ಯೆಹೋಶುವ 24:7 - ಕನ್ನಡ ಸತ್ಯವೇದವು C.L. Bible (BSI)7 ಆಗ ನಿಮ್ಮ ಪೂರ್ವಜರು ನನಗೆ ಮೊರೆಯಿಟ್ಟರು. ನಾನು ಅವರಿಗೂ ಈಜಿಪ್ಟಿನವರಿಗೂ ಮಧ್ಯೆ ಕಾರ್ಗತ್ತಲೆಯನ್ನು ಉಂಟುಮಾಡಿದೆ. ಇದಲ್ಲದೆ ಈಜಿಪ್ಟಿನವರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆ. ನಾನು ಈಜಿಪ್ಟಿನಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವೇ ಸಾಕ್ಷಿಗಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಅವರು ಯೆಹೋವನಾದ ನನಗೆ ಮೊರೆಯಿಡಲು ನಾನು ಅವರಿಗೂ, ಐಗುಪ್ತರಿಗೂ ಮಧ್ಯದಲ್ಲಿ ಕಾರ್ಗತ್ತಲೆಯನ್ನು ಉಂಟುಮಾಡಿದೆನು. ಇದಲ್ಲದೆ ನಾನು ಐಗುಪ್ತರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆನು. ನಾನು ಐಗುಪ್ತದಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವು ಸಾಕ್ಷಿಗಳಾಗಿದ್ದಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಆಗ ಅವರು ಯೆಹೋವನಾದ ನನಗೆ ಮೊರೆಯಿಡಲು ನಾನು ಅವರಿಗೂ ಐಗುಪ್ತ್ಯರಿಗೂ ಮಧ್ಯದಲ್ಲಿ ಕಾರ್ಗತ್ತಲೆಯನ್ನುಂಟುಮಾಡಿದೆನು. ಇದಲ್ಲದೆ ನಾನು ಐಗುಪ್ತ್ಯರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಚ್ಚಿಬಿಟ್ಟೆನು. ನಾನು ಐಗುಪ್ತದಲ್ಲಿ ಏನೇನು ಮಾಡಿದೆನೆಂಬದಕ್ಕೆ ನೀವು ಸಾಕ್ಷಿಗಳಾಗಿದ್ದೀರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಆಗ ನಿಮ್ಮ ಜನರು ಯೆಹೋವನಾದ ನನ್ನ ಸಹಾಯ ಕೋರಿದರು. ನಾನು ಈಜಿಪ್ಟಿನ ಜನರಿಗೂ ಅವರಿಗೂ ಮಧ್ಯದಲ್ಲಿ ಕತ್ತಲೆಯಾಗುವಂತೆ ಮಾಡಿದೆ; ಸಮುದ್ರವು ಅವರನ್ನು ಮುಚ್ಚಿಬಿಡುವಂತೆ ಮಾಡಿದೆ. ಈಜಿಪ್ಟಿನ ಸೈನ್ಯಕ್ಕೆ ನಾನು ಮಾಡಿದ್ದನ್ನು ನೀವೇ ನೋಡಿದ್ದೀರಿ. “‘ತರುವಾಯ ಬಹಳ ಕಾಲದವರೆಗೆ ನೀವು ಅರಣ್ಯದಲ್ಲಿ ಪ್ರವಾಸ ಮಾಡಿಕೊಂಡಿದ್ದಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಆಗ, ಅವರು ಯೆಹೋವ ದೇವರಾಗಿರುವ ನನಗೆ ಕೂಗಿದಾಗ ನಾನು ನಿಮಗೂ ಈಜಿಪ್ಟಿನವರಿಗೂ ಮಧ್ಯದಲ್ಲಿ ಅಂಧಕಾರವನ್ನು ಇಟ್ಟು, ಸಮುದ್ರವನ್ನು ಅವರ ಮೇಲೆ ಬರಮಾಡಿ, ಅವರನ್ನು ಮುಚ್ಚಿಬಿಟ್ಟೆನು. ಅಧ್ಯಾಯವನ್ನು ನೋಡಿ |