Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 13:33 - ಕನ್ನಡ ಸತ್ಯವೇದವು C.L. Bible (BSI)

33 ಆದರೆ ಲೇವಿಯ ಕುಲಕ್ಕೆ ಮೋಶೆ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನೇ ಅವರ ಸೊತ್ತೆಂದು ವಾಗ್ದಾನ ಮಾಡಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಆದರೆ ಲೇವಿಯ ಕುಲಕ್ಕೆ ಮೋಶೆಯು ಯಾವ ಸ್ವತ್ತನ್ನು ಕೊಡಲಿಲ್ಲ. ಯಾಕೆಂದರೆ ಇಸ್ರಾಯೇಲ್ಯರ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ಆತನೇ ಅವರ ಸ್ವತ್ತಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಆದರೆ ಲೇವಿಯ ಕುಲಕ್ಕೆ ಮೋಶೆಯು ಸ್ವಾಸ್ತ್ಯವನ್ನು ಕೊಡಲಿಲ್ಲ. ಇಸ್ರಾಯೇಲ್‍ದೇವರಾದ ಯೆಹೋವನ ವಾಗ್ದಾನದಂತೆ ಆತನೇ ಅವರ ಸ್ವಾಸ್ತ್ಯವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಮೋಶೆಯು ಲೇವಿಕುಲದವರಿಗೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಇಸ್ರೇಲಿನ ದೇವರಾದ ಯೆಹೋವನು ಲೇವಿಯ ಕುಲದವರಿಗೆ ವಾಗ್ದಾನ ಮಾಡಿದಂತೆ ಆತನೇ ಅವರಿಗೆ ಸ್ವಾಸ್ತ್ಯವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಆದರೆ ಲೇವಿಯರ ಗೋತ್ರಕ್ಕೆ ಮೋಶೆಯು ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ದೇವರು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲರ ದೇವರಾದ ಯೆಹೋವ ದೇವರೇ ಅವರ ಸೊತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 13:33
7 ತಿಳಿವುಗಳ ಹೋಲಿಕೆ  

ಲೇವಿಯರಿಗೆ ನಿಮ್ಮ ಹಾಗೆ ಪಾಲು ಸಿಕ್ಕುವುದಿಲ್ಲ. ಸರ್ವೇಶ್ವರನಿಗೆ ಸಲ್ಲಿಸುವ ಯಾಜಕ ಸೇವೆಯೇ ಅವರ ಸೊತ್ತು. ಗಾದ್ ಹಾಗೂ ರೂಬೇನ್ ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಜೋರ್ಡನಿನ ಪೂರ್ವದಿಕ್ಕಿನಲ್ಲಿ ಸರ್ವೇಶ್ವರನ ದಾಸ ಮೋಶೆಯಿಂದಲೇ ಸೊತ್ತು ಸಿಕ್ಕಿದೆ,” ಎಂದನು.


ಲೇವಿ ಕುಲದವರಿಗೆ ಮಾತ್ರ ಯಾವ ಪಾಲೂ ಸಿಕ್ಕಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನು ಆಜ್ಞಾಪಿಸಿದಂತೆ ಯಜ್ಞಶೇಷವೇ ಅವರ ಸೊತ್ತಾಗಿತ್ತು.


ಆದುದರಿಂದ ಮಿಕ್ಕ ಇಸ್ರಯೇಲರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ವಾಸ್ತ್ಯ ದೊರಕಲಿಲ್ಲ. ನಿಮ್ಮ ದೇವರಾದ ಸರ್ವೇಶ್ವರ ಅವರಿಗೆ ಹೇಳಿದಂತೆ ಸರ್ವೇಶ್ವರಸ್ವಾಮಿಯೇ ಅವರ ಸೊತ್ತು.


ಇದಲ್ಲದೆ ಸರ್ವೇಶ್ವರ ಆರೋನನಿಗೆ ಹೀಗೆಂದರು: “ಇಸ್ರಯೇಲರ ನಾಡಿನಲ್ಲಿ ನಿನ್ನ ಸ್ವಂತ ಸೊತ್ತಾಗಿ ಯಾವ ಆಸ್ತಿಯೂ ಇರುವುದಿಲ್ಲ; ಅವರೊಂದಿಗೆ ನಿನಗೆ ಯಾವ ಪಾಲೂ ಇರುವುದಿಲ್ಲ. ಇಸ್ರಯೇಲರ ನಡುವೆ ನಾನೇ ನಿನಗೆ ಆಸ್ತಿಪಾಸ್ತಿ, ಪಾಲುಪಸುಗೆ.”


ಮೋಶೆ ಜೋರ್ಡನಿನ ಆಚೆ ಜೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲು ಪ್ರದೇಶದಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಂತ ಆಸ್ತಿಯಾಗಿ ಕೊಟ್ಟನು.


“ಯಾಜಕರಿಗೆ ಇರುವ ಒಂದು ಸೊತ್ತು ಎಂದರೆ ನಾನೇ. ಇಸ್ರಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು. ನಾನೇ ಅವರಿಗೆ ಆಸ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು