Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 8:1 - ಕನ್ನಡ ಸತ್ಯವೇದವು C.L. Bible (BSI)

1 ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ಅಂಜಬೇಡ, ಕಳವಳಗೊಳ್ಳಬೇಡ; ಯೋಧರೆಲ್ಲರನ್ನು ನಿನ್ನೊಡನೆ ಕರೆದುಕೊಂಡು ಆಯಿಗೆ ಹೋಗು. ಆಯಿ ಎಂಬ ಊರಿನ ರಾಜ, ಪ್ರಜೆ, ನಗರ, ನಾಡು ಇವೆಲ್ಲವನ್ನು ನಿನಗೆ ಕೊಟ್ಟಿದ್ದೇನೆ, ಹೋಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅನಂತರ ಯೆಹೋವನು ಯೆಹೋಶುವನಿಗೆ “ಅಂಜಬೇಡ, ಕಳವಳಗೊಳ್ಳಬೇಡ; ಎದ್ದು ಭಟರೆಲ್ಲರನ್ನೂ ಕರೆದುಕೊಂಡು ಆಯಿ ಪಟ್ಟಣಕ್ಕೆ ಹೋಗು. ನೋಡು, ಆಯಿ ಎಂಬ ಊರಿನ ಅರಸ, ಪ್ರಜೆ, ನಗರ, ಸೀಮೆ ಇವುಗಳನ್ನೆಲ್ಲಾ ನಿನಗೆ ಕೊಟ್ಟಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅನಂತರ ಯೆಹೋವನು ಯೆಹೋಶುವನಿಗೆ - ಅಂಜಬೇಡ, ಕಳವಳಗೊಳ್ಳಬೇಡ; ಎದ್ದು ಭಟರೆಲ್ಲರನ್ನೂ ತೆಗೆದುಕೊಂಡು ಆಯಿಗೆ ಹೋಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಆಗ ಯೆಹೋವನು ಯೆಹೋಶುವನಿಗೆ, “ಭಯಪಡಬೇಡ, ನಿರಾಶೆಗೊಳ್ಳಬೇಡ. ನಿಮ್ಮ ಎಲ್ಲ ಯೋಧರನ್ನು ‘ಆಯಿ’ಗೆ ತೆಗೆದುಕೊಂಡು ಹೋಗು. ‘ಆಯಿ’ಯ ಅರಸನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ. ನಾನು ನಿನಗೆ ಅವನ ಜನರನ್ನು, ಅವನ ಪಟ್ಟಣವನ್ನು ಮತ್ತು ಅವನ ಪ್ರದೇಶವನ್ನು ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆಗ ಯೆಹೋವ ದೇವರು ಯೆಹೋಶುವನಿಗೆ, “ಭಯಪಡಬೇಡ, ನಿರುತ್ಸಾಹಗೊಳ್ಳಬೇಡ, ನೀನು ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಎದ್ದು ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗು. ನೋಡು, ನಾನು ಆಯಿ ಎಂಬ ಪಟ್ಟಣದ ಅರಸನನ್ನೂ ಅವನ ಜನರನ್ನೂ ಅವನ ಪಟ್ಟಣವನ್ನೂ ಅವನ ಸೀಮೆಯನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 8:1
24 ತಿಳಿವುಗಳ ಹೋಲಿಕೆ  

ನಾನು ನಿನಗೆ ಆಜ್ಞಾಪಿಸಿದಂತೆ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವ ಎಡೆಗಳಲ್ಲೆಲ್ಲ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನ್ನ ಸಂಗಡ ಇರುತ್ತೇನೆ,” ಎಂದು ಹೇಳಿದರು.


ಅವರಿಗೆ ಹೆದರಬೇಡಿ. ನಿಮ್ಮ ದೇವರಾದ ಸರ್ವೇಶ್ವರ ಫರೋಹನಿಗೂ ಈಜಿಪ್ಟರೆಲ್ಲರಿಗೂ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿ.


ನಿಮ್ಮ ದೇವರಾದ ಸರ್ವೇಶ್ವರ ಆ ನಾಡನ್ನು ನಿಮಗೇ ಕೊಟ್ಟಿದ್ದಾರೆ; ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ಹೇಳಿದಂತೆ ಅದನ್ನು ಏರಿ ಸ್ವಾಧೀನಮಾಡಿಕೊಳ್ಳಿ; ನೀವು ದಿಗಿಲುಪಡದೆ ಧೈರ್ಯವಾಗಿಯೇ ಇರಬೇಕು,’ ಎಂದು ಹೇಳಿದೆ.


ಆಗ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೋಡು, ನಾನು ಜೆರಿಕೋವನ್ನು, ಅದರ ಅರಸನನ್ನು ಹಾಗು ಅದರ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ.


ಸರ್ವೇಶ್ವರ ತಾವೇ ನಿನ್ನ ಮುಂದುಗಡೆ ಹೋಗುವರು; ಅವರೇ ನಿನ್ನ ಸಂಗಡ ಇರುವರು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ. ಅಂಜಬೇಡ; ಧೈರ್ಯದಿಂದಿರು,” ಎಂದು ಹೇಳಿದನು.


ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ ಮುಳುಗಿಸದು ನದಿ ನೀ ಅದನ್ನು ಹಾದುಹೋಗುವಾಗ ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆಯುವಾಗ.


ಅದಕ್ಕೆ ಯೇಸು, “ಅಲ್ಪವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?” ಎಂದರು. ಅನಂತರ ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು.


ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.


ತಾವು ಮಾನವ ಸಮಾಜದಿಂದ ಬಹಿಷ್ಕೃತರಾಗುವಿರಿ. ಕಾಡುಮೃಗಗಳ ನಡುವೆ ವಾಸಮಾಡುವಿರಿ. ದನಕರುಗಳಂತೆ ಹುಲ್ಲು ಮೇಯುವ ಗತಿ ನಿಮ್ಮದಾಗುವುದು. ಆಕಾಶದ ಇಬ್ಬನಿ ನಿಮ್ಮನ್ನು ತೋಯಿಸುವುದು. ಪರಾತ್ಪರ ದೇವರಿಗೆ ಮಾನವರ ರಾಜ್ಯದ ಮೇಲೂ ಅಧಿಕಾರವಿದೆ. ಅದನ್ನು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಇದು ತಮಗೆ ತಿಳಿದುಬರುವುದರೊಳಗೆ ಏಳು ವರ್ಷ ಕಳೆದಿರುತ್ತದೆ.


ಕಾಲಗಳು ಋತುಗಳು ಆತನ ಕೈಯಲ್ಲಿವೆ ರಾಜರನ್ನು ಕೆಳಕ್ಕಿಳಿಸುವವನು, ಮೇಲೆ ನಿಲ್ಲಿಸುವವನು ಆತನೆ. ಜ್ಞಾನಿಗಳ ಜ್ಞಾನ, ವಿವೇಕಿಗಳ ವಿವೇಕ ಆತನ ಕೊಡುಗೆ.


“ನನ್ನ ದಾಸ ಯಕೋಬೇ, ಭಯಪಡಬೇಡ ಇಸ್ರಯೇಲೇ, ಅಂಜಬೇಡ, ಇಗೋ, ನಾನು ನಿನ್ನನ್ನು ಉದ್ಧರಿಸುವೆನು ದೂರದೇಶದಿಂದ ನಿನ್ನ ಸಂತಾನವನ್ನು ರಕ್ಷಿಸುವೆನು ಸೆರೆಹೋದ ಸೀಮೆಯಿಂದ. ಯಕೋಬು ಹಾಯಾಗಿ ಹಿಂತಿರುಗಿ ಬಾಳುವುದು ನೆಮ್ಮದಿಯಿಂದ. ಭಯಪಡಬೇಡ ನನ್ನ ದಾಸ ಯಕೋಬೇ, ನಾನಿದ್ದೇನೆ ನಿನ್ನೊಂದಿಗೆ.


ದೇವರೇ ಉದ್ಧಾರಕನೆನಗೆ ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ. ದೇವಾದಿದೇವನೇ ಎನಗೆ ಶಕ್ತಿ ಆತನೆನ್ನ ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”


ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದೇವರು II


ನಾಡ ಗೆದ್ದುದು ನಮ್ಮವರ ಕತ್ತಿಯಲ್ಲ I ಜಯ ದೊರೆತದು ತಮ್ಮ ಭುಜಬಲದಿಂದಲ್ಲ II ಜಯ ತಂದಿತು ನಿನ್ನ ಬಲಹಸ್ತ, ನಿನ್ನ ಮುಖಕಾಂತಿ I ನಿನ್ನ ಭುಜಬಲ, ನೀ ತೋರಿದಾ ಅಚಲಪ್ರೀತಿ II


ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I ನಾನಾರಿಗೂ ಅಳುಕೆನು II ನನ್ನ ಬಾಳಿಗಾಧಾರ ಪ್ರಭುವೆ I ನಾನಾರಿಗೂ ಅಂಜೆನು II


ಕಾನಾನ್ಯರು ಮತ್ತು ನಾಡಿನ ಬೇರೆ ಎಲ್ಲಾ ನಿವಾಸಿಗಳೂ ಇದನ್ನು ಕೇಳಿ ನಮ್ಮನ್ನು ಸುತ್ತುವರೆದು ಲೋಕದಲ್ಲಿ ನಮ್ಮ ಹೆಸರೇ ಉಳಿಯದಂತೆ ಮಾಡುವರು. ಆಗ ನಿಮ್ಮ ಮಹತ್ತಾದ ಹೆಸರನ್ನು ಉಳಿಸಿಕೊಳ್ಳಲು ಏನು ಮಾಡುವಿರಿ?” ಎಂದನು.


ಆಗ ಯೆಹೋಶುವ ಎಲ್ಲಾ ಯೋಧರ ಮತ್ತು ಯುದ್ಧವೀರರ ಸಮೇತ ಗಿಲ್ಗಾಲಿನಿಂದ ಹೊರಟರು.


ಸರ್ವೇಶ್ವರ ಸ್ವಾಮಿ ಯೆಹೋಶುವನಿಗೆ, “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ,” ಎಂದರು.


ಹೆಷ್ಬೋನಿನವರೇ, ಅತ್ತುಗೋಳಾಡಿರಿ. ಆಯಿ ಎಂಬ ಊರು ಹಾಳಾಯಿತು! ರಬ್ಬಾ ನಗರಕ್ಕೆ ಸೇರಿದ ಗ್ರಾಮಗಳವರೇ ಕಿರಿಚಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ಅತ್ತು ಪ್ರಲಾಪಿಸಿರಿ, ಕುರಿಹಟ್ಟಿಗಳಲ್ಲಿ, ಅತ್ತಿತ್ತ ಓಡಾಡಿರಿ. ಏಕೆಂದರೆ ಮಲ್ಕಾಮ್ ದೇವತೆಯೂ ಅದರ ಯಾಜಕರೂ ರಾಜ್ಯಾಧಿಕಾರಿಗಳೂ ಒಟ್ಟಾಗಿ ಸೆರೆಗೆ ಹೋಗುವರು.


ನೀವು ಆ ಜನರಿಗೆ ಹೆದರಿಕೊಳ್ಳಬೇಡಿ.


ಇದಲ್ಲದೆ, ಅವರು ಯೆಹೋಶುವನಿಗೆ, “ಸರ್ವೇಶ್ವರಸ್ವಾಮಿ ನಿಜವಾಗಿ ಈ ನಾಡನ್ನೆಲ್ಲಾ ನಮಗೆ ಕೊಟ್ಟಿದ್ದಾರೆ. ಅದರ ನಿವಾಸಿಗಳೆಲ್ಲ ನಮ್ಮನ್ನು ಕಂಡು ನಡುಗುತ್ತ ಇದ್ದಾರೆ,” ಎಂದು ತಿಳಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು