Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 17:11 - ಕನ್ನಡ ಸತ್ಯವೇದವು C.L. Bible (BSI)

11 ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬವರ ಪ್ರಾಂತ್ಯಗಳಲ್ಲಿ ಬೇತ್ ಷೆಯಾನ್, ಇಬ್ಲೆಯಾಮ್, ದೋರ್ ಎಂಬ ನಗರಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ್, ತಾನಕ್, ಮೆಗಿದ್ದೋ ಎಂಬ ನಗರಗಳೂ ಅವುಗಳಿಗೆ ಸೇರಿದ ಊರುಗಳೂ ಸಿಕ್ಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬುವವರ ಪ್ರಾಂತ್ಯಗಳಲ್ಲಿ ಬೇತಷೆಯಾನ್, ಇಬ್ಲೆಯಾಮ, ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ, ತಾನಾಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳಿಗೆ ಸೇರಿದ ಊರುಗಳು ಸಿಕ್ಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬವರ ಪ್ರಾಂತಗಳಲ್ಲಿ ಬೇತ್‍ಷೆಯಾನ್, ಇಬ್ಲೆಯಾಮ್, ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳಿಗೆ ಸೇರಿದ ಊರುಗಳೂ ಸಿಕ್ಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಮನಸ್ಸೆ ಕುಲದವರು ಇಸ್ಸಾಕಾರ್, ಆಶೇರ್ ಪ್ರಾಂತಗಳಲ್ಲಿಯೂ ಕೆಲವು ಊರುಗಳನ್ನು ಹೊಂದಿದ್ದರು. ಬೇತ್‌ಷೆಯಾನ್, ಇಬ್ಲೆಯಾಮ್ ಮತ್ತು ಅವುಗಳ ಸುತ್ತಮುತ್ತಲಿನ ಸಣ್ಣ ಊರುಗಳು ಮನಸ್ಸೆಯ ಜನರ ಅಧೀನದಲ್ಲಿದ್ದವು. ಮನಸ್ಸೆಯ ಜನರು ದೋರ್, ಎಂದೋರ್, ತಾನಕ್, ಮೆಗಿದ್ದೋ ಮತ್ತು ಆ ಪಟ್ಟಣಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ವಾಸವಾಗಿದ್ದರು. ಅವರು ನಾಫೊತ್‌ನ ಮೂರು ಊರುಗಳಲ್ಲಿಯೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದಲ್ಲಿಯೂ ಇರುವ ಸೀಮೆಗಳಾದ ಬೇತ್ ಷೆಯಾನ, ಅದರ ಗ್ರಾಮಗಳೂ ಇಬ್ಲೆಯಾಮ್ ಅದರ ಗ್ರಾಮಗಳೂ ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಗೆ ಸೇರಿದವು. ಮೂರನೆಯ ಊರು ನಾಫೋತ್ ಆಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 17:11
22 ತಿಳಿವುಗಳ ಹೋಲಿಕೆ  

ಮನಸ್ಸೆಯ ಸಂತಾನದವರು ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಗ್ರಾಮಗಳನ್ನೂ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಯಕೋಬನ ಮಗ ಜೋಸೆಫನ ಸಂತತಿಯವರು ಈ ಎಲ್ಲಾ ಪ್ರದೇಶಗಳಲ್ಲಿ ವಾಸಿಸಿದರು.


ಜುದೇಯದ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು ಬೇತ್‍ಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನನ್ನು ಹಿಂದಟ್ಟಿ, “ಅವನನ್ನೂ ರಥದಲ್ಲಿಯೇ ಹೊಡೆಯಿರಿ,” ಎಂದು ಕೂಗಲು ಅವನ ಜನರು ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಗಟ್ಟದ ಮೇಲೆ ಅವನನ್ನು ಗಾಯಪಡಿಸಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತನು.


ಎದ್ದುಬಂದು ಯುದ್ಧ ಮಾಡಿದರು ಅರಸುಗಳು ಕೂಡಿಬಂದು ಕಾದಾಡಿದರು ಕಾನಾನ್ಯ ರಾಜರುಗಳು ಮೆಗಿದ್ದೋ ನದಿಗಳ ಬಳಿ ತಾನಾಕದೊಳು ಆದರೆ ಗಿಟ್ಟಲಿಲ್ಲ ಅವರಿಗೆ ಬೆಳ್ಳಿದ್ರವ್ಯಗಳೇನು!


ಮನಸ್ಸೆಕುಲದವರು ಬೇತ್ ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ಎಂಬ ಪಟ್ಟಣಗಳನ್ನೂ ಅವುಗಳ ಗ್ರಾಮಗಳನ್ನೂ ಸ್ವಾಧೀನಮಾಡಿಕೊಳ್ಳಲಿಲ್ಲ, ಆದುದರಿಂದ ಕಾನಾನ್ಯರು ಆ ಪ್ರಾಂತ್ಯಗಳಲ್ಲೇ ವಾಸಿಸುವುದಕ್ಕೆ ನಿರ್ಧರಿಸಿಕೊಂಡರು.


ದೋರ್ ಬೆಟ್ಟದ ಮೇಲಿರುವ ದೋರಿನ ಅರಸ - 1 ಗಿಲ್ಗಾಲಿನವರ ಅರಸ - 1 ತಿರ್ಚದ ಅರಸ - 1


ಎಂದೋರಿನಲ್ಲವರು ಕೊಲೆಯಾದರು I ಹೊಲಗದ್ದೆಗಳಿಗೆ ಗೊಬ್ಬರವಾದರು II


ಸರ್ವೇಶ್ವರನ ಆಲಯ, ಅರಮನೆ, ಮಿಲ್ಲೋಕೋಟೆ, ಜೆರುಸಲೇಮಿನ ಪೌಳಿಗೋಡೆ, ಹಾಚೋರ್, ಮೆಗಿದ್ದೋ ಹಾಗು ಗೆಜೆರ್ ಇವುಗಳನ್ನು ಸೊಲೊಮೋನನು ಬಿಟ್ಟೀಕೆಲಸದವರಿಂದ ಕಟ್ಟಿಸಿದನು.


ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಗುಡಿಯಲ್ಲಿಟ್ಟರು. ಅವನ ಶವವನ್ನು ಬೇತ್ ಷೆಯಾನಿನ ಕೋಟೆ ಗೋಡೆಗೆ ನೇತುಹಾಕಿದರು.


ಆದುದರಿಂದ ಅವನು ತನ್ನ ಸೇವಕರಿಗೆ, “ಭೂತಪ್ರೇತಗಳಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ; ನಾನು ಆಕೆಯ ಬಳಿಗೇ ಹೋಗಿ ವಿಚಾರಿಸುವೆನು,” ಎಂದು ಹೇಳಿದನು. ಅವರು, “ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ,” ಎಂದರು.


ಉತ್ತರದಿಕ್ಕಿನ ಪರ್ವತಪ್ರದೇಶ, ಕಿನ್ನೆರೋತ್ ಸಮುದ್ರದ ದಕ್ಷಿಣದಲ್ಲಿನ ಕಣಿವೆಪ್ರದೇಶ, ಇಳಿಜಾರು ಪ್ರದೇಶ, ದೋರ್ ಊರಿನ ಪಶ್ಚಿಮದಲ್ಲಿದ್ದ ಮಲೆನಾಡಿನ ಪ್ರದೇಶ, ಇವುಗಳ ಅರಸರಿಗೂ


ಮೆಗಿದ್ದೋವಿನ ಕಣಿವೆಯಲ್ಲಿ ಆದಂತೆ, ಹದಾಧ್ - ರೀಮೋನ್‍ನಲ್ಲಿ ನಡೆದಂತೆ ಜೆರುಸಲೇಮಿನಲ್ಲಿ ಆ ದಿನದಂದು ದೊಡ್ಡ ಗೋಳಾಟವಾಗುವುದು.


ಆದರೆ ಯೋಷೀಯನು ಅವನನ್ನು ಬಿಟ್ಟು ಹಿಂದಿರುಗಲಿಲ್ಲ. ದೇವೋಕ್ತಿಯಾಗಿದ್ದ ನೆಕೋವಿನ ಮಾತಿಗೆ ಕಿವಿಗೊಡದೆ, ವೇಷಹಾಕಿಕೊಂಡು ಅವನೊಡನೆ ಕಾದಾಡುವುದಕ್ಕೆ ಮೆಗಿದ್ದೋ ಬಯಲಿಗೆ ಹೋದನು.


ಪೂರ್ವದ ಮನಸ್ಸೆ ಪ್ರದೇಶದ ಆನೇರ್, ಬಿಳ್ಳಾಮ್ ಪಟ್ಟಣಗಳು ಅವುಗಳ ಸುತ್ತಲಿನ ಫಲವತ್ತಾದ ಪ್ರದೇಶಗಳನ್ನು ಅವರಿಗಾಗಿ ಪ್ರತ್ಯೇಕಿಸಲಾಯಿತು.


ಆಗ ಅವರಲ್ಲಿದ್ದ ಶೂರರೆಲ್ಲರೂ ಹೊರಟು, ರಾತ್ರಿಯೆಲ್ಲಾ ನಡೆದುಹೋಗಿ, ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ ಷೆಯಾನಿನ ಗೋಡೆಯಿಂದ ಇಳಿಸಿ, ಯಾಬೇಷಿಗೆ ತೆಗೆದುಕೊಂಡು ಬಂದು, ಅಲ್ಲಿ ಅವುಗಳನ್ನು ದಹಿಸಿದರು.


ಇದಲ್ಲದೆ, ಎಫ್ರಯಿಮ್ ಕುಲದವರಿಗೆ ಮನಸ್ಸೆ ಕುಲದವರ ಮಧ್ಯೆ ಪ್ರತ್ಯೇಕವಾದ ಕೆಲವು ನಗರಗಳೂ ಅವಕ್ಕೆ ಸೇರಿದ ಗ್ರಾಮಗಳೂ ದೊರಕಿದವು.


ಮೆಗಿದ್ದೋವಿನ ಅರಸ - 1 ಕೆದೆಷಿನ ಅರಸ - 1


ಆ ಹಳ್ಳದ ದಕ್ಷಿಣ ತೀರ ಎಫ್ರಯಿಮ್ಯರದು; ಉತ್ತರ ತೀರ ಮನಸ್ಸೆಯವರದು. ಸಮುದ್ರವೇ ಇವರ ಪಶ್ಚಿಮದ ಎಲ್ಲೆ. ಉತ್ತರಕ್ಕೆ ಆಶೇರ ಕುಲದವರ ಪ್ರಾಂತ್ಯವೂ ಪೂರ್ವಕ್ಕೆ ಇಸ್ಸಾಕಾರ್ ಕುಲದವರ ನಾಡೂ ಇರುತ್ತವೆ.


ಅವರು ಮತ್ತೆ ಯೆಹೋಶುವನಿಗೆ , “ನಮ್ಮ ಮಲೆನಾಡು ನಮಗೆ ಸಾಲುವುದಿಲ್ಲ. ಬೇತ್ ಷೆಯಾನ್ ಮತ್ತು ಅದಕ್ಕೆ ಸೇರಿದ ಊರುಗಳಿರುವ ಕಣಿವೆಯಲ್ಲೂ ಹಾಗೂ ಇಜ್ರೇಲಿನ ಕಣಿವೆಯಲ್ಲೂ ವಾಸಮಾಡುವ ಕಾನಾನ್ಯರೆಲ್ಲರು ಕಬ್ಬಿಣದ ರಥವುಳ್ಳವರು,” ಎಂದರು.


ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕಾಗಿ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು.


ಆದುದರಿಂದ ಇಗೋ ಕೇಳಿ: ನನ್ನ ಅಪ್ಪಣೆಯ ಮೇರೆಗೆ ಶತ್ರುಗಳು ರಬ್ಬಾ ಎಂಬ ಅಮ್ಮೋನ್ಯರ ನಗರದ ಮೇಲೆ ಬಿದ್ದು ಯುದ್ಧ ಘೋಷಣೆ ಮಾಡುವ ದಿನಗಳು ಬರುವುವು. ಆ ನಗರ ಹಾಳುದಿಬ್ಬವಾಗುವುದು. ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವುವು. ಆಗ ಇಸ್ರಯೇಲ್ ತನ್ನನ್ನು ವಶಮಾಡಿಕೊಂಡವರನ್ನು ತಾನು ವಶಮಾಡಿಕೊಳ್ಳುವುದು. ಇದು ಸರ್ವೇಶ್ವರನಾದ ನನ್ನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು