Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 19:40 - ಕನ್ನಡ ಸತ್ಯವೇದವು C.L. Bible (BSI)

40 ಏಳನೇ ಸಾರಿಯ ಚೀಟು ದಾನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸೊತ್ತಾಗಿ ದೊರಕಿದ ಊರುಗಳು ಇವು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಚೀಟು ಏಳನೆಯ ಸಾರಿ ದಾನನ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸ್ವತ್ತಾಗಿ ದೊರಕಿದ ಊರುಗಳು ಯಾವುವೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಚೀಟು ಏಳನೆಯ ಸಾರಿ ದಾನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸ್ವಾಸ್ತ್ಯವಾಗಿ ದೊರಕಿದ ಊರುಗಳು ಯಾವವಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಆಮೇಲೆ ದಾನ್ ಕುಲದವರಿಗೆ ಭೂಮಿಯನ್ನು ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರವು ತನ್ನ ಭೂಮಿಯನ್ನು ಪಡೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಇದಲ್ಲದೆ ಏಳನೆಯ ಚೀಟು ಬಿದ್ದ ಭಾಗವು ದಾನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 19:40
7 ತಿಳಿವುಗಳ ಹೋಲಿಕೆ  

ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಾಗಿವೆ.


ಆ ಕಾಲದಲ್ಲಿ ಇಸ್ರಯೇಲರಿಗೆ ಅರಸನಿರಲಿಲ್ಲ. ದಾನ್ ಕುಲದವರಿಗೆ ಆವರೆಗೂ ಇಸ್ರಯೇಲರಲ್ಲಿ ಆಸ್ತಿಪಾಸ್ತಿ ಸಿಕ್ಕದೆ ಇದ್ದುದರಿಂದ ಅವರು ತಮಗಾಗಿ ವಾಸಸ್ಥಳವನ್ನು ಹುಡುಕುತ್ತಿದ್ದರು.


ಆ ಕುಲಗಳ ಹೆಸರುಗಳು ಇವು: ನಾಡಿನ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನಿಗೆ ಒಂದು ಪಾಲು; ಅದರ ಉತ್ತರದ ಮೇರೆ ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು ಹಮಾತಿನ ದಾರಿಯನ್ನು ದಾಟಿ ದಮಸ್ಕದ ಸರಹದ್ದಿನಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು;


ದಾನ್, ನಫ್ತಾಲಿ - ಇವರು ರಾಖೇಲಳ ದಾಸಿ ಬಿಲ್ಹಳಲ್ಲಿ ಹುಟ್ಟಿದವರು.


ಪ್ರತಿಯೊಂದು ಕುಲದ ಮೂಲಪುರುಷನ ಹೆಸರನ್ನು ಬರೆದು ಚೀಟು ಹಾಕಿ ಆಯಾ ಕುಲಕ್ಕೆ ಸೊತ್ತನ್ನು ಗೊತ್ತುಮಾಡು.


ಹೀಗೆ ಯೆಹೋಶುವನು ಮಲೆನಾಡಿನ ಪ್ರದೇಶ, ದಕ್ಷಿಣಪ್ರಾಂತ್ಯ, ಇಳಿಜಾರಿನ ಪ್ರದೇಶ, ಬೆಟ್ಟಗುಡ್ಡಗಳ ಬುಡ ಪ್ರದೇಶ ಇವುಗಳನ್ನು ಸ್ವತಂತ್ರಿಸಿಕೊಂಡು ಇವುಗಳ ರಾಜಪ್ರಜೆಗಳನ್ನು ಸಂಹರಿಸಿಬಿಟ್ಟನು. ಒಬ್ಬನನ್ನೂ ಉಳಿಸಲಿಲ್ಲ. ಇಸ್ರಯೇಲ್ ದೇವರಾದ ಸರ್ವೇಶ್ವರನ ಆಜ್ಞೆಯಂತೆ ಜೀವವಿರುವುದೆಲ್ಲವನ್ನು ಶಾಪನಾಶಕ್ಕೆ ಗುರಿಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು