Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 8:14 - ಕನ್ನಡ ಸತ್ಯವೇದವು C.L. Bible (BSI)

14 ನನ್ನನ್ನು ಸರ್ವೇಶ್ವರನ ಆಲಯದ ಉತ್ತರ ಬಾಗಿಲ ಮುಂದಕ್ಕೆ ಕರೆತಂದರು; ಇಗೋ, ಅಲ್ಲಿ ಹೆಂಗಸರು ‘ತಮ್ಮೂಜ್’ ದೇವತೆಗಾಗಿ ಅಳುತ್ತಾ ಕುಳಿತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆತನು ನನ್ನನ್ನು ಯೆಹೋವನ ಆಲಯದ ಉತ್ತರದ ಬಾಗಿಲ ಮುಂದಕ್ಕೆ ಕರೆತಂದನು; ಇಗೋ, ಅಲ್ಲಿ ಸ್ತ್ರೀಯರು “ತಮ್ಮೂಜ್” ದೇವತೆಗಾಗಿ ಅಳುತ್ತಾ ಕುಳಿತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನನ್ನನ್ನು ಯೆಹೋವನ ಆಲಯದ ಬಡಗಣ ಬಾಗಿಲ ಮುಂದಕ್ಕೆ ಕರತಂದನು; ಇಗೋ, ಅಲ್ಲಿ ಸ್ತ್ರೀಯರು ತಮ್ಮೂಜ್ ದೇವತೆಗೋಸ್ಕರ ಅಳುತ್ತಾ ಕೂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆಗ ದೇವರು ನನ್ನನ್ನು ಯೆಹೋವನಾಲಯದ ಉತ್ತರ ದ್ವಾರದ ಪ್ರವೇಶ ಸ್ಥಳಕ್ಕೆ ನಡೆಸಿದನು. ಅಲ್ಲಿ ಹೆಂಗಸರು ಕುಳಿತುಕೊಂಡು ರೋಧಿಸುವುದನ್ನು ನೋಡಿದೆನು. ಅವರು ತಮ್ಮೂಜ್ ಎಂಬ ಸುಳ್ಳುದೇವತೆಗೋಸ್ಕರ ದುಃಖಪಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಉತ್ತರದ ಕಡೆಗೆ ಎದುರಾಗಿದ್ದ ಬಾಗಿಲಿನ ಕಡೆಗೆ ತಂದನು. ಅಲ್ಲಿ ತಮ್ಮೂಜ್ ದೇವತೆಗೋಸ್ಕರ ಅಳುವ ಹೆಂಗಸರು ಕೂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 8:14
5 ತಿಳಿವುಗಳ ಹೋಲಿಕೆ  

ನಾಡಿನ ಜನರಾದರೋ ಹಬ್ಬಗಳಲ್ಲಿ ಸರ್ವೇಶ್ವರನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿಂದ ಆರಾಧಿಸುವುದಕ್ಕೆ ಪ್ರವೇಸಿಸಿದವರು ದಕ್ಷಿಣ ಬಾಗಿಲಿಂದ ಹೊರಡಲಿ; ದಕ್ಷಿಣ ಬಾಗಿಲಿಂದ ಪ್ರವೇಶಿಸಿದವನು ಉತ್ತರ ಬಾಗಿಲಿಂದ ಹಿಂದಿರುಗದೆ ಬಂದ ಮುಖವಾಗಿಯೇ ಹೋಗಲಿ.


ಬಳಿಕ ಆ ಪುರಷನು ಉತ್ತರ ಹೆಬ್ಬಾಗಿಲ ಮಾರ್ಗವಾಗಿ ನನ್ನನ್ನು ದೇವಸ್ಥಾನದ ಮುಂದುಗಡೆಗೆ ಕರೆದುತಂದನು; ಏನಾಶ್ಚರ್ಯ! ನಾನು ನೋಡುತ್ತಿದ್ದಂತೆ ಸರ್ವೇಶ್ವರನ ತೇಜಸ್ಸು ದೇವಾಲಯವನ್ನು ತುಂಬಿಕೊಂಡಿತ್ತು; ಅದನ್ನು ನೋಡಿ ಅಡ್ಡಬಿದ್ದೆ.


ಆಮೇಲೆ ದೇವರು ನನಗೆ, “ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ


ಇದಾದ ಮೇಲೆ ದೇವರು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಇವುಗಳಿಗಿಂತ ಮತ್ತೂ ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ


ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಗೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು