Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 22:16 - ಕನ್ನಡ ಸತ್ಯವೇದವು C.L. Bible (BSI)

16 “ಸರ್ವೇಶ್ವರನ ಸರ್ವಸಭೆ ಹೇಳುವ ಮಾತಿದು: ನೀವು ಇಸ್ರಯೇಲ್ ದೇವರಿಗೆ ವಿರುದ್ಧ ಇಂಥ ದ್ರೋಹ ಮಾಡಿದ್ದೇಕೆ? ನೀವು ನಿಮಗಾಗಿಯೇ ಒಂದು ಬಲಿಪೀಠವನ್ನು ಕಟ್ಟಿಕೊಂಡಿದ್ದೀರಿ. ಇದರಿಂದ ನೀವು ಸರ್ವೇಶ್ವರನಿಗೆ ವಿಮುಖವಾದಂತಾಯಿತು; ನೀವು ಇಂದು ಸರ್ವೇಶ್ವರನಿಗೆ ವಿರುದ್ಧ ತಿರುಗಿಬಿದ್ದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 “ಯೆಹೋವನ ಸರ್ವ ಸಭೆಯ ಮಾತನ್ನು ಕೇಳಿರಿ; ನೀವು ಇಸ್ರಾಯೇಲಿನ ದೇವರಿಗೆ ವಿರುದ್ಧವಾಗಿ ಇಂಥ ದ್ರೋಹ ಮಾಡಿದ್ದೇಕೆ? ನಿಮಗೋಸ್ಕರ ಯಜ್ಞವೇದಿಯನ್ನು ಕಟ್ಟಿಕೊಂಡದ್ದರಿಂದ ನೀವು ಯೆಹೋವನಿಗೆ ದ್ರೋಹ ಮಾಡಿದಂತಾಯಿತು; ನೀವು ಈ ಹೊತ್ತು ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯೆಹೋವನ ಸರ್ವಸಭೆಯ ಮಾತನ್ನು ಕೇಳಿರಿ - ನೀವು ಇಸ್ರಾಯೇಲ್ ದೇವರಿಗೆ ವಿರುದ್ಧವಾಗಿ ಇಂಥ ದ್ರೋಹ ಮಾಡಿದ್ದೇಕೆ? ನಿಮಗೋಸ್ಕರ ವೇದಿಯನ್ನು ಕಟ್ಟಿಕೊಂಡದರಿಂದ ನೀವು ಯೆಹೋವನಿಗೆ ವಿಮುಖರಾದ ಹಾಗಾಯಿತಲ್ಲವೇ. ನೀವು ಈ ಹೊತ್ತು ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 “ಇಸ್ರೇಲರೆಲ್ಲರೂ ನಿಮ್ಮನ್ನು ಕೇಳುವುದೇನೆಂದರೆ, ‘ಇಸ್ರೇಲಿನ ದೇವರ ವಿರುದ್ಧವಾಗಿ ನೀವು ಹೀಗೆ ಮಾಡಿದ್ದೇಕೆ? ನೀವು ಯೆಹೋವನ ವಿರುದ್ಧವಾಗಿ ತಿರುಗಿದ್ದೇಕೆ? ನಿಮಗಾಗಿ ಯಜ್ಞವೇದಿಕೆಯನ್ನು ಕಟ್ಟಿಕೊಂಡದ್ದೇಕೆ? ಇದು ದೇವರ ಉಪದೇಶಗಳಿಗೆ ವಿರುದ್ಧವಾಗಿದೆ ಎಂಬುದನ್ನು ನೀವು ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 “ಯೆಹೋವ ದೇವರ ಸರ್ವ ಸಮೂಹವು ಹೇಳುವುದೇನೆಂದರೆ: ‘ನೀವು ಈ ಹೊತ್ತು ಯೆಹೋವ ದೇವರ ಕಡೆಗೆ ತಿರುಗದೆ, ಅವರಿಗೆ ವಿರೋಧವಾಗಿ ತಿರುಗಿಬೀಳುವ ಹಾಗೆ ನಿಮಗೆ ಒಂದು ಬಲಿಪೀಠವನ್ನು ಕಟ್ಟಿಕೊಂಡು, ಇಸ್ರಾಯೇಲ್ ದೇವರಿಗೆ ಮಾಡಿದ ಈ ಅಪರಾಧವೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 22:16
8 ತಿಳಿವುಗಳ ಹೋಲಿಕೆ  

ರೂಬೇನ್ಯರು, ಗಾದ್ಯರು ಹಾಗು ಮನಸ್ಸೆಕುಲದ ಅರ್ಧಜನರು ಇಸ್ರಯೇಲ್ ನಾಡಾದ ಕಾನಾನಿನ ಪೂರ್ವಕ್ಕಿರುವ ಜೋರ್ಡನ್ ನದಿಯ ತೀರಪ್ರದೇಶದಲ್ಲಿ ಬಲಿಪೀಠವನ್ನು ಕಟ್ಟಿದ್ದಾರೆಂಬ ಸುದ್ದಿ ಮಿಕ್ಕ ಇಸ್ರಯೇಲರಿಗೆ ಮುಟ್ಟಿತು.


ಇವರು ಗಿಲ್ಯಾದಿನಲ್ಲಿದ್ದ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಕುಲದ ಅರ್ಧಜನರ ಬಳಿಗೆ ಬಂದು,


ನಮ್ಮ ದೇವರ ಕೃಪಾಹಸ್ತ ಅವರ ಎಲ್ಲ ಶರಣಾರ್ಥಿಗಳ ಮೇಲಿತ್ತು. ನಮ್ಮ ದೇವರನ್ನು ತೊರೆದುಬಿಟ್ಟವರೆಲ್ಲರು ಅವರ ಪ್ರಬಲವಾದ ರೌದ್ರಕ್ಕೆ ಗುರಿಯಾಗುವರು ಎಂದು ನಾವು ಅರಸನ ಮುಂದೆ ಹೇಳಿದ್ದೆವು. ಆದುದರಿಂದ ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕಾಗಿ ಸೈನ್ಯವನ್ನಾಗಲಿ, ಅಶ್ವಬಲವನ್ನಾಗಲಿ ಕೇಳಿಕೊಳ್ಳುವುದಕ್ಕೆ ನಾನು ನಾಚಿಕೊಂಡಿದ್ದೆ.


“ಇದಲ್ಲದೆ ನೀನು ಅವರಿಗೆ ಹೀಗೆಂದು ಆಜ್ಞಾಪಿಸು: ಇಸ್ರಯೇಲರಲ್ಲಿ ಆಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಿ ಆಗಲಿ ಯಾವನಾದರು ದಹನಬಲಿಯನ್ನು ಆಥವಾ ಬೇರೆ ವಿಧವಾದ ಬಲಿದಾನ ಮಾಡುವಾಗ


ನೀವು ವಿಧೇಯರಾಗಿ ನಡೆಯದೆ ಹೋದರೆ ಸರ್ವೇಶ್ವರ ಈ ಜನರನ್ನು ಇನ್ನೂ ಮರುಭೂಮಿಯಲ್ಲೇ ಇರಿಸುವರು; ಈ ಸಮಸ್ತ ಜನಾಂಗದ ನಾಶಕ್ಕೆ ನೀವೇ ಕಾರಣರು ಆಗುವಿರಿ,” ಎಂದನು.


ಆಗ ನೀವು ನಿರ್ಭಯರಾಗಿ ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ, ದಹನಬಲಿ ಮುಂತಾದ ಯಜ್ಞಪಶುಗಳನ್ನು, ಬೆಳೆಯ ದಶಮಾಂಶಗಳನ್ನು, ಸರ್ವೇಶ್ವರನಿಗಾಗಿ ಪ್ರತ್ಯೇಕಿಸುವ ಪದಾರ್ಥಗಳನ್ನು, ಹರಕೆಮಾಡಿದ ವಿಶೇಷ ಕಾಣಿಕೆಗಳನ್ನು, ಇವುಗಳನ್ನೆಲ್ಲ ನಿಮ್ಮ ದೇವರಾದ ಸರ್ವೇಶ್ವರ ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು