Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 15:17 - ಕನ್ನಡ ಸತ್ಯವೇದವು C.L. Bible (BSI)

17 ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನಿಯೇಲನು ಅದರ ಮೇಲೆ ದಾಳಿಮಾಡಿ ತೆಗೆದುಕೊಂಡನು. ಅವನಿಗೆ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನೀಯೇಲನು ಅದನ್ನು ವಶಪಡಿಸಿಕೊಂಡನು. ಅವನಿಗೆ ಕಾಲೇಬನ ಮಗಳಾದ ಅಕ್ಷಾಳನ್ನು ಮದುವೆಮಾಡಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನೀಯೇಲನು ಅದನ್ನು ತೆಗೆದುಕೊಳ್ಳಲು ಅವನಿಗೆ ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆಮಾಡಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಕೆನಜನ ಮಗನಾದ ಒತ್ನೀಯೇಲನು ಆ ಪಟ್ಟಣವನ್ನು ಗೆದ್ದನು. ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನಿಗೆ ಮದುವೆ ಮಾಡಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 15:17
9 ತಿಳಿವುಗಳ ಹೋಲಿಕೆ  

ಇಸ್ರಯೇಲರು ಮೊರೆಯಿಟ್ಟಾಗ ಅವರನ್ನು ಬಿಡುಗಡೆ ಮಾಡಲು ಸರ್ವೇಶ್ವರ ಒಬ್ಬ ವ್ಯಕ್ತಿಯನ್ನು ಎಬ್ಬಿಸಿದರು; ಆತನೇ ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲ್.


ಅಂತೆಯೇ ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದುಕೊಂಡಾಗ ಕಾಲೇಬನು ತನ್ನ ಮಗಳು ಅಕ್ಷಾ ಎಂಬಾಕೆಯನ್ನು ಆತನಿಗೆ ಮದುವೆಮಾಡಿಕೊಟ್ಟನು.


ನಾಡಿನಲ್ಲಿ ನಾಲ್ವತ್ತು ವರ್ಷಗಳ ಕಾಲ ನೆಮ್ಮದಿ ನೆಲಸಿತ್ತು. ತರುವಾಯ ಕೆನಜನ ಮಗ ಒತ್ನೀಯೇಲನು ಮರಣ ಹೊಂದಿದನು.


ಯೆಹೋಶುವನು ಗಿಲ್ಗಾಲಿನಲ್ಲಿದ್ದಾಗ ಯೆಹೂದ ಕುಲದವರು ಅವನ ಬಳಿಗೆ ಬಂದರು. ಅವರಲ್ಲಿ ಕೆನೆಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಯೆಹೋಶುವನಿಗೆ, “ಸರ್ವೇಶ್ವರ ಕಾದೇಶ್ ಬರ್ನೇಯದಲ್ಲಿ ನಮ್ಮಿಬ್ಬರ ವಿಷಯವಾಗಿ ದೇವರ ಭಕ್ತನಾದ ಮೋಶೆಗೆ ಹೇಳಿದ್ದು ನಿಮಗೆ ಚೆನ್ನಾಗಿ ಗೊತ್ತಿದೆ.


ಅನಂತರ ಅವಳಿಗೆ ಮತ್ತೆ ಇಬ್ಬರು ಮಕ್ಕಳು ಜನಿಸಿದರು: ಮದ್ಮನ್ನ ಪಟ್ಟಣವನ್ನು ಕಟ್ಟಿಸಿದ ಶಾಫ್ ಒಬ್ಬನು. ಮಕ್‍ಬೇನ ಮತ್ತು ಗಿಬ್ಯ ಪಟ್ಟಣಗಳನ್ನು ಕಟ್ಟಿಸಿದ ಶೆವ ಇನ್ನೊಬ್ಬನು. ಇವರಲ್ಲದೆ ಕಾಲೇಬನಿಗೆ ಅಕ್ಸಾಹ ಎಂಬ ಹೆಣ್ಣು ಮಗಳು ಇದ್ದಳು.


ಆದ್ದರಿಂದ ಈ ಜನರಲ್ಲಿ ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸಿನವರಲ್ಲಿ ಅವರಿಬ್ಬರೇ ಹೊರತಾಗಿ ಬೇರಾರೂ ಅಬ್ರಹಾಮ್, ಇಸಾಕ್ ಮತ್ತು ಯಕೋಬರಿಗೆ ನಾನು ಪ್ರಮಾಣಪೂರ್ವಕವಾಗಿ ಕೊಟ್ಟ ನಾಡನ್ನು ನೋಡುವುದೇ ಇಲ್ಲ’ ಎಂದು ಖಂಡಿತವಾಗಿ ಹೇಳಿದರು.


ಅವನು, “ಕಿರ್ಯತ್ ಸೇಫೆರದ ಮೇಲೆ ದಾಳಿಮಾಡಿ ಹಿಡಿದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆಮಾಡಿಕೊಡುತ್ತೇನೆ,” ಎಂದನು.


ಕೆನಜನ ಮಕ್ಕಳು - ಒತ್ನೀಯೇಲ್, ಸೆರಾಯ ಎಂಬವರು. ಒತ್ನೀಯೇಲನಿಗೆ ಹತತ್, ಮೆಯೋನೋತೈ ಎಂಬಿಬ್ಬರು ಮಕ್ಕಳಿದ್ದರು.


ನೆಟೋಫ ಊರಿನವನೂ ಒತ್ನೀಯೇಲನ ಸಂತಾನದವನೂ ಆದ ಹೆಲ್ದೈಯು ಹನ್ನೆರಡನೆಯ ವರ್ಗದ ನಾಯಕ; ಹನ್ನೆರಡನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು