Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 7:7 - ಕನ್ನಡ ಸತ್ಯವೇದವು C.L. Bible (BSI)

7 ಯೆಹೋಶುವನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನೀವು ಈ ಜನರನ್ನು ಜೋರ್ಡನ್ ನದಿ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶಮಾಡಬೇಕೆಂದಿರುವಿರಾ? ನಾವು ಇಷ್ಟೇ ಸಾಕೆಂದು ಜೋರ್ಡನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆಹೋಶುವನು “ಅಯ್ಯೋ, ಕರ್ತನೇ, ಯೆಹೋವನೇ, ನೀನು ಈ ಜನರನ್ನು ಯೊರ್ದನ್ ಹೊಳೆ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶ ಮಾಡಬೇಕೆಂದಿರುವಿಯಾ? ನಾವು ಇಷ್ಟೇ ಸಾಕೆಂದು ಯೊರ್ದನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಮತ್ತು ಯೆಹೋಶುವನು - ಅಯ್ಯೋ ಕರ್ತನೇ, ಯೆಹೋವನೇ, ನೀನು ಈ ಜನರನ್ನು ಯೊರ್ದನ್ ಹೊಳೆ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ ನಾಶಮಾಡಬೇಕೆಂದಿದ್ದೀಯಾ? ನಾವು ಇಷ್ಟೇ ಸಾಕೆಂದು ಯೊರ್ದನ್ ಹೊಳೆಯ ಆಚೆಯಲ್ಲಿಯೇ ಇದ್ದರೆ ಎಷ್ಟೋ ಒಳ್ಳೇದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೆಹೋಶುವನು, “ಯೆಹೋವನೇ ನನ್ನ ಒಡೆಯನೇ, ನಮ್ಮ ಜನರನ್ನು ನೀನು ಜೋರ್ಡನ್ ನದಿ ದಾಟಿಸಿ ಕರೆದುಕೊಂಡು ಬಂದೆ. ನಮ್ಮನ್ನು ಇಲ್ಲಿಯವರೆಗೆ ಕರೆದು ತಂದು ಅಮೋರಿಯರಿಂದ ನಾಶವಾಗಲು ನಮ್ಮನ್ನು ಬಿಟ್ಟು ಕೊಡುವುದೇಕೆ? ನಾವು ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಜೋರ್ಡನ್ ನದಿಯ ಆಚೆಯಲ್ಲಿಯೇ ಇರಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಇದಲ್ಲದೆ ಯೆಹೋಶುವನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ನಮ್ಮನ್ನು ಅಮೋರಿಯರ ಕೈಯಲ್ಲಿ ಒಪ್ಪಿಸಿಕೊಡುವುದಕ್ಕಾಗಿ ನೀವು ಈ ಜನರನ್ನು ಯೊರ್ದನ್ ನದಿ ದಾಟಿಸಿದ್ದು ಏಕೆ? ನಾವು ಯೊರ್ದನ್ ನದಿ ಆಚೆಯಲ್ಲಿ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 7:7
19 ತಿಳಿವುಗಳ ಹೋಲಿಕೆ  

ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? “ಸುಕುಮಾರಾ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು


ಆದ್ದರಿಂದ ಇಸ್ರಯೇಲರ ಅರಸನು, “ಅಯ್ಯೋ, ಮೂರು ಮಂದಿ ಅರಸರಾದ ನಮ್ಮನ್ನು ಮೋವಾಬ್ಯರ ಕೈಗೆ ಒಪ್ಪಿಸುವುದಕ್ಕಾಗಿ ಸರ್ವೇಶ್ವರ ಇಲ್ಲಿಗೆ ಬರಮಾಡಿದ್ದಾರೆ,” ಎಂದು ಪರಿತಪಿಸಿದನು.


ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ.


ಅದಕ್ಕೆ ಯೇಸು, “ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟುಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿ, “ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ,” ಎಂದರು.


ಕತ್ತಿಯ ಬಾಯಿಗೆ ತುತ್ತಾಗಿಸಲು ಸರ್ವೇಶ್ವರ ಸ್ವಾಮಿ ನಮ್ಮನ್ನೇಕೆ ಈ ನಾಡಿಗೆ ಬರಮಾಡಿದರು? ನಮ್ಮ ಮಡದಿ ಮಕ್ಕಳು ಪರರ ಪಾಲಾಗುವರಲ್ಲಾ? ನಾವು ಮರಳಿ ಈಜಿಪ್ಟ್ ದೇಶಕ್ಕೆ ಹೋಗುವುದೇ ಒಳಿತಲ್ಲವೆ?” ಎಂದು ಹೇಳಿಕೊಂಡರು.


ಅಲ್ಲಿ ಜನರು ನೀರಿಲ್ಲದೆ ಬಾಯಾರಿಕೆಯ ಬೇಸರದಿಂದ ಮೋಶೆಯ ವಿರುದ್ಧ ಗೊಣಗುಟ್ಟಿದರು. “ನೀನು ನಮ್ಮನ್ನು, ನಮ್ಮ ಮಕ್ಕಳನ್ನು ಹಾಗು ದನಕರುಗಳನ್ನು ಈಜಿಪ್ಟಿನಿಂದ ಕರೆದು ತಂದದ್ದು ಏಕೆ? ನೀರಿಲ್ಲದೆ ಸಾಯಿಸುವುದಕ್ಕೋ?” ಎಂದು ದೂರಿದರು.


“ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದು ತಂದಿದ್ದೀರಿ; ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೆ ಸತ್ತಿದ್ದರೆ ಎಷ್ಟೊ ಲೇಸಾಗಿತ್ತು. ಆಗ ಮಾಂಸ ಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇ ತುಂಬ ಊಟಮಾಡುತ್ತಿದ್ದೆವು,” ಎಂದು ಗುಣಗಿದರು.


‘ಸರ್ವೇಶ್ವರ ಪ್ರಮಾಣ ಪೂರ್ವಕವಾಗಿ ವಾಗ್ದಾನ ಮಾಡಿದ ನಾಡಿಗೆ ತನ್ನ ಜನರನ್ನು ಸೇರಿಸಲು ಶಕ್ತಿ ಸಾಲದೆ ಹೋಯಿತು; ಅವರನ್ನು ಮರುಭೂಮಿಯಲ್ಲೇ ಕೊಂದುಹಾಕಿಬಿಟ್ಟ’ ಎಂದುಕೊಳ್ಳುವರು.


ಆಗ ಯೆಹೋಶುವನು ಮತ್ತು ಇಸ್ರಯೇಲರ ಹಿರಿಯರು ದುಃಖ ತಾಳಲಾರದೆ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡು ಸಾಯಂಕಾಲದವರೆಗೆ ಸರ್ವೇಶ್ವರನ ಮಂಜೂಷದ ಮುಂದೆ ಅಧೋಮುಖರಾಗಿ ಬಿದ್ದಿದ್ದರು.


ಸರ್ವೇಶ್ವರಾ, ಇಸ್ರಯೇಲರು ಶತ್ರುಗಳಿಗೆ ಬೆನ್ನು ತೋರಿಸಿದ್ದಾರಲ್ಲಾ! ನಾನು ಏನು ತಾನೇ ಹೇಳಲಿ!


(ಇಸ್ರಯೇಲರು ಹೋಗಿ ಸರ್ವೇಶ್ವರನ ಮುಂದೆ ದುಃಖಿಸುತ್ತಾ, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೆ?” ಎಂದು ಕೇಳಲು ಅವರು, “ಹೋಗಿ ಯುದ್ಧಮಾಡಿ,” ಎಂದರು.


ಇಸ್ರಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರೊಡನೆ ಅವರ ಹಿರಿಯರು, “ಸರ್ವೇಶ್ವರ ಈ ದಿನ ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶಿಲೋವಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರೋಣ; ಅವರು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ರಕ್ಷಿಸಲಿ,” ಎಂದು ಸಮಾಲೋಚಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು