Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 11:5 - ಕನ್ನಡ ಸತ್ಯವೇದವು C.L. Bible (BSI)

5 ಇಸ್ರಯೇಲರೊಡನೆ ಯುದ್ಧಮಾಡಲು ಅರಸರೆಲ್ಲರು ಒಟ್ಟುಗೂಡಿ ಮೇರೋಮ್ ಜಲಾಶಯದ ಬಳಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಈ ಎಲ್ಲಾ ಅರಸರು ಒಟ್ಟಾಗಿ ಸೇರಿ ಮೇರೋಮ್ ಜಲಾಶಯದ ಬಳಿಯಲ್ಲಿ ಇಸ್ರಾಯೇಲ್ಯರೊಡನೆ ಯುದ್ಧಮಾಡುವುದಕ್ಕಾಗಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಈ ಎಲ್ಲಾ ಅರಸರು ಕೂಡಿ ಮೇರೋಮ್ ಜಲಾಶಯದ ಬಳಿಯಲ್ಲಿ ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕೋಸ್ಕರ ಇಳುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಈ ಎಲ್ಲ ಅರಸರು ಮೇರೋಮ್ ಸಣ್ಣ ನದಿಯ ಹತ್ತಿರ ಒಟ್ಟುಗೂಡಿ ತಮ್ಮ ಸೈನ್ಯಗಳನ್ನು ಒಂದೇ ಪಾಳೆಯದಲ್ಲಿ ಸೇರಿಸಿದರು. ಅವರು ಇಸ್ರೇಲಿನ ವಿರುದ್ಧ ಯುದ್ಧ ಮಾಡಲು ಯೋಜನೆಗಳನ್ನು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಈ ಎಲ್ಲಾ ಅರಸರು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟುಗೂಡಿ ಮೇರೋಮ ಎಂಬ ಜಲಾಶಯದ ಬಳಿಯಲ್ಲಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 11:5
9 ತಿಳಿವುಗಳ ಹೋಲಿಕೆ  

ಇವು ಪವಾಡ ಕಾರ್ಯಗಳನ್ನು ಎಸಗುವ ದೆವ್ವಾತ್ಮಗಳು. ಸರ್ವಶಕ್ತ ದೇವರ ಮಹಾದಿನದಲ್ಲಿ ನಡೆಯುವ ಯುದ್ಧಕ್ಕಾಗಿ ಭೂಲೋಕದ ರಾಜರುಗಳನ್ನೆಲ್ಲಾ ಒಟ್ಟುಗೂಡಿಸಲು ಅವು ಹೊರಟವು.


ಕೂಡಿಬನ್ನಿ ರಾಷ್ಟ್ರಗಳೇ, ತುಂಡುತುಂಡಾಗುವಿರಿ ನೀವು; ಕಿವಿಗೊಡಿ, ದೂರ ದೇಶಗಳೇ, ನಡುಕಟ್ಟಿ ನಿಂತರೂ ತುಂಡುತುಂಡಾಗುವಿರಿ ನೀವು; ಹೌದು, ನಡುಕಟ್ಟಿ ನಿಂತರೂ ತುಂಡುತುಂಡಾಗುವಿರಿ ನೀವು.


ಪ್ರಭೂ, ನನಗೆ ವಿರೋಧಿಗಳು ಅನೇಕ I ನನಗೆದುರಾಗಿ ನಿಂತವರು ಅತ್ಯಧಿಕ II


ಅವರು ಒಡನೆ ಬಹುರಥಾಶ್ವಗಳಿಂದ ಕೂಡಿದ್ದ ತಮ್ಮ ಸರ್ವಸೈನ್ಯಗಳನ್ನು ತೆಗೆದುಕೊಂಡು ಹೊರಟರು. ಸೈನಿಕರು ಸಮುದ್ರ ತೀರದ ಮರಳಿನಂತೆ ಅಸಂಖ್ಯರಾಗಿದ್ದರು.


ಆಗ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೀನು ಅವರಿಗೆ ಹೆದರಬೇಡ; ನಾಳೆ ಇದೇ ವೇಳೆಗೆ ಅವರನ್ನು ಇಸ್ರಯೇಲರಿಗೆ ಒಪ್ಪಿಸುವೆನು. ಇಸ್ರಯೇಲರು ಅವರನ್ನು ಹತಿಸಿಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕಡಿದು ರಥಗಳನ್ನು ಸುಟ್ಟುಬಿಡಬೇಕು,” ಎಂದರು.


ಯೆಹೋಶುವನಿಗೂ ಇಸ್ರಯೇಲರಿಗೂ ವಿರುದ್ಧ ಯುದ್ಧಮಾಡಬೇಕೆಂದು ಒಮ್ಮನಸ್ಸಿನಿಂದ ಕೂಡಿಕೊಂಡರು.


ಸಿರಿಯಾದವರಿಗೆ ತಮ್ಮ ಸೈನ್ಯ ಇಸ್ರಯೇಲರಿಂದ ಪರಾಭವಗೊಂಡಿತೆಂದು ಗೊತ್ತಾದಾಗ ಅವರೆಲ್ಲರೂ ಕೂಡಿಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು