Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 10:13 - ಕನ್ನಡ ಸತ್ಯವೇದವು C.L. Bible (BSI)

13 ಇಸ್ರಯೇಲರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಇದನ್ನು ‘ಯಾಷಾರ್’ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯ ಮುಳುಗಲು ಆತುರಪಡದೆ ಹೆಚ್ಚುಕಡಿಮೆ ಒಂದು ದಿನವೆಲ್ಲ ಆಕಾಶದ ಮಧ್ಯದಲ್ಲೆ ನಿಂತಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್‌ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯನು ಮುಳುಗಲು ಆತುರ ಪಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿಯೇ ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವವರೆಗೆ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್‍‍‍ಗ್ರಂಥದಲ್ಲಿ ಬರೆದದೆಯಲ್ಲಾ! ಹೀಗೆ ಸೂರ್ಯನು ಮುಣುಗಲಿಕ್ಕೆ ಆತುರಪಡದೆ ಹೆಚ್ಚುಕಡಿಮೆ ಒಂದು ದಿವಸ ಪೂರ್ತಿ ಆಕಾಶ ಮಧ್ಯದಲ್ಲಿಯೇ ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆದ್ದರಿಂದ ಅವರು ಶತ್ರುಗಳನ್ನು ಸೋಲಿಸುವವರೆಗೆ ಸೂರ್ಯನೂ ಚಲಿಸಲಿಲ್ಲ, ಚಂದ್ರನೂ ಚಲಿಸಲಿಲ್ಲ. ಈ ಕಥೆಯು ಯಾಷಾರ್ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಸೂರ್ಯನು ಆಕಾಶದ ಮಧ್ಯದಲ್ಲಿ ನಿಂತನು. ಅವನು ಇಡೀ ದಿನ ಚಲಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆದ್ದರಿಂದ ಇಸ್ರಾಯೇಲರು ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರೆಗೆ ಸೂರ್ಯ ಚಂದ್ರರು ನೆಲೆಯಾಗಿ ನಿಂತಿದ್ದರು. ಇದು ಯಾಷಾರ್ ಪುಸ್ತಕದಲ್ಲಿ ಬರೆದಿದೆ. ಹೀಗೆ ಸೂರ್ಯ ಅಸ್ತಮಿಸಲು ತ್ವರೆಮಾಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿ ನಿಂತಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 10:13
29 ತಿಳಿವುಗಳ ಹೋಲಿಕೆ  

ಹಾರಿ ಓಡುವ ನಿನ್ನ ಬಾಣಗಳ ಬೆಳಕಿಗೆ ಥಳಥಳಿಸುವ ನಿನ್ನ ಈಟಿಯ ಹೊಳಪಿಗೆ ಸೂರ್ಯಚಂದ್ರ ಅಡಗುತ್ತವೆ ಗೂಡಿನೊಳಗೆ.


ಇಗೋ, ಅಹಾಜನು ಕಟ್ಟಿಸಿದ ನೆರಳು ಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು.


ಆ ಪ್ರಕಾರ ಹಿಂದೆಯಾಗಲಿ ಮುಂದೆಯಾಗಲಿ ಸರ್ವೇಶ್ವರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟಂಥ ದಿವಸ ಇಲ್ಲವೇ ಇಲ್ಲ! ಸರ್ವೇಶ್ವರಸ್ವಾಮಿ ತಾವೇ ಇಸ್ರಯೇಲರ ಪರವಾಗಿ ಯುದ್ಧಮಾಡುತ್ತಿದ್ದರು.


ಆಗ ಸಂಸೋನನು ಸರ್ವೇಶ್ವರನಿಗೆ, “ಪ್ರಭು ಸರ್ವೇಶ್ವರಾ, ಫಿಲಿಷ್ಟಿಯರು ಕಿತ್ತುಹಾಕಿದ ನನ್ನ ಎರಡು ಕಣ್ಣುಗಳಲ್ಲಿ ಒಂದಕ್ಕಾದರು ನಾನು ಅವರಿಗೆ ಮುಯ್ಯಿ ತೀರಿಸುವ ಹಾಗೆ ನನ್ನನ್ನು ಈ ಸಾರಿ ಬಲಪಡಿಸಿರಿ,” ಎಂದು ಮೊರೆಯಿಟ್ಟನು.


ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲುರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ?


ಸೂರ್ಯಚಂದ್ರಗಳು ಮಂಕಾಗುತ್ತವೆ. ನಕ್ಷತ್ರಗಳು ಕಾಂತಿಗುಂದುತ್ತವೆ.


ಅವುಗಳ ಮುಂದೆ ಭೂಮಂಡಲ ಕಂಪಿಸುತ್ತದೆ, ಆಕಾಶಮಂಡಲ ನಡುಗುತ್ತದೆ. ಸೂರ್ಯಚಂದ್ರಗಳು ಮಂಕಾಗುತ್ತವೆ, ನಕ್ಷತ್ರಗಳು ಕಾಂತಿಗುಂದುತ್ತವೆ.


ಸೂರ್ಯಚಂದ್ರರೇ, ಹೊಗಳಿ ಆತನನು I ಮಿನುಗುವ ತಾರೆಗಳೇ, ಹೊಗಳಿ ಆತನನು II


ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ I ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ II


ನಿರ್ನಾಮಗೊಳಿಸಿ ಅವರ ಆಸ್ತಿಪಾಸ್ತಿಯನ್ನೆಲ್ಲಾ ಸೂರೆಮಾಡಬೇಕು; ಈ ಪತ್ರದ ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜಾಜ್ಞೆಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು. ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಸನ್ನದ್ಧರಾಗಿರಬೇಕು.’


‘ಬಿಲ್ಲೆ’ ಎಂಬ ಈ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಆಜ್ಞಾಪಿಸಿದನು. ಇದರ ಉಲ್ಲೇಖ ‘ಯಾಷಾರ್’ ಎಂಬ ಗ್ರಂಥದಲ್ಲಿದೆ:


ನಾಚುವನು ಚಂದ್ರ, ಹೇಸುವನು ಸೂರ್ಯ, ಏಕೆನೆ ಆಳುವರು ಸೇನಾಧೀಶ್ವರ ಸರ್ವೇಶ್ವರ ಸಿಯೋನ್ ಪರ್ವತದೊಳು, ಜೆರುಸಲೇಮ್ ನಗರದೊಳು. ಪ್ರತ್ಯಕ್ಷವಾಗುವುದಾತನ ಮಹಿಮಾಪ್ರಭಾವವು, ಅಲ್ಲಿನ ಜನನಾಯಕರ ಸಮ್ಮುಖದೊಳು.


ಪಣತೊಟ್ಟಿದ್ದರು ಇಸ್ರಯೇಲಿನ ವೀರರು ಸೈನ್ಯಸೇರಿದ್ದಾರೆ ಸ್ವೇಚ್ಛೆಯಿಂದಾ ಜನರು ಮಾಡಿರಿ ನೀವು ಸರ್ವೇಶ್ವರನಾ ಗುಣಗಾನವನು;


ಅವರು ಇಸ್ರಯೇಲರಿಗೆ ಬೆಂಗೊಟ್ಟು ಬೇತ್ ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ಮುಟ್ಟುವವರೆಗೂ ಸರ್ವೇಶ್ವರ ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಈ ಕಾರಣ ಅನೇಕರು ಸತ್ತರು. ಇಸ್ರಯೇಲರ ಕತ್ತಿಗೆ ಈಡಾದವರಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚುಮಂದಿ.


“ಮಿದ್ಯಾನರು ಇಸ್ರಯೇಲರಿಗೆ ಮಾಡಿದ ಹಿಂಸೆಗಾಗಿ ನೀನು ಮುಯ್ಯಿತೀರಿಸಬೇಕು. ಅನಂತರ ನಿನ್ನ ಪೂರ್ವಜರ ಬಳಿಗೆ ನೀನು ಸೇರಬೇಕು,” ಎಂದರು.


ನಗರಕ್ಕೆ ಬೆಳಕನ್ನು ಕೊಡಲು ಸೂರ್ಯನ ಇಲ್ಲವೆ ಚಂದ್ರನ ಅವಶ್ಯಕತೆ ಇಲ್ಲ. ಏಕೆಂದರೆ, ದೇವರ ತೇಜಸ್ಸೇ ಅದಕ್ಕೆ ಬೆಳಕು; ಯಜ್ಞದ ಕುರಿಮರಿಯೇ ಅದಕ್ಕೆ ಜ್ಯೋತಿ.


ನಾಲ್ಕನೆಯ ದೇವದೂತನು ತುತೂರಿಯನ್ನು ಊದಿದನು. ಸೂರ್ಯಚಂದ್ರ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗಕ್ಕೆ ಧಕ್ಕೆ ಉಂಟಾಯಿತು. ಅವುಗಳ ಮೂರನೆಯ ಒಂದು ಭಾಗ ಕಾಂತಿಹೀನವಾಯಿತು. ಇದರಿಂದಾಗಿ ಹಗಲಿನಲ್ಲೂ ರಾತ್ರಿಯಲ್ಲೂ ಮೂರನೆಯ ಒಂದು ಭಾಗದಷ್ಟು ಬೆಳಕು ಕಡಿಮೆಯಾಯಿತು.


ಆ ಯಜ್ಞದ ಕುರಿಮರಿ ಆರನೆಯ ಮುದ್ರೆಯನ್ನು ಒಡೆದಾಗ, ದೊಡ್ಡ ಭೂಕಂಪವಾಯಿತು. ಸೂರ್ಯನು ಕರಿಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು.


ಅವರು ಆರ್ತಧ್ವನಿಯಿಂದ, ‘ಸರ್ವಶಕ್ತ ಪ್ರಭುವೇ, ಸತ್ಯವಂತರೇ, ಪರಿಶುದ್ಧರೇ, ನಮ್ಮನ್ನು ಕೊಲೆಮಾಡಿದ ಭೂನಿವಾಸಿಗಳಿಗೆ ಇನ್ನೆಷ್ಟುಕಾಲ ನ್ಯಾಯವಿಚಾರಣೆ ಮಾಡದೆ, ಸೇಡನ್ನು ತೀರಿಸಿಕೊಳ್ಳದೆ ಇರುತ್ತೀರಿ?” ಎಂದು ಕೇಳಿದರು.


ರವಿ ಕಪ್ಪಾಗುವನು, ಶಶಿ ಕಡುಗೆಂಪಾಗುವನು, ಪ್ರಭುವಿನ ಮಹಿಮಾದಿನಕ್ಕೆ ಮುನ್ನ ಸಂಭವಿಸುವುವು ಇವೆಲ್ಲಾ.


ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ.


ಅದನ್ನು ಉಲ್ಲೇಖಿಸುತ್ತಾ, “ಸರ್ವೇಶ್ವರನ ವಿಷಯ” ಎಂಬ ಗ್ರಂಥ ಹೀಗೆನ್ನುತ್ತದೆ: ‘ಸೂಫಕ್ಕೆ ಸೇರಿದ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಹಳ್ಳಗಳನ್ನು ,


“ಆ ದಿನಗಳ ಸಂಕಷ್ಟಗಳು ಮುಗಿದ ಕೂಡಲೇ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಕಳಚಿ ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.


ಸರ್ವೇಶ್ವರಸ್ವಾಮಿಯ ಭಯಂಕರ ಮಹಾದಿನದ ಮುಂಚೆ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ರಕ್ತಗೆಂಪಾಗುವನು.


ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ; ಆದುದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು,” ಎಂದು ಹೇಳಿದನು.


ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನು ಉದಯಿಸನು ಮುದ್ರೆ ಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು