Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 6:3 - ಕನ್ನಡ ಸತ್ಯವೇದವು C.L. Bible (BSI)

3 ನಿನ್ನ ಯೋಧರೆಲ್ಲ ಆರು ದಿವಸಗಳವರೆಗೆ ದಿನಕ್ಕೆ ಒಂದು ಸಾರಿ ನಗರವನ್ನು ಸುತ್ತಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಿನ್ನ ಭಟರೆಲ್ಲ ಆರು ದಿನಗಳ ವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಿಮ್ಮ ಭಟರೆಲ್ಲಾ ಆರು ದಿವಸಗಳವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಪ್ರತಿ ನಿತ್ಯ ಒಂದು ಸಲ ನಿನ್ನ ಸೇನೆಯೊಂದಿಗೆ ನಗರದ ಸುತ್ತಲೂ ಸುತ್ತಬೇಕು. ಹೀಗೆ ಆರು ದಿನಗಳವರೆಗೆ ಸುತ್ತಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣವನ್ನು ಒಂದು ಸಾರಿ ಸುತ್ತಬೇಕು. ಈ ಪ್ರಕಾರ ಆರು ದಿವಸ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 6:3
9 ತಿಳಿವುಗಳ ಹೋಲಿಕೆ  

ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ. ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ.


ಆದ್ದರಿಂದ ಸರ್ವೇಶ್ವರನಿಗೆ ವಿರುದ್ಧ ದಂಗೆ ಏಳಬೇಡಿ. ಆ ನಾಡಿನ ಜನರಿಗೆ ದಿಗಿಲುಪಡಬೇಡಿ. ಅವರು ನಮಗೆ ತುತ್ತಾಗುವರು. ನಾವು ಪುಷ್ಠಿಯಾಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ. ಸರ್ವೇಶ್ವರ ನಮ್ಮ ಕಡೆ ಇದ್ದಾರೆ. ಅವರಿಗೆ ಭಯಪಡಬೇಡಿ”


ಅಂತೆಯೆ ಜನರಿಗೆ, “ನೀವು ಮುಂದೆ ಹೋಗಿ ನಗರವನ್ನು ಸುತ್ತುವರೆಯಿರಿ. ಯುದ್ಧಸನ್ನದ್ಧರೆಲ್ಲರೂ ಸರ್ವೇಶ್ವರನ ಮಂಜೂಷದ ಮುಂದೆ ಹೋಗಲಿ,” ಎಂದು ಹೇಳಿದನು.


ಹೀಗೆ ಎರಡನೆಯ ದಿನದಲ್ಲೂ ನಗರವನ್ನು ಸುತ್ತಿ ಪಾಳೆಯಕ್ಕೆ ಹಿಂದಿರುಗಿದರು. ಆರು ದಿನ ಹೀಗೆಯೇ ಮಾಡಿದರು.


ಆಗ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೋಡು, ನಾನು ಜೆರಿಕೋವನ್ನು, ಅದರ ಅರಸನನ್ನು ಹಾಗು ಅದರ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ.


ಏಳುಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿವಸ ನೀವು ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ಕೊಂಬುಗಳನ್ನು ಊದಬೇಕು.


ಸರ್ವೇಶ್ವರನ ಮಂಜೂಷವನ್ನು ಒಂದು ಸಾರಿ ನಗರ ಪ್ರದಕ್ಷಿಣೆ ಮಾಡಿಸಿದ ಮೇಲೆ, ಅವರು ಪಾಳೆಯಕ್ಕೆ ಹಿಂದಿರುಗಿ ಬಂದು ರಾತ್ರಿಯನ್ನು ಕಳೆದರು.


ಅದನ್ನು ಎರಕಹೊಯ್ಯುವಾಗ ಅದರ (ಅಂಚಿನ) ಕೆಳಗೆ ಸುತ್ತಲೂ ಮೊಳಕ್ಕೆ ಹತ್ತರಂತೆ ಹೋರಿಗಳ ಚಿತ್ರಗಳನ್ನು ಎರಡು ಸಾಲಾಗಿ ಎರಕ ಹೊಯ್ಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು