Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋನನು 1:3 - ಕನ್ನಡ ಸತ್ಯವೇದವು C.L. Bible (BSI)

3 ಆದರೆ ಯೋನನು ಆ ಸ್ವಾಮಿಯ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನೆವೆಗೆ ಹೋಗುವುದರ ಬದಲು ತಾರ್ಷಿಷಿಗೆ ಅಭಿಮುಖವಾಗಿ ಓಡಿಹೋಗಲು ಹೊರಟನು. ಜೊಪ್ಪ ಎಂಬ ಊರನ್ನು ತಲುಪಿದಾಗ ತಾರ್ಷಿಷಿಗೆ ಹೊರಡಲಿದ್ದ ಹಡಗೊಂದನ್ನು ಕಂಡನು. ಪ್ರಯಾಣದ ದರವನ್ನು ತೆತ್ತು ಸಹನಾವಿಕರೊಂದಿಗೆ ಹಡಗನ್ನು ಹತ್ತಿದನು. ಹೀಗೆ ಯೋನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ದೂರಹೋಗಬಹುದೆಂದು ಭಾವಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆದರೆ ಯೋನನು ಯೆಹೋವನ ಸನ್ನಿಧಿಯಿಂದ ತಪ್ಪಿಸಿಕೊಳ್ಳಲು ತಾರ್ಷೀಷಿಗೆ ಓಡಿಹೋಗಬೇಕೆಂದು ಯೋಚಿಸಿ ಹೊರಟು ಯೊಪ್ಪ ಎಂಬ ಊರಿಗೆ ಬಂದು ಅಲ್ಲಿ ತಾರ್ಷೀಷಿಗೆ ಹೊರಡುವ ಹಡಗನ್ನು ಕಂಡು ಪ್ರಯಾಣದ ದರವನ್ನು ಕೊಟ್ಟು ತಾರ್ಷೀಷಿಗೆ ಪ್ರಯಾಣಮಾಡುತ್ತಿದ್ದ ಹಡಗಿನವರೊಡನೆ ಅದನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆದರೆ ಯೋನನು ಯೆಹೋವನ ಸನ್ನಿಧಿಗೆ ತಪ್ಪಿಸಿಕೊಳ್ಳುವ ಹಾಗೆ ತಾರ್ಷೀಷಿಗೆ ಓಡಿಹೋಗಬೇಕೆಂದು ಹೊರಟು ಯೊಪ್ಪಕ್ಕೆ ಇಳಿದು ಅಲ್ಲಿ ತಾರ್ಷೀಷಿಗೆ ತೆರಳುವ ಹಡಗನ್ನು ಕಂಡು ಬಾಡಿಗೆಕೊಟ್ಟು ಯೆಹೋವನ ಸನ್ನಿಧಿಯಿಂದ ತಾರ್ಷೀಷಿಗೆ ಪ್ರಯಾಣಮಾಡಬೇಕೆಂದು ಹಡಗಿನವರೊಡನೆ ಅದನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೆಹೋವನಿಗೆ ವಿಧೇಯನಾಗಲು ಯೋನನು ಇಷ್ಟಪಡದೆ ಆತನಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿ ಯೊಪ್ಪಕ್ಕೆ ಹೋದನು. ಅಲ್ಲಿ ಬಹುದೂರದ ಪಟ್ಟಣವಾದ ತಾರ್ಷೀಷಿಗೆ ಹೋಗುವ ಹಡಗು ಹೊರಡಲು ಸಿದ್ಧವಾಗಿತ್ತು. ಅವನು ಪ್ರಯಾಣದರವನ್ನು ಕೊಟ್ಟು ಹಡಗನ್ನು ಹತ್ತಿದನು. ಆ ಜನರೊಂದಿಗೆ ತಾರ್ಷೀಷಿಗೆ ಪ್ರಯಾಣಮಾಡಿ ಯೆಹೋವನಿಂದ ದೂರಹೋಗಬೇಕೆಂಬುದೇ ಅವನ ಬಯಕೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆದರೆ ಯೋನನು ಯೆಹೋವ ದೇವರ ಸಮ್ಮುಖದಿಂದ ತಾರ್ಷೀಷಿಗೆ ಓಡಿಹೋಗುವುದಕ್ಕೆ ಎದ್ದು, ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು, ಪ್ರಯಾಣದ ದರವನ್ನು ಕೊಟ್ಟು, ಯೆಹೋವ ದೇವರ ಸಮ್ಮುಖದಿಂದ ತಪ್ಪಿಸಿಕೊಂಡು ಹೋಗಲು, ಪ್ರಯಾಣಮಾಡುತ್ತಿದ್ದ ಹಡಗಿನವರೊಡನೆ ತಾರ್ಷೀಷಿಗೆ ಹೋಗುವುದಕ್ಕೆ ಅದನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋನನು 1:3
35 ತಿಳಿವುಗಳ ಹೋಲಿಕೆ  

ಗತ್ ರಿಮ್ಮೋನ್, ಮೇಯರ್ಕೋನ್, ರಕ್ಕೋನ್, ಮತ್ತು ಜೊಪ್ಪಕ್ಕೆ ಎದುರಿಗಿರುವ ಪ್ರದೇಶವೂ ಇವರಿಗೆ ದೊರಕಿತು.


ಕಾಯಿನನು ಸರ್ವೇಶ್ವರ ಸ್ವಾಮಿಯ ಸಾನ್ನಿಧ್ಯದಿಂದ ಹೊರಟುಹೋಗಿ ಏದೆನ್ ನಾಡಿಗೆ ಪೂರ್ವಕ್ಕಿರುವ “ಅಲೆನಾಡು" ಎಂಬ ನಾಡಿನಲ್ಲಿ ವಾಸಮಾಡಿದನು.


ಜೊಪ್ಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’) ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು.


ಪೇತ್ರನು ಹಲವು ದಿನಗಳನ್ನು ಜೊಪ್ಪದಲ್ಲಿ ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ಕಳೆದನು.


ಆಗ ಅವನು ಹೀಗೆಂದು ಮೊರೆಯಿಟ್ಟನು: “ಸ್ವಾಮೀ, ಈ ರೀತಿ ಸಂಭವಿಸುವುದೆಂದು ನಾನು ಸ್ವದೇಶವನ್ನು ಬಿಡುವ ಮುನ್ನವೇ ನಿಮಗೆ ಹೇಳಿದ್ದೆನಲ್ಲವೆ? ಈ ಕಾರಣದಿಂದಲೇ ಅಲ್ಲವೆ ನಾನು ತಾರ್ಷಿಷಿಗೆ ಓಡಿಹೋಗಲು ಪ್ರತ್ನಿಸಿದ್ದು? ನೀವು ಪ್ರೀತಿಸ್ವರೂಪಿ, ಕರುಣಾಮಯಿ, ಸಹನಾಶೀಲರಾದ ದೇವರು, ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ದೇವರು - ಎಂದು ಆಗಲೇ ನನಗೆ ತಿಳಿದಿತ್ತು.


ಕರಾವಳಿಯ ನಿವಾಸಿಗಳೇ, ಗೋಳಾಡಿರಿ, ಸಮುದ್ರವನ್ನು ದಾಟಿ ತಾರ್ಷೀಷಿಗೆ ಹೋಗಿರಿ.


ಟೈರ್ ನಗರವನ್ನು ಕುರಿತ ದೈವೋಕ್ತಿ : “ಗೋಳಾಡಿರಿ ತಾರ್ಷಿಷಿನ ನಾವಿಕರೆಲ್ಲ, ಹಾಳಾಗಿವೆ ನಿಮ್ಮ ಬಂದರುಗಳೆಲ್ಲ; ಹಡಗುಗಳಿಗೆ ರೇವಿಲ್ಲ, ನೆಲೆಯಿಲ್ಲ, ಸೈಪ್ರಸ್ಸಿನಿಂದ ಬಂದ ನಾವಿಕರಿಂದ ಈ ಸುದ್ದಿ ನಿಮಗೆ ತಿಳಿಯುವುದು.”


ಅವನು ಅದನ್ನು ಕೇಳಿದೊಡನೆ ಪ್ರಾಣರಕ್ಷಣೆಗಾಗಿ ಅಲ್ಲಿಂದ ಹೊರಟು ಜುದೇಯದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬೀಳ್ಕೊಟ್ಟನು.


ಇವರು ಪ್ರಭುವಿನ ಸನ್ನಿಧಿಯಿಂದಲೂ ಅವರ ಪ್ರಭಾವದ ಮಹಿಮೆಯಿಂದಲೂ ಬಹಿಷ್ಕೃತರಾಗಿ, ನಿತ್ಯದಂಡನೆಗೆ ಗುರಿಯಾಗುವರು.


ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ!


“ಇಂತಿರಲು, ಅಗ್ರಿಪ್ಪ ರಾಜರೇ, ನನಗೆ ಲಭಿಸಿದ ಈ ಸ್ವರ್ಗೀಯ ದರ್ಶನಕ್ಕೆ ಅವಿಧೇಯನಾಗಿ ನಡೆಯಲು ನನ್ನಿಂದಾಗಲಿಲ್ಲ.


ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದುದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.


ತಾರ್ಷೀಷ್ ನಗರವೇ, ನೈಲ್ ನದಿಯಂತೆ ನಿನ್ನ ನಾಡನ್ನು ಕೃಷಿಮಾಡು. ನಿನಗೆ ಬಂದರು ಇಲ್ಲವೇ ಇಲ್ಲ.


ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ,” ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರರ ಸನ್ನಿಧಾನದಿಂದ ಹೊರಟುಹೋದನು.


ನಾವಾದರೋ ತಮಗೆ ಬೇಕಾದ ಎಲ್ಲಾ ಮರಗಳನ್ನು ಲೆಬನೋನಿನಲ್ಲಿ ಕಡಿದು, ತೆಪ್ಪಗಳಾಗಿ ಕಟ್ಟಿ, ಸಮುದ್ರಮಾರ್ಗವಾಗಿ ಜೊಪ್ಪಕ್ಕೆ ಕಳುಹಿಸುವೆವು; ಅಲ್ಲಿಂದ ನೀವು ಅವುಗಳನ್ನು ಜೆರುಸಲೇಮಿಗೆ ತರಿಸಿಕೊಳ್ಳಬಹುದು,” ಎಂದು ಉತ್ತರಕೊಟ್ಟನು.


ಆದರೆ ಪಾಂಫೀಲಿಯದಲ್ಲಿ ಇದ್ದಾಗ ಧರ್ಮಪ್ರಚಾರ ಕಾರ್ಯದಲ್ಲಿ ಸಹಕರಿಸದೆ ತಮ್ಮನ್ನು ಬಿಟ್ಟಗಲಿದ ಅವನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಉಚಿತವಲ್ಲವೆಂಬುದು ಪೌಲನ ಅಭಿಪ್ರಾಯ.


ಯೇಸು ಅವನನ್ನು ನೋಡಿ, “ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,” ಎಂದರು.


ದೇವರಾತ್ಮ ನನ್ನನ್ನು ಎತ್ತಿಕೊಂಡುಹೋಯಿತು. ಸರ್ವೇಶ್ವರನ ಹಸ್ತಸ್ಪರ್ಶದಿಂದ ನಾನು ಅತಿ ಪರವಶನಾಗಿದ್ದು ವ್ಯಥೆಗೊಳ್ಳುತ್ತಾ ಮನಸ್ತಾಪಪಡುತ್ತಾ ಮುನ್ನಡೆದೆ.


ನಿರೀಕ್ಷಿಸುತ್ತಿಹರು ನನ್ನನು ದೂರದ ನಿವಾಸಿಗಳು ಮುಂದಾಗಿ ಬರುತಿಹವು ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಸರ್ವೇಶ್ವರನ ಶ್ರೀನಾಮ ನಿಧಿಯಾದ ಇಲ್ಲಿಗೆ; ನಿನ್ನ ಘನಪಡಿಸಿದ ಇಸ್ರಯೇಲಿನ ಪರಮಪಾವನನ ಸನ್ನಿಧಿಗೆ. ಹೊತ್ತು ತರುತಿಹರು ನಿನ್ನ ಮಕ್ಕಳನು ಜೊತೆಗೆ ಅವರ ಬೆಳ್ಳಿಬಂಗಾರಗಳನು.


ಎಲ್ಲಾ ದೊಡ್ಡ ದೊಡ್ಡ ಹಡಗುಗಳಿಗೆ, ಎಲ್ಲಾ ಸುಂದರವಾದ ನೌಕೆಗಳಿಗೆ, ಆ ದಿನವು ತಪ್ಪದೆ ಬರುವುದು.


ಸೈತಾನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ಹೊರಟುಬಂದ. ಯೋಬನ ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ಕೆಟ್ಟಕುರುಗಳು ಹುಟ್ಟುವಂತೆ ಮಾಡಿ ಆತನನ್ನು ಬಾಧಿಸಿದ.


ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಆಗ ಅವನಿಗೆ ಸರ್ವೇಶ್ವರನಿಂದ, “ಎಲೀಯನೇ, ಇಲ್ಲೇನು ಮಾಡುತ್ತಿರುವೆ?” ಎಂಬ ವಾಣಿ ಕೇಳಿಸಿತು.


ಅಂದು, ಸಂಜೆಯ ತಂಗಾಳಿಯಲ್ಲಿ, ಸರ್ವೇಶ್ವರನಾದ ದೇವರು ತೋಟದೊಳಗೆ ಸಂಚರಿಸುವ ಸಪ್ಪಳವು ಕೇಳಿಸಿತು. ಅವರಿಗೆ ಕಾಣಿಸಿಕೊಳ್ಳಬಾರದೆಂದು ಆದಾಮನೂ ಹವ್ವಳೂ ಹಿಂದೆ ಅವಿತುಕೊಂಡರು.


ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ,” ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು.


ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು.


ಆದರೆ ಪರ್ಷಿಯ ರಾಜನಾದ ಸೈರಸನಿಂದ ಪಡೆದುಕೊಂಡ ಅಪ್ಪಣೆಯ ಮೇರೆಗೆ ಜನರು ಕಲ್ಲುಕುಟಿಗನಿಗೆ ಹಾಗು ಬಡಗಿಗೆ ಹಣವನ್ನು ಕೊಟ್ಟಿದ್ದರು. ಅಂತೆಯೇ ಲೆಬನೋನಿನಿಂದ ಸಮುದ್ರ ಮಾರ್ಗವಾಗಿ, ಜೊಪ್ಪಕ್ಕೆ ದೇವದಾರು ಮರಗಳನ್ನು ತರತಕ್ಕ ಸಿದೋನ್ಯರಿಗೆ ಹಾಗು ಟೈರಿನವರಿಗೆ ಅನ್ನಪಾನಗಳನ್ನೂ ಎಣ್ಣೆಯನ್ನೂ ಕೊಟ್ಟಿದ್ದರು.


ಹಡಗನು ಹತ್ತಿ ಕಡಲನು ದಾಟಿದರು I ಸಾಗರ ಹಾಯ್ದು‍ವ್ಯಾಪಾರ ಗೈದರು II


ಆ ಬೊಂಬೆಗಳ ಭೂಷಣಕ್ಕಾಗಿ ಸಾಗಿಬರುತ್ತವೆ ತಾರ್ಷೀಷಿನಿಂದ ಬೆಳ್ಳೀತಗಡುಗಳು, ಊಫಜಿನಿಂದ ಚಿನ್ನ. ಅವು ಕೆತ್ತನೆಗಾರನ, ಎರಕದವನ ಕೈಕೆಲಸಗಳು ಅವುಗಳ ಉಡುಪು ನೀಲಧೂಮ್ರ ವರ್ಣದ ವಸ್ತ್ರಗಳು. ಇವೆಲ್ಲವು ಕೇವಲ ಕಲಾಕುಶಲರ ಕೌಶಲ್ಯಗಳು.


ಅಲ್ಲದೆ ತಾನು ಆ ಸ್ವಾಮಿಯ ಸನ್ನಿಧಿಯಿಂದ ಓಡಿಹೋಗುತ್ತಿರುವುದಾಗಿಯೂ ತಿಳಿಸಿದನು. ಇದನ್ನು ಕೇಳಿದ್ದೇ ನಾವಿಕರು ಭಯಭ್ರಾಂತರಾದರು. “ಎಂಥಾ ತಪ್ಪುಮಾಡಿದೆ!” ಎಂದು ಅವನನ್ನು ಖಂಡಿಸಿದರು.


ಈಗ ನನ್ನ ಒಡೆಯರಾದ ತಾವು ಮಾತುಕೊಟ್ಟ ಮೇರೆಗೆ ಗೋದಿ, ಜವೆಗೋದಿ, ಎಣ್ಣೆ, ದ್ರಾಕ್ಷಾರಸ ಇವುಗಳನ್ನು ತನ್ನ ಸೇವಕರಿಗೆ ಕಳುಹಿಸಬೇಕು.


ಅರಸನ ಹಡಗುಗಳು ಹೂರಾಮನ ನಾವಿಕರ ಜೊತೆಯಲ್ಲಿ ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ಕಪಿ, ನವಿಲು ಇವುಗಳನ್ನು ತರುತ್ತಿದ್ದವು.


“ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು: ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿತೆರೆದು ತಿಂದುಬಿಡು,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು