ಯೆಹೋಶುವ 24:3 - ಕನ್ನಡ ಸತ್ಯವೇದವು C.L. Bible (BSI)3 ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆತಂದು, ಕಾನಾನ್ ನಾಡಿನಲ್ಲೆಲ್ಲಾ ಸಂಚಾರ ಮಾಡಿಸಿದೆ. ಇಸಾಕನೆಂಬ ಮಗನನ್ನು ಕೊಟ್ಟು, ಅವನ ಸಂತಾನವನ್ನು ಹೆಚ್ಚಿಸಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆತಂದು ಕಾನಾನ್ ದೇಶದಲ್ಲೆಲ್ಲಾ ಸಂಚಾರ ಮಾಡಿ, ಇಸಾಕನೆಂಬ ಮಗನನ್ನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರತಂದು ಕಾನಾನ್ ದೇಶದಲ್ಲೆಲ್ಲಾ ಸಂಚಾರ ಮಾಡಿಸಿ ಇಸಾಕನೆಂಬ ಮಗನನ್ನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಆದರೆ ಯೆಹೋವನಾದ ನಾನು ನಿಮ್ಮ ಪೂರ್ವಿಕನಾದ ಅಬ್ರಹಾಮನನ್ನು ಆ ಪ್ರದೇಶದಿಂದ ನದಿಯ ಮತ್ತೊಂದು ದಡಕ್ಕೆ ಕರೆದುಕೊಂಡು ಬಂದೆ. ನಾನು ಅವನನ್ನು ಕಾನಾನ್ ಪ್ರದೇಶದಲ್ಲೆಲ್ಲ ಸಂಚಾರ ಮಾಡಿಸಿ ಅವನಿಗೆ ಅನೇಕ ಮಕ್ಕಳನ್ನು ಕೊಟ್ಟೆನು, ನಾನು ಅಬ್ರಹಾಮನಿಗೆ ಇಸಾಕನೆಂಬ ಮಗನನ್ನು ಕೊಟ್ಟೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆದರೆ ನಾನು ಯೂಫ್ರೇಟೀಸ್ ನದಿಯ ಆಚೆಯಲ್ಲಿ ಇದ್ದ ನಿಮ್ಮ ತಂದೆಯಾದ ಅಬ್ರಹಾಮನನ್ನು ಕರೆದುಕೊಂಡು ಬಂದು, ಅವನನ್ನು ಕಾನಾನ್ ದೇಶವನ್ನೆಲ್ಲಾ ಸಂಚಾರ ಮಾಡಿಸಿ, ಅವನ ಸಂತಾನವನ್ನು ಅಭಿವೃದ್ಧಿ ಮಾಡಿದೆನು. ಅವನಿಗೆ ಇಸಾಕನನ್ನು ಕೊಟ್ಟೆನು. ಅಧ್ಯಾಯವನ್ನು ನೋಡಿ |