Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 20:9 - ಕನ್ನಡ ಸತ್ಯವೇದವು C.L. Bible (BSI)

9 ಇಸ್ರಯೇಲರೆಲ್ಲರಿಗೂ ಹಾಗೂ ಅವರ ನಡುವೆ ವಾಸಮಾಡುತ್ತಿದ್ದ ಹೊರನಾಡಿನವರಿಗೂ ಇವು ಆಶ್ರಯ ನಗರಗಳಾಗಿ ನೇಮಕ ಆಗಿದ್ದವು. ಅಕಸ್ಮಾತ್ತಾಗಿ ಬೇರೊಬ್ಬನನ್ನು ಕೊಂದವನು ಓಡಿಹೋಗಿ ಹತನಾದವನ ಹತ್ತಿರ ಬಂಧುವಿನಿಂದ ತಲೆ ತಪ್ಪಿಸಿಕೊಳ್ಳಬಹುದಿತ್ತು. ನ್ಯಾಯ ಸಭೆಯ ಮುಂದೆ ನಿಲ್ಲುವ ತನಕ ಅಲ್ಲೇ ಇರಬಹುದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಇಸ್ರಾಯೇಲ್ಯರೆಲ್ಲರಿಗೂ ಹಾಗೂ ಅವರ ಮಧ್ಯದಲ್ಲಿ ವಾಸಮಾಡುತ್ತಿದ್ದ ಪರದೇಶಿಗಳಿಗೂ ಇವು ಆಶ್ರಯ ನಗರಗಳಾಗಿ ನೇಮಕ ಆಗಿದ್ದವು. ಬೇರೊಬ್ಬನನ್ನು ಆಕಸ್ಮಾತ್ತಾಗಿ ಕೊಂದವನು ಓಡಿಹೋಗಿ ಹತನಾದವನ ಹತ್ತಿರದ ಬಂಧುವಿನಿಂದ ತಲೆ ತಪ್ಪಿಸಿ ಕೊಳ್ಳಬಹುದು. ಅಲ್ಲದೆ ತಾನು ನ್ಯಾಯ ಸಭೆಯ ಮುಂದೆ ನಿಲ್ಲುವವರೆಗೆ ಅಲ್ಲೇ ಇರಬಹುದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಎಲ್ಲಾ ಇಸ್ರಾಯೇಲ್ಯರಲ್ಲಿಯೂ ಅವರ ಮಧ್ಯದಲ್ಲಿರುವ ಪರದೇಶಿಗಳಲ್ಲಿಯೂ ಬೇರೊಬ್ಬನನ್ನು ಅಕಸ್ಮಾತ್ತಾಗಿ ಕೊಂದವನು ಓಡಿಹೋಗಿ ತಾನು ನ್ಯಾಯಸಭೆಯ ಮುಂದೆ ನಿಲ್ಲುವವರೆಗೆ ಹತವಾದವನ ಸಮೀಪಬಂಧುವಿಗೆ ತಪ್ಪಿಸಿಕೊಳ್ಳುವದಕ್ಕೋಸ್ಕರ ನೇಮಕವಾದ ಪಟ್ಟಣಗಳು ಇವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಇಸ್ರೇಲಿನವನಾಗಲಿ ಅಥವಾ ಅವರೊಂದಿಗೆ ಇರುವ ಒಬ್ಬ ಪರದೇಶಿಯನಾಗಲಿ ಆಕಸ್ಮಿಕವಾಗಿ ನರಹತ್ಯೆ ಮಾಡಿದ್ದರೆ ಒಂದು ಆಶ್ರಯನಗರಕ್ಕೆ ಓಡಿಹೋಗಲು ಅವಕಾಶವಿತ್ತು. ಯಾವನೇ ಆಗಲಿ ಮತ್ತೊಬ್ಬನನ್ನು ಆಕಸ್ಮಿಕವಾಗಿ ಕೊಂದರೆ ಆ ಪಟ್ಟಣಗಳಲ್ಲಿ ಆಶ್ರಯ ಪಡೆಯಬಹುದಾಗಿತ್ತು; ಅಲ್ಲಿ ಸುರಕ್ಷಿತವಾಗಿ ವಾಸಿಸಬಹುದಾಗಿತ್ತು. ಬೆನ್ನಟ್ಟಿ ಬಂದವನು ಅವನನ್ನು ಕೊಲ್ಲಲು ಸಾಧ್ಯವಿರಲಿಲ್ಲ. ಕೊಲೆ ಮಾಡಿದವನಿಗೆ ಆ ಪಟ್ಟಣದ ನ್ಯಾಯಾಲಯವೇ ತೀರ್ಪು ನೀಡುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಕೈತಪ್ಪಿ ಅರಿಯದೆ ಅಕಸ್ಮಾತ್ತಾಗಿ ಕೊಂದವನು ಯಾವನಾದರೂ ನ್ಯಾಯಸಭೆಯ ಮುಂದೆ ಬಂದು ನಿಲ್ಲುವ ತನಕ, ಸೇಡು ತೀರಿಸಿಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿಹೋಗುವುದಕ್ಕೆ ಇಸ್ರಾಯೇಲರೆಲ್ಲರಿಗೂ, ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲಾದ ಪಟ್ಟಣಗಳು ಇವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 20:9
5 ತಿಳಿವುಗಳ ಹೋಲಿಕೆ  

ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಯೇಲನಾಗಿರಲಿ, ಪರದೇಶದವನಾಗಿರಲಿ ಅಥವಾ ನಿಮ್ಮ ಮಧ್ಯೆ ವಾಸಿಸುವವನಾಗಿರಲಿ, ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಪಡೆಯಲಿ.


ಅಂಥವನನ್ನು ಒಂದು ಸಭೆಸೇರಿಸಿ ವಿಚಾರಿಸಬೇಕು. ಅವನು ಆಗಿನ ಪ್ರಧಾನ ಯಾಜಕನ ಜೀವಮಾನವೆಲ್ಲಾ ಅದೇ ನಗರದಲ್ಲಿರಬೇಕು. ಆಮೇಲೆ ತಾನು ಬಿಟ್ಟುಬಂದ ಊರಿಗೆ, ಮನೆಗೆ ಹಿಂದಿರುಗಬಹುದು’ ಎಂದು ತಿಳಿಸು,” ಎಂದರು.


ಅಂಥ ನಗರಕ್ಕೆ ಓಡಿಹೋದವನು ಮೊದಲು ಊರಬಾಗಿಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಗೆ ಸೇರಿಸಿಕೊಳ್ಳಲಿ; ವಾಸಕ್ಕೆ ಸ್ಥಳಕೊಡಲಿ.


ಹೀಗೆ ಆಶ್ರಯಧಾಮಗಳಾಗಿರಲು ಜೋರ್ಡನ್ ನದಿಯ ಈಚೆಕಡೆ


ಇವುಗಳನ್ನು ಮಾತ್ರವಲ್ಲ ಜೆರಿಕೋವಿನ ಪೂರ್ವದಲ್ಲಿರುವ ಜೋರ್ಡನಿನ ಆಚೆಯಲ್ಲಿ ರೂಬೇನ್ಯರ ಬೆಟ್ಟದ ಮೇಲಿನ ಮರುಭೂಮಿಯಲ್ಲಿರುವ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದ ರಾಮೋತ್, ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್ ಎಂಬ ನಗರಗಳನ್ನು ನೇಮಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು