Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 22:20 - ಕನ್ನಡ ಸತ್ಯವೇದವು C.L. Bible (BSI)

20 ಜೆರಹನ ಮಗ ಆಕಾನನು ಸರ್ವೇಶ್ವರನ ಸೊತ್ತನ್ನು ಕದ್ದುಕೊಂಡು ದ್ರೋಹಿಯಾದ. ಆಗ ಸರ್ವೇಶ್ವರನ ಕೋಪ ಇಸ್ರಯೇಲರ ಸರ್ವಸಭೆಯ ಮೇಲೆ ಎರಗಿತು. ಅವನ ಪಾಪದ ನಿಮಿತ್ತ ಅವನೊಡನೆ ಅನೇಕರು ಸಾಯಬೇಕಾಯಿತಲ್ಲವೆ?” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಜೆರಹನ ಮಗನಾದ ಆಕಾನನು ಯೆಹೋವನ ಸೊತ್ತನ್ನು ಕದ್ದುಕೊಂಡು ದ್ರೋಹಿಯಾದಾಗ ಯೆಹೋವನ ಕೋಪವು ಇಸ್ರಾಯೇಲ್ಯರ ಸರ್ವಸಭೆಯ ಮೇಲೆ ಬಂದಿತು. ಅವನ ಪಾಪದ ದೆಸೆಯಿಂದ ಅವನೊಡನೆ ಅನೇಕರು ಸಾಯಬೇಕಾಯಿತಲ್ಲಾ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಜೆರಹನ ಮಗನಾದ ಆಕಾನನು ಯೆಹೋವನ ಸೊತ್ತನ್ನು ಕದ್ದುಕೊಂಡು ದ್ರೋಹಿಯಾದಾಗ ಯೆಹೋವನ ಕೋಪವು ಇಸ್ರಾಯೇಲ್ಯರ ಸರ್ವಸಭೆಯ ಮೇಲೆ ಬಂದಿತು. ಮತ್ತು ಅವನ ಪಾಪದ ದೆಸೆಯಿಂದ ಅವನೊಡನೆ ಅನೇಕರು ಸಾಯಬೇಕಾಯಿತಲ್ಲಾ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “‘ಜೆರಹನ ಮಗನಾದ ಆಕಾನನನ್ನು ನೆನಪು ಮಾಡಿಕೊಳ್ಳಿ ನಾಶಪಡಿಸಬೇಕಾಗಿದ್ದ ವಸ್ತುಗಳ ಬಗ್ಗೆ ಆತನ ಆಜ್ಞೆಯನ್ನು ತಿರಸ್ಕರಿಸಿದನು. ಅವನು ದೇವರ ನಿಯಮಗಳನ್ನು ಉಲ್ಲಂಘಿಸಿದನು; ಆದರೆ ಶಿಕ್ಷೆಯು ಇಸ್ರೇಲಿನ ಎಲ್ಲ ಜನರಿಗಾಯಿತು. ಆಕಾನನು ತನ್ನ ಪಾಪದಿಂದಾಗಿ ಸತ್ತನು. ಆದರೆ ಬಹಳಷ್ಟು ಬೇರೆ ಜನರೂ ಸತ್ತರು’” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಜೆರಹನ ಮಗ ಆಕಾನನು ಅರ್ಪಿತವಾದ ವಸ್ತುಗಳನ್ನು ಕದ್ದು ಅಪರಾಧವೆಸಗಿದಾಗ ಯೆಹೋವ ದೇವರ ಕೋಪವು ಸಮಸ್ತ ಇಸ್ರಾಯೇಲ್ ಜನರ ಮೇಲೆ ಬಂದಿತು. ಅವನ ಪಾಪದ ದೆಸೆಯಿಂದ ಅವನೊಡನೆ ಇತರರೂ ಸಾಯಬೇಕಾಯಿತು,’ ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 22:20
11 ತಿಳಿವುಗಳ ಹೋಲಿಕೆ  

ಆಯಿ ಊರಿನವರು ಅವರನ್ನು ಊರ ಬಾಗಿಲಿನಿಂದ ಕಲ್ಲುಗಣಿಯವರೆಗೂ ಹಿಂದಟ್ಟಿ ಇಳಿನೆಲದಲ್ಲಿ ಅವರನ್ನು ಸೋಲಿಸಿ ಸುಮಾರು ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಇದರಿಂದ ಇಸ್ರಯೇಲರ ಧೈರ್ಯ ಕರಗಿ ನೀರಾಯಿತು.


ಆಕಾನನು ಯೆಹೂದ್ಯ ಕುಲದವನು, ಜೆರಹನ ಗೋತ್ರದವನು, ಕರ್ಮೀಯ ಮಗನೂ ಜಬ್ದೀಯ ಕುಟುಂಬದವನೂ ಆಗಿದ್ದನು. ಸರ್ವೇಶ್ವರಸ್ವಾಮಿಗೆ ಮೀಸಲಾಗಿಟ್ಟ ವಸ್ತುಗಳಲ್ಲಿ ಈತ ಕೆಲವನ್ನು ಕದ್ದುಕೊಂಡನು. ಈ ಕಾರಣ ಇಸ್ರಯೇಲರೆಲ್ಲರು ದ್ರೋಹಿಗಳಾದರು. ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು.


ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಂತೆ ನಾವು ಕೆಟ್ಟದಾದವುಗಳನ್ನು ಆಶಿಸಬಾರದು.


ಜೆರಹನ ಮಗನಾದ ಆಕಾನನನ್ನು ಹಿಡಿದು ಬೆಳ್ಳಿ, ನಿಲುವಂಗಿ, ಬಂಗಾರದ ಗಟ್ಟಿಯನ್ನು, ಅವನ ಗಂಡುಹೆಣ್ಣು ಮಕ್ಕಳನ್ನು, ದನ, ಕರು, ಕತ್ತೆ, ಆಡುಕುರಿಗಳನ್ನು ಮತ್ತು ಗುಡಾರವನ್ನು ಆಕೋರ್ ಎಂಬ ಕಣಿವೆಗೆ ಒಯ್ಯಲಾಯಿತು. ಯೆಹೋಶುವನೂ ಇಸ್ರಯೇಲರೆಲ್ಲರೂ ಅಲ್ಲಿಗೆ ಬಂದರು.


ಆ ಕುಟುಂಬದವರಲ್ಲಿ ಒಬ್ಬನಾದ ಮೇಲೆ ಒಬ್ಬನನ್ನು ಕರೆದಾಗ ಆಕಾನನು ಸಿಕ್ಕಿಕೊಂಡನು. ಯೆಹೂದ ಕುಲದವನೂ ಜೆರಹನ ಗೋತ್ರದವನೂ ಜಬ್ದೀಯ ಕುಟುಂಬದವನೂ ಹಾಗೂ ಕರ್ಮೀಯ ಮಗನೂ ಇವನೇ.


ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಕೂಡ ದೇವರು ಬಿಡಲಿಲ್ಲ. ದುರ್ಜನರಿಗೆ ಬರಲಿರುವ ದುರ್ಗತಿ ಏನೆಂದು ಸೂಚಿಸುವುದಕ್ಕಾಗಿ ಆ ಪಟ್ಟಣಗಳನ್ನು ಸುಟ್ಟು ಭಸ್ಮಮಾಡಿದರು.


ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್ ಹಾಗು ಈತಾಮಾರ್ ಎಂಬುವರಿಗೆ, “ನೀವು ಸಂತಾಪ ಸೂಚಿಸಲು ಕೂದಲನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವು ಕೂಡ ಸಾಯುವಿರಿ; ಅದು ಮಾತ್ರವಲ್ಲ, ಇಡೀ ಜನಸಮೂಹದ ಮೇಲೆ ಸರ್ವೇಶ್ವರ ಸಿಟ್ಟುಗೊಳ್ಳುವರು. ಸರ್ವೇಶ್ವರನಿಂದ ಹೊರಟ ಆ ಬೆಂಕಿಯ ನಿಮಿತ್ತ ನಿಮ್ಮ ಸೋದರರಾದ ಇಸ್ರಯೇಲ್ ಸಮಾಜದವರೇ ದುಃಖಿಸಲಿ.


ಆಗ ರೂಬೇನ್ಯರು, ಗಾದ್ಯರು ಹಾಗು ಮನಸ್ಸೆಕುಲದ ಅರ್ಧಜನರು, ಇಸ್ರಯೇಲಿನ ಆ ಕುಲಾಧಿಪತಿಗಳಿಗೆ ಹೀಗೆಂದು ಉತ್ತರಿಸಿದರು:


ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಅಶೇರ ಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸ ತೊಡಗಿದರು. ಅವರ ಈ ಅಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವಕೋಪ ಎರಗಿತು.


ನಿನ್ನ ನೀಚತನದಿಂದ ನಿನ್ನಂಥವನಿಗೇ ನಷ್ಟ ನಿನ್ನ ಸಜ್ಜನಿಕೆಯಿಂದ ನರಜನ್ಮದವನಿಗೇ ಲಾಭ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು