಯಗಳಿಗೆ ಕಹಿಫಲ ದೊರಕುತ್ತದೆ.


ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.


ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ.


ನೋಡೆನ್ನ ಬಾಧೆ ಬವಣೆಗಳನು I ತೊಡೆದು ಹಾಕೆನ್ನ ಪಾಪಗಳನು II


ನಾನು ಅಪರಾಧಿಯಲ್ಲವೆಂದು ತಿಳಿದಿದೆಯಲ್ಲವೆ? ನಿನ್ನ ಕೈಯಿಂದ ಬಿಡಿಸಬಲ್ಲವರಾರೂ ಇಲ್ಲವಲ್ಲವೆ?


ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.


“ಹೇ, ಸರ್ವೇಶ್ವರಾ, ಕಟಾಕ್ಷಿಸು; ನಾ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವೆ. ಕರುಳು ಕುದಿಯುತ್ತಿದೆ, ಹೃದಯ ವಿಮುಖವಾಗಿದೆ ನಾ ಗೈದ ದ್ರೋಹಕ್ಕೆ, ಕತ್ತಿಗೆ ತುತ್ತಾಗುತ್ತಿರುವೆ ಹೊರಗೆ ಪ್ರಾಣಸಂಕಟಕ್ಕೆ ಗುರಿಯಾಗಿರುವೆ ಒಳಗೆ.


ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ !” ಎಂದು ಕೂಗಿಕೊಂಡೆನು.


ನನ್ನ ಕಷ್ಟವ ನೋಡಿ ಮುಕ್ತಗೊಳಿಸೆನ್ನನು I ಮರೆತಿಲ್ಲ ನಾನು ನಿನ್ನ ಧರ್ಮಶಾಸ್ತ್ರವನು II


ಕೆಳ ಪಾತಾಳವೊಂದೇ ಗತಿ ದುಷ್ಟರಿಗೆ I ದೇವರನು ಕೈಬಿಟ್ಟಾ ರಾಷ್ಟ್ರಗಳಿಗೆ II


ನನ್ನ ಹಗೆಗೆ ದುಷ್ಟತನ ಗತಿಯಾಗಲಿ ಅನೀತಿವಂತನ ಪಾಡು ನನ್ನ ವಿರೋಧಿಗೆ ಒದಗಲಿ.


ಈ ಕಾರಣ ಆತನ ಸನ್ನಿಧಿಯಲಿ ನಾನು ಅಂಜುಬುರುಕ ಇದನ್ನು ನೆನೆದು ಮನದಲಿ ನಾನು ಭಯಪೀಡಿತ.


ಇದನು ನೆನೆದಾಗ ನನಗೆ ತಲ್ಲಣವಾಗುತ್ತದೆ ನನ್ನ ದೇಹಕ್ಕೆ ನಡುಕ ಬರುತ್ತದೆ:


ಅಪರಾಧಿಯೆಂದೇ ನನಗೆ ನಿರ್ಣಯವಾಗಬೇಕಿದ್ದಲ್ಲಿ ನಾನೇಕೆ ಪ್ರಯಾಸಪಡಬೇಕು ವ್ಯರ್ಥವಾಗಿ?


ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು?


ಆಗ ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ.


ದಯಮಾಡಿ ಮತ್ತೆ ಆಲೋಚಿಸಿರಿ ಅನ್ಯಾಯವಾಗದಂತೆ ಮರಳಿ ವಿಮರ್ಶಿಸಿರಿ ನನ್ನ ಸತ್ಯತೆ ತಿಳಿಯುವಂತೆ.


ಕವಿಯಲಿ ಅವಮಾನ ನಿಂದೆ ಇವರ ಮುಖವನು I ಅರಸುವರಾಗ ಪ್ರಭೂ, ನಿನ್ನ ಸಿರಿನಾಮವನು II


ದೂಷಕರ ನಿಂದೆಗೆ ಆಸ್ಪದನಾದೆ I ದ್ರೋಹಿಗಳ ವಕ್ರನೋಟಕೆ ಗುರಿಯಾದೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು