Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 6:5 - ಕನ್ನಡ ಸತ್ಯವೇದವು C.L. Bible (BSI)

5 ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿ ಕೇಳುತ್ತಲೇ ನೀವೆಲ್ಲರು ಗಟ್ಟಿಯಾಗಿ ಕೇಕೆ ಹಾಕಿ ಆರ್ಭಟಿಸಿರಿ. ಆಗ ನಗರದ ಗೋಡೆ ತಾನೇ ತಾನಾಗಿ ಬಿದ್ದುಹೋಗುವುದು. ಆಗ ಪ್ರತಿಯೊಬ್ಬನು ನೆಟ್ಟಗೆ ಒಳನುಗ್ಗಬಹುದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಗಟ್ಟಿಯಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವುದು; ಪ್ರತಿಯೊಬ್ಬನೂ ನೆಟ್ಟಗೆ ಒಳಗೆ ನುಗ್ಗಬಹುದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಯಾಜಕರು ಕೊಂಬುಗಳನ್ನು ಊದಬೇಕು. ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಮಹತ್ತರವಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವದು; ಪ್ರತಿಯೊಬ್ಬನೂ ನೆಟ್ಟಗೆ ಒಳನುಗ್ಗಬಹುದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯಾಜಕರ ತುತ್ತೂರಿ ಧ್ವನಿಯನ್ನು ಕೇಳಿದಾಗ ಜನರು ಆರ್ಭಟಿಸಬೇಕು. ಆಗ ನಗರದ ಗೋಡೆಗಳು ಬೀಳುವವು; ಆಗ ನೀವು ನೇರವಾಗಿ ನಗರದೊಳಗೆ ಹೋಗಿರಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 6:5
17 ತಿಳಿವುಗಳ ಹೋಲಿಕೆ  

ಇಸ್ರಯೇಲರು ಏಳು ದಿನಗಳವರೆಗೆ ಜೆರಿಕೊ ಪಟ್ಟಣದ ಕೋಟೆಯನ್ನು ಪ್ರದಕ್ಷಿಣೆಮಾಡಿ ಬಂದ ನಂತರ ಅವು ತಮ್ಮಷ್ಟಕ್ಕೆ ತಾವೇ ಕುಸಿದು ಬಿದ್ದುದಕ್ಕೆ ಕಾರಣ ಆ ವಿಶ್ವಾಸವೇ.


ತುತೂರಿಯ ಧ್ವನಿ ಹೆಚ್ಚು ಹೆಚ್ಚಾಗುತ್ತಾ ಬಂದಿತು. ಮೋಶೆ ಮಾತಾಡಿದಾಗ ದೇವರು ಮೇಘಗರ್ಜನೆಯಿಂದ ಉತ್ತರಕೊಟ್ಟರು.


ಇಸ್ರಯೇಲರೂ ಯೆಹೂದ್ಯರೂ ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ಕಣಿವೆಯ ದಾರಿಯವರೆಗೂ ಎಕ್ರೋನಿನ ಬಾಗಿಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿಮಿನಿಂದ ಗತ್, ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು.


ದಾವೀದನು ಮರುದಿನ ಬೆಳಿಗ್ಗೆ ಎದ್ದು ಕುರಿಗಾಹಿಗೆ ಕುರಿಗಳನ್ನು ಒಪ್ಪಿಸಿ, ತನ್ನ ತಂದೆ ಜೆಸ್ಸೆಯನು ಹೇಳಿದವುಗಳನ್ನು ತೆಗೆದುಕೊಂಡು ಪಾಳೆಯದ ಬಂಡಿಗಳು ನಿಂತಿದ್ದ ಸ್ಥಳಕ್ಕೆ ಬಂದನು. ಸೈನ್ಯಗಳು ಯುದ್ಧಘೋಷಣೆಗಳನ್ನು ಹಾಕುವ ಸಮಯ ಅದು.


ಸರ್ವೇಶ್ವರನ ಒಡಂಬಡಿಕೆಯ ಮಂಜೂಷ ಪಾಳೆಯಕ್ಕೆ ಬಂದಾಗ ಇಸ್ರಯೇಲರೆಲ್ಲರೂ ಭೂಮಿ ಬಿರಿಯುವಷ್ಟು ಗಟ್ಟಿಯಾಗಿ ಜಯಕಾರ ಮಾಡಿದರು.


ಕೂಡಲೆ ಜನರು ಆರ್ಭಟಿಸಿದರು. ಕೊಂಬುಗಳು ಮೊಳಗಿದವು. ಕೊಂಬಿನ ಧ್ವನಿ ಕೇಳಿ ಜನರು ಇನ್ನೂ ಗಟ್ಟಿಯಾಗಿ ಆರ್ಭಟಿಸಿದರು. ನಗರದ ಗೋಡೆ ತಾನಾಗಿ ಬಿದ್ದುಹೋಯಿತು. ಪ್ರತಿ ಒಬ್ಬನೂ ನೆಟ್ಟಗೆ ನಗರಕ್ಕೆ ನುಗ್ಗಿದನು. ಅದು ಅವರ ಸ್ವಾಧೀನವಾಯಿತು.


ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಿದರು. ಯೆಹೋಶುವ ಜನರಿಗೆ, “ಆರ್ಭಟಿಸಿರಿ, ಸರ್ವೇಶ್ವರಸ್ವಾಮಿ ನಿಮಗೆ ಈ ನಗರವನ್ನು ಕೊಟ್ಟಿದ್ದಾರೆ.


ಆದರ ಸುತ್ತಲು ರಣಘೋಷಮಾಡಿರಿ. ಇಗೋ, ಅದು ಶರಣಾಗತವಾಯಿತು! ಅದರ ಕೋಟೆಕೊತ್ತಲಗಳು ಬಿದ್ದವು. ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಸರ್ವೇಶ್ವರನಾದ ನಾನು ಅದಕ್ಕೆ ಮುಯ್ಯಿತೀರಿಸಿದ್ದೇನೆ. ನೀವೂ ಮುಯ್ಯಿತೀರಿಸಿರಿ. ಅದು ಮಾಡಿದಂತೆಯೇ ಅದಕ್ಕೆ ಮಾಡಿ.


ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು.


ದುರ್ಗದಂತೆ ಎತ್ತರವಾಗಿರುವ ಅದರ ಕೋಟೆಕೊತ್ತಲಗಳನ್ನು ಕೆಳಕ್ಕೆ ಕೆಡವಿ ನೆಲಸಮಮಾಡುವರು. ಅದು ಧೂಳು ಪಾಲಾಗುವುದು.


ಏಳುಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿವಸ ನೀವು ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ಕೊಂಬುಗಳನ್ನು ಊದಬೇಕು.


ನೂನನ ಮಗ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಸರ್ವೇಶ್ವರನ ಮಂಜೂಷದ ಮುಂದೆ ನಡೆಯಲಿ,” ಎಂದು ತಿಳಿಸಿದನು.


ಅಷ್ಟರಲ್ಲಿ ಅಡಗಿಕೊಂಡಿದ್ದವರು ಎದ್ದು ಗಿಬೆಯಕ್ಕೆ ಶೀಘ್ರವಾಗಿ ಹೋಗಿ ಅದರೊಳಗಿದ್ದ ಎಲ್ಲರನ್ನು ಕತ್ತಿಯಿಂದ ಸಂಹರಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು