ಯೆಹೋಶುವ 10:24 - ಕನ್ನಡ ಸತ್ಯವೇದವು C.L. Bible (BSI)24 ತಂದ ಮೇಲೆ ಯೆಹೋಶುವನು ಎಲ್ಲಾ ಇಸ್ರಯೇಲರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೇನಾಧಿಪತಿಗಳಿಗೆ, “ಹತ್ತಿರ ಬಂದು ಆ ಅರಸರ ಕೊರಳಿನ ಮೇಲೆ ನಿಮ್ಮ ಪಾದಗಳನ್ನಿಡಿ,” ಎಂದು ಹೇಳಿದನು. ಅಂತೆಯೇ ಅವರು ಹತ್ತಿರ ಬಂದು ಕುತ್ತಿಗೆಯ ಮೇಲೆ ಕಾಲಿಟ್ಟರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)24 ಅವರನ್ನು ತನ್ನ ಬಳಿಗೆ ತಂದಮೇಲೆ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರಿಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ - ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ ಎಂದು ಹೇಳಲು ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಅವರು ಆ ಐದು ಮಂದಿ ಅರಸರನ್ನು ಯೆಹೋಶುವನಲ್ಲಿಗೆ ತಂದರು. ಯೆಹೋಶುವನು ಇಸ್ರೇಲರನ್ನೆಲ್ಲ ಆ ಸ್ಥಳಕ್ಕೆ ಕರೆಸಿ ತನ್ನ ಸೈನ್ಯದ ಅಧಿಕಾರಿಗಳಿಗೆ “ಇಲ್ಲಿಗೆ ಬನ್ನಿ, ನಿಮ್ಮ ಪಾದಗಳನ್ನು ಈ ಅರಸರ ಕುತ್ತಿಗೆಗಳ ಮೇಲೆ ಇಡಿ” ಎಂದು ಹೇಳಿದನು. ಯೆಹೋಶುವನ ಸೈನ್ಯಾಧಿಕಾರಿಗಳು ಹತ್ತಿರಕ್ಕೆ ಬಂದು ತಮ್ಮ ಪಾದಗಳನ್ನು ಆ ಅರಸರ ಕುತ್ತಿಗೆಗಳ ಮೇಲೆ ಇಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಅವರನ್ನು ಯೆಹೋಶುವನ ಬಳಿ ತೆಗೆದುಕೊಂಡು ಬಂದಾಗ, ಯೆಹೋಶುವನು ಇಸ್ರಾಯೇಲರೆಲ್ಲರನ್ನು ಕರೆಸಿ ತನ್ನ ಸಂಗಡ ಬಂದ ಯುದ್ಧಭಟರಾದ ಅಧಿಕಾರಿಗಳಿಗೆ, “ನೀವು ಸಮೀಪಕ್ಕೆ ಬಂದು ನಿಮ್ಮ ಪಾದಗಳನ್ನು ಈ ಅರಸರ ಕೊರಳಿನ ಮೇಲೆ ಇಡಿರಿ,” ಎಂದನು. ಆಗ ಅವರು ಸಮೀಪಕ್ಕೆ ಬಂದು ತಮ್ಮ ಪಾದಗಳನ್ನು ಅವರ ಕೊರಳಿನ ಮೇಲೆ ಇಟ್ಟರು. ಅಧ್ಯಾಯವನ್ನು ನೋಡಿ |