ಯೋನನು 2:7 - ಕನ್ನಡ ಸತ್ಯವೇದವು C.L. Bible (BSI)7 ನಂದಿದಂತಾಗಲು ಎನ್ನ ಪ್ರಾಣ ದೀವಿಗೆ ಮೊರೆಯಿಟ್ಟೆ, ಸರ್ವೇಶ್ವರಾ, ನಾ ನಿನಗೆ ನಿನ್ನ ಪರಿಶುದ್ಧ ಆಲಯದಲಿ ನೀನಾಸೀನನಿದ್ದೆ ಎನ್ನ ಪ್ರಾರ್ಥನೆಯನು ನೀನಾಲಿಸಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 “ನನ್ನ ಆತ್ಮವು ನನ್ನಲ್ಲಿ ಕುಂದಿಹೋದಾಗ ಯೆಹೋವನಾದ ನಿನ್ನನ್ನು ನೆನಪು ಮಾಡಿಕೊಂಡು ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ಅದು ನಿನ್ನ ಪರಿಶುದ್ಧಾಲಯವನ್ನು ಬಂದು ಸೇರಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನನ್ನ ಆತ್ಮವು ನನ್ನಲ್ಲಿ ಕುಂದಿದಾಗ ಯೆಹೋವನಾದ ನಿನ್ನನ್ನು ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ನಿನ್ನ ಪರಿಶುದ್ಧಾಲಯಕ್ಕೆ ಸೇರಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 “ನನ್ನ ಆತ್ಮಕ್ಕೆ ಯಾವ ನಿರೀಕ್ಷೆಯೂ ಇರಲಿಲ್ಲ. ಆಗ ನಾನು ಯೆಹೋವನನ್ನು ಸ್ಮರಿಸಿದೆನು. ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದೆನು. ನೀನು ನಿನ್ನ ಪವಿತ್ರ ಆಲಯದಿಂದ ನನ್ನ ಪ್ರಾರ್ಥನೆಯನ್ನು ಕೇಳಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 “ನನ್ನ ಪ್ರಾಣವು ನನ್ನಲ್ಲಿ ಕುಂದಿ ಹೋದಾಗ, ಯೆಹೋವ ದೇವರೇ ನಿಮ್ಮನ್ನು ಜ್ಞಾಪಕಮಾಡಿಕೊಂಡೆನು. ನನ್ನ ಪ್ರಾರ್ಥನೆಯು ನಿಮ್ಮ ಬಳಿಗೆ ನಿಮ್ಮ ಪರಿಶುದ್ಧ ಮಂದಿರದೊಳಗೆ ಬಂದಿತು. ಅಧ್ಯಾಯವನ್ನು ನೋಡಿ |