Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 21:9 - ಕನ್ನಡ ಸತ್ಯವೇದವು C.L. Bible (BSI)

9 ಲೇವಿ ಕುಲದವರು ಹಾಗೂ ಕೆಹಾತನ ಗೋತ್ರದವರು ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದ್ದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಲೇವಿ ಕುಲದವರು ಕೆಹಾತ್ಯರ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಮೊದಲು ಚೀಟು ಬಿದ್ದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಲೇವಿಕುಲದವರೂ ಕೆಹಾತನ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದ್ದದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೆಹೂದ ಮತ್ತು ಸಿಮೆಯೋನ್ ಕುಲದವರ ಪ್ರದೇಶಗಳಲ್ಲಿ ಬರುವ ಪಟ್ಟಣಗಳ ಹೆಸರುಗಳು ಇಂತಿವೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವರು ಯೆಹೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರದಲ್ಲಿಯೂ ಕೆಲವು ಪಟ್ಟಣಗಳನ್ನು ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 21:9
7 ತಿಳಿವುಗಳ ಹೋಲಿಕೆ  

ಮೇಲೆ ನಮೂದಿಸಿದ ಯೆಹೂದ, ಸಿಮೆಯೋನ್, ಬೆನ್ಯಾಮೀನ್ಯರ ಪ್ರದೇಶಗಳಲ್ಲಿದ್ದ ಪಟ್ಟಣಗಳನ್ನೂ ಸಹ ಚೀಟುಹಾಕುವುದರ ಮೂಲಕ ಹಂಚಲಾಯಿತು.


ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ ಇಸ್ರಯೇಲರು ಚೀಟು ಹಾಕಿ ಲೇವಿಯರಿಗೆ ಇಷ್ಟು ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಟ್ಟರು.


ಆದ್ದರಿಂದ ಇಸ್ರಯೇಲರು ಅವರಿಗೆ ಯೆಹೂದ ಮತ್ತು ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ನಗರಗಳನ್ನು ಕೊಟ್ಟರು:


ಇವನ ಕೈಕೆಳಗೆ ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ, ಶೆಕನ್ಯ ಎಂಬವರಿದ್ದರು. ಇವರು ಯಾಜಕರ ಪಟ್ಟಣಗಳಲ್ಲಿದ್ದು, ತಮ್ಮ ಬಂಧುಗಳಿಗೆ ದೊಡ್ಡವರು ಚಿಕ್ಕವರು ಎಂಬ ವ್ಯತ್ಯಾಸಮಾಡದೆ, ಅವರವರ ವರ್ಗಗಳ ಪ್ರಕಾರ ಪಾಲುಕೊಡುತ್ತಿದ್ದರು.


ಕೆಹಾತ್ಯರಿಗಾಗಿ ಚೀಟು ಹಾಕಿದಾಗ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳಿಂದ ಹದಿಮೂರು ನಗರಗಳು ದೊರಕಿದವು.


ಆಸಾಫನು ದ್ವಿತೀಯ ಸಂಗೀತಮಂಡಳಿಯ ನಾಯಕ. ಅವನ ಪೂರ್ವಜರ ವಂಶಾವಳಿ ಲೇವಿಯವರೆಗೆ ಹೀಗಿದೆ: ಆಸಾಫ, ಬೆರಕ್ಯ, ಶಿಮ್ಮ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು