Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 12:6 - ಕನ್ನಡ ಸತ್ಯವೇದವು C.L. Bible (BSI)

6 ಸರ್ವೇಶ್ವರನ ದಾಸ ಮೋಶೆ ಇಸ್ರಯೇಲರ ಸಹಿತವಾಗಿ ಈ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ ಗಾದ್ಯರಿಗೂ ಮತ್ತು ಮನಸ್ಸೆಕುಲದ ಅರ್ಧಜನರಿಗೂ ಶಾಶ್ವತ ಸೊತ್ತಾಗಿ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಯೆಹೋವನ ಸೇವಕನಾದ ಮೋಶೆಯೂ, ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವತ್ತಾಗಿ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಯೆಹೋವನ ಸೇವಕನಾದ ಮೋಶೆಯು ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನೂ ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಕುಲದ ಅರ್ಧ ಜನರಿಗೂ ಸ್ವಾಸ್ತ್ಯವಾಗಿ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯೆಹೋವನ ಸೇವಕನಾದ ಮೋಶೆಯು ಮತ್ತು ಇಸ್ರೇಲರು ಈ ಎಲ್ಲ ಅರಸರನ್ನು ಸೋಲಿಸಿದರು. ಮೋಶೆಯು ಈ ಪ್ರದೇಶವನ್ನು ರೂಬೇನನ ಕುಲದವರಿಗೂ ಗಾದನ ಕುಲದವರಿಗೂ ಮನಸ್ಸೆ ಕುಲದ ಅರ್ಧಜನರಿಗೂ ಸ್ವಾಸ್ತ್ಯವಾಗಿ ಕೊಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 12:6
11 ತಿಳಿವುಗಳ ಹೋಲಿಕೆ  

ಹೀಗೆ ಮೋಶೆ ಗಾದ್ಯರಿಗು, ರೂಬೇನ್ಯರಿಗು, ಹಾಗು ಜೋಸೆಫನ ಮಗನಾದ ಮನಸ್ಸೆಯ ಕುಲದ ಅರ್ಧ ಜನರಿಗು ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನು, ಬಾಷಾನಿನ ಅರಸನಾದ ಓಗನ ರಾಜ್ಯವನ್ನು, ಅವುಗಳ ಎಲ್ಲ ಊರುಗಳನ್ನು ಮತ್ತು ಆ ಊರುಗಳಿಗೆ ಸೇರಿದ ಎಲ್ಲ ಭೂಮಿಗಳನ್ನು ಕೊಟ್ಟನು.


“ಗಾದ್ಯರಲ್ಲೂ ರೂಬೇನ್ಯರಲ್ಲೂ ಯುದ್ಧಸನ್ನದ್ಧರಾದವರೆಲ್ಲರು ನಿಮ್ಮೊಡನೆ ಜೋರ್ಡನ್ ನದಿಯನ್ನು ದಾಟಿ ಸರ್ವೇಶ್ವರನ ಸಮ್ಮುಖದಲ್ಲಿ ಯುದ್ಧಮಾಡಿದ್ದೇ ಆದರೆ ಕಾನಾನ್ ನಾಡು ನಿಮ್ಮ ಸ್ವಾಧೀನಕ್ಕೆ ಬಂದಾಗ ನೀವು ಗಿಲ್ಯಾದ್ ಪ್ರದೇಶವನ್ನು ಅವರಿಗೆ ಸೊತ್ತಾಗಿ ಕೊಡಿ.


ಸರ್ವೇಶ್ವರನ ಸಮ್ಮುಖದಲ್ಲಿ ಯುದ್ಧ ಸನ್ನದ್ಧರಾಗಿ ಕಾನಾನ್ ನಾಡಿಗೆ ಹೊರಡುತ್ತೇವೆ. ಜೋರ್ಡನ್ ನದಿಯ ಈಚೆಯೇ ನಮಗೆ ಆಸ್ತಿ ದೊರಕಬೇಕು,” ಎಂದು ಹೇಳಿದರು.


ಉಳಿದ ಎರಡುವರೆ ಕುಲಗಳ ಜನರಿಗೆ ಜೋರ್ಡನಿನ ಆಚೆಯಲ್ಲಿ ಮೋಶೆಯೇ ಸೊತ್ತನ್ನು ಕೊಟ್ಟಿದ್ದನು. ಲೇವಿಯರಿಗೆ ಮಾತ್ರ ಕೊಡಲಿಲ್ಲ.


ಲೇವಿಯರಿಗೆ ನಿಮ್ಮ ಹಾಗೆ ಪಾಲು ಸಿಕ್ಕುವುದಿಲ್ಲ. ಸರ್ವೇಶ್ವರನಿಗೆ ಸಲ್ಲಿಸುವ ಯಾಜಕ ಸೇವೆಯೇ ಅವರ ಸೊತ್ತು. ಗಾದ್ ಹಾಗೂ ರೂಬೇನ್ ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಜೋರ್ಡನಿನ ಪೂರ್ವದಿಕ್ಕಿನಲ್ಲಿ ಸರ್ವೇಶ್ವರನ ದಾಸ ಮೋಶೆಯಿಂದಲೇ ಸೊತ್ತು ಸಿಕ್ಕಿದೆ,” ಎಂದನು.


ಅವರು ತಮ್ಮ ವಾಗ್ದಾನಕ್ಕನುಸಾರ ನಿಮ್ಮ ಸಹೋದರರಿಗೆ ಈಗ ನೆಮ್ಮದಿಯನ್ನು ದಯಪಾಲಿಸಿದ್ದಾರೆ. ಆದುದರಿಂದ ಸರ್ವೇಶ್ವರನ ದಾಸನಾದ ಮೋಶೆ ಜೋರ್ಡನಿನ ಆಚೆಕಡೆ ನಿಮಗೆ ಕೊಟ್ಟ ಆಸ್ತಿಯನ್ನು ಅನುಭವಿಸುತ್ತಿರುವ ನಿಮ್ಮ ನಿಮ್ಮ ನಿವಾಸಿಗಳ ಬಳಿಗೆ ನೀವು ಹೋಗಬಹುದು.


ಉರಿಯನ ಮಗ ಗೆಬೆರ್ - ಗಿಲ್ಯಾದ (ಅಮೋರಿಯರ ಅರಸ ಸೀಹೋನ್, ಬಾಷಾನಿನ ಅರಸ ಓಗ್ ಇವರ ಪ್ರದೇಶ) ಪ್ರದೇಶಕ್ಕೆಲ್ಲಾ ಅವನೊಬ್ಬನೇ ಜಿಲ್ಲಾಧಿಕಾರಿಯಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು