Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 1:16 - ಕನ್ನಡ ಸತ್ಯವೇದವು C.L. Bible (BSI)

16 ಅವರು ಯೆಹೋಶುವನಿಗೆ, “ನೀವು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತೇವೆ. ಎಲ್ಲಿಗೆ ಕಳಿಸಿದರೂ ಹೋಗುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆಗ ಅವರು ಯೆಹೋಶುವನಿಗೆ ಉತ್ತರವಾಗಿ “ನೀನು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತೇವೆ; ಎಲ್ಲಿಗೆ ಕಳುಹಿಸಿದರೂ ಹೋಗುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವರು ಯೆಹೋಶುವನಿಗೆ - ನೀನು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುವೆವು; ಎಲ್ಲಿಗೆ ಕಳುಹಿಸಿದರೂ ಹೋಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆಗ ಅವರು ಯೆಹೋಶುವನಿಗೆ, “ನೀನು ಆಜ್ಞಾಪಿಸಿದ್ದನ್ನೆಲ್ಲಾ ನಾವು ಮಾಡುತ್ತೇವೆ; ನೀನು ನಮ್ಮನ್ನು ಕಳಿಸಿದ್ದಲ್ಲಿಗೆಲ್ಲ ಹೋಗುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆಗ ಅವರು ಯೆಹೋಶುವನಿಗೆ ಉತ್ತರವಾಗಿ, “ನೀನು ನಮಗೆ ಆಜ್ಞಾಪಿಸುವುದನ್ನೆಲ್ಲಾ ಮಾಡುವೆವು. ಎಲ್ಲಿಗೆ ಕಳುಹಿಸುತ್ತೀಯೋ, ಅಲ್ಲಿಗೆ ಹೋಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 1:16
10 ತಿಳಿವುಗಳ ಹೋಲಿಕೆ  

ಆಳುವವರಿಗೂ ಅಧಿಕಾರಿಗಳಿಗೂ ಕ್ರೈಸ್ತವಿಶ್ವಾಸಿಗಳು ವಿಧೇಯರಾಗಿ ನಡೆದುಕೊಳ್ಳಬೇಕೆಂದು ಜ್ಞಾಪಕಪಡಿಸು. ಎಲ್ಲಾ ಸತ್ಕಾರ್ಯಗಳನ್ನು ಕೈಗೊಳ್ಳಲು ಅವರು ಸಿದ್ಧರಿರಬೇಕು.


ನೀನೇ ಹತ್ತಿರಕ್ಕೆ ಹೋಗಿ, ನಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ತಿಳಿದುಕೊಂಡು ಬಂದು ನಮಗೆ ತಿಳಿಸು; ತಿಳಿಸಿದಾಗ ನಾವು ಅದರಂತೆ ನಡೆಯುತ್ತೇವೆ’ ಎಂದು ಹೇಳಿದಿರಿ.


ಅದಕ್ಕೆ ಗಾದ್ಯರು ಹಾಗು ರೂಬೇನ್ಯರು, “ಒಡೆಯಾ, ನಿಮ್ಮ ಅಪ್ಪಣೆಯಂತೆಯೇ ದಾಸರಾದ ನಾವು ಮಾಡುತ್ತೇವೆ.


ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನೂ ನೆಮ್ಮದಿಪಡಿಸಿ, ಸರ್ವೇಶ್ವರನಾದ ದೇವರು ತಮಗೆ ನೀಡುವ ನಾಡನ್ನು ಅವರು ಸ್ವತಂತ್ರಿಸಿಕೊಳ್ಳುವ ವರೆಗೆ ಅವರಿಗೆ ಸಹಾಯ ಮಾಡಲಿ. ತರುವಾಯ ಸರ್ವೇಶ್ವರನ ದಾಸ ಮೋಶೆ ಜೋರ್ಡನ್ನಿಗೆ ಈಚೆ ಸೂರ್ಯೋದಯದ ದಿಕ್ಕಿನಲ್ಲಿ, ನಿಮಗೆ ಕೊಟ್ಟ ಸ್ವಂತ ನಾಡಿಗೆ ಹಿಂದಿರುಗಿ ಬಂದು ಅದನ್ನು ಅನುಭವಿಸಬಹುದು.”


ಮೋಶೆಯ ಮಾತುಗಳನ್ನೆಲ್ಲ ಕೇಳಿದಂತೆ ನಿಮ್ಮ ಮಾತುಗಳನ್ನೂ ಕೇಳುತ್ತೇವೆ. ದೇವರಾದ ಸರ್ವೇಶ್ವರ ಮೋಶೆಯ ಸಂಗಡ ಇದ್ದ ಹಾಗೆ ನಿಮ್ಮ ಸಂಗಡವೂ ಇರಲಿ.


ಅದಕ್ಕೆ ಗಾದ್ಯರು ಮತ್ತು ರೂಬೇನ್ಯರು ಒಪ್ಪಿಕೊಂಡರು. “ನಿಮ್ಮ ದಾಸರಾದ ನಮಗೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮಾಡುತ್ತೇವೆ.


ಮೋಶೆ ನೂನನ ಮಗನಾದ ಯೆಹೋಶುವನ ಮೇಲೆ ಹಸ್ತಕ್ಷೇಪಮಾಡಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರ ಇಸ್ರಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು.


ಎದ್ದೇಳು, ಈ ಕಾರ್ಯ ನಿನ್ನಿಂದಾಗಬೇಕು. ನಾವು ನಿನಗೆ ಸಹಾಯಕರಾಗಿ ನಿಲ್ಲುತ್ತೇವೆ. ಧೈರ್ಯದಿಂದ ಮುನ್ನುಗ್ಗು,” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು