ಯೆಹೋಶುವ 16:1 - ಕನ್ನಡ ಸತ್ಯವೇದವು C.L. Bible (BSI)1 ಜೋಸೆಫನ ವಂಶದವರಿಗೆ ದೊರಕಿದ ಆಸ್ತಿಪಾಸ್ತಿಯ ಎಲ್ಲೆಯು ಜೆರಿಕೋವಿನ ಬಳಿಯಲ್ಲಿ ಜೋರ್ಡನ್ ತೀರದಿಂದ ತೊಡಗಿ ಜೆರಿಕೋವಿನ ಪೂರ್ವದಲ್ಲಿದ್ದ ನದಿ, ಜೆರಿಕೋವಿಗೂ ಬೇತೇಲಿಗೂ ನಡುವೆ ಇರುವ ಮಲೆನಾಡಿನ ಮರುಭೂಮಿ ಹಾಗೂ ಬೇತೇಲ್ ಇವುಗಳ ಮೇಲೆ ಲೂಜಿಗೆ ಹೋಗುತ್ತದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೋಸೇಫನ ವಂಶದವರಿಗೆ ದೊರಕಿದ ಸ್ವತ್ತಿನ ಮೇರೆಯು: ಯೆರಿಕೋವಿನ ಬಳಿಯಲ್ಲಿ ಯೊರ್ದನ್ ತೀರದಿಂದ ಯೆರಿಕೋವಿನ ಪೂರ್ವದಲ್ಲಿದ್ದ ನದಿ, ಯೆರಿಕೋವಿಗೂ ಬೇತೇಲಿಗೂ ನಡುವೆ ಇರುವ ಬೆಟ್ಟದ ಸೀಮೆಯ ಅರಣ್ಯ ಹಾಗೂ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೋಸೇಫನ ವಂಶದವರಿಗೆ ದೊರಕಿದ ಸ್ವಾಸ್ತ್ಯದ ಮೇರೆಯು ಯೆರಿಕೋವಿನ ಬಳಿಯಲ್ಲಿ ಯೊರ್ದನ್ ತೀರದಿಂದ ತೊಡಗಿ ಯೆರಿಕೋವಿನ ಪೂರ್ವದಲ್ಲಿದ್ದ ಹಳ್ಳ, ಯೆರಿಕೋವಿಗೂ ಬೇತೇಲಿಗೂ ನಡುವೆ ಇರುವ ಬೆಟ್ಟದ ಸೀಮೆಯ ಅರಣ್ಯ, ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಯೋಸೇಫನ ಕುಟುಂಬದವರು ಈ ಸ್ವಾಸ್ತ್ಯವನ್ನು ಪಡೆದುಕೊಂಡರು. ಅವರ ಸ್ವಾಸ್ತ್ಯವು ಜೋರ್ಡನ್ ನದಿಯಿಂದ (ಜೆರಿಕೊ ಹತ್ತಿರ) ಆರಂಭವಾಗಿ ಜೆರಿಕೊವಿನ ಹಳ್ಳಗಳ ಉದ್ದಕ್ಕೂ ಮುಂದುವರೆದಿದೆ. (ಇದು ಜೆರಿಕೊವಿನ ಪೂರ್ವದಲ್ಲಿದೆ.) ಆ ಸೀಮೆಯು ಜೆರಿಕೊವಿನಿಂದ ಬೇತೇಲಿನ ಬೆಟ್ಟಪ್ರದೇಶಕ್ಕೆ ಮುಂದುವರೆಯುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಉಂಟಾದ ಸೊತ್ತಿನ ವಿವರ: ಯೆರಿಕೋವಿನ ಬಳಿಯಲ್ಲಿರುವ ಯೊರ್ದನ್ ನದಿಯಿಂದ ಪೂರ್ವದಲ್ಲಿರುವ ಯೆರಿಕೋವಿನ ಜಲದವರೆಗೂ ಮತ್ತು ಬೇತೇಲಿನ ಬೆಟ್ಟಗಳವರೆಗೂ ಇರುವ ಮರುಭೂಮಿಯ ಮಾರ್ಗವಾಗಿ ಹೋಗಿತ್ತು. ಅಧ್ಯಾಯವನ್ನು ನೋಡಿ |