ಯೆಹೋಶುವ 18:19 - ಕನ್ನಡ ಸತ್ಯವೇದವು C.L. Bible (BSI)19 ಅಲ್ಲಿಂದ ಆ ಎಲ್ಲೆ ಬೇತ್ ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಉತ್ತರ ಮೂಲೆಗೆ ಹೋಗಿ ಜೋರ್ಡನ್ ನದಿಯು ಆ ಸಮುದ್ರಕ್ಕೆ ಕೂಡುವ ಸ್ಥಳದಲ್ಲಿ ಮುಗಿಯುತ್ತದೆ. ಇದೇ ದಕ್ಷಿಣದಿಕ್ಕಿನ ಸರಹದ್ದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಅಲ್ಲಿಂದ ಮೇರೆಯು ಬೇತ್ ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಬಡಗಣ ಮೂಲೆಗೆ ಹೋಗಿ ಯೊರ್ದನ್ ನದಿಯು ಸಮುದ್ರಕ್ಕೆ ಬಂದು ಸೇರುವ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. ಇದೇ ದಕ್ಷಿಣ ದಿಕ್ಕಿನ ಮೇರೆಯು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಅಲ್ಲಿಂದ ಮೇರೆಯು ಬೇತ್‍ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಬಡಗಣ ಮೂಲೆಗೆ ಹೋಗಿ ಯೊರ್ದನ್ ಹೊಳೆಯು ಆ ಸಮುದ್ರಕ್ಕೆ ಕೂಡುವ ಸ್ಥಳದಲ್ಲಿ ಮುಗಿಯುತ್ತದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಅಲ್ಲಿಂದ ಆ ಮೇರೆಯು ಬೇತ್‌ಹೊಗ್ಲಾವಿನ ಉತ್ತರಭಾಗದಲ್ಲಿ ಮುಂದುವರೆದು ಲವಣಸಮುದ್ರದ ಉತ್ತರ ದಡದಲ್ಲಿ ಮುಕ್ತಾಯಗೊಳ್ಳುತ್ತದೆ. ಜೋರ್ಡನ್ ನದಿಯು ಸಮುದ್ರಕ್ಕೆ ಸೇರುವುದು ಇಲ್ಲಿಯೇ. ಇದು ದಕ್ಷಿಣದಿಕ್ಕಿನ ಸೀಮೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಅಲ್ಲಿಂದ ಆ ಮೇರೆ ಬೇತ್ ಹೊಗ್ಲಾಕ್ಕೆ ಉತ್ತರ ಕಡೆಯಾಗಿ ಹೊರಟು, ಯೊರ್ದನ್ ನದಿ ಮುಖ ದ್ವಾರಕ್ಕೆ ಉತ್ತರವಾದ ಲವಣ ಸಮುದ್ರ ಎಂಬ ಲವಣ ಸಮುದ್ರದ ಉತ್ತರ ಮೂಲೆಯಲ್ಲಿ ಮುಗಿಯುತ್ತದೆ. ಇದೇ ದಕ್ಷಿಣ ಭಾಗದ ಮೇರೆ. ಅಧ್ಯಾಯವನ್ನು ನೋಡಿ |