Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 7:5 - ಕನ್ನಡ ಸತ್ಯವೇದವು C.L. Bible (BSI)

5 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಅಯ್ಯೋ, ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ಕೇಡು, ಎಂದೂ ಕಾಣದ ಕೇಡು, ಇಗೋ ಬಂತು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಂದರ ಮೇಲೊಂದು ದುರ್ಘಟನೆಗಳು ನಡೆಯುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಕೇಡು! ಎಂದೂ ಕೇಳದ ಕೇಡು, ಇಗೋ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 7:5
15 ತಿಳಿವುಗಳ ಹೋಲಿಕೆ  

ಸರ್ವೇಶ್ವರನ ವಿರುದ್ಧ ಮಾಡಬಲ್ಲಿರಾ ನೀವು ಕುಯುಕ್ತಿ? ಮರಳಿ ತಲೆಯೆತ್ತದಂತೆ ನಾಶಮಾಡುವನು ನಿಮ್ಮನು ಪೂರ್ತಿಯಾಗಿ.


ನೀನು ಬಹಳ ಅಸಹ್ಯಕೃತ್ಯಗಳಲ್ಲಿ ತೊಡಗಿದ್ದರಿಂದ ನಾನು ಈವರೆಗೂ ಇನ್ನು ಮುಂದಕ್ಕೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು.


ಏಕೆಂದರೆ ಆಗ ಬರಲಿರುವ ಸಂಕಷ್ಟಗಳು ಸೃಷ್ಟಿಯ ಆದಿಯಿಂದ ಇಂದಿನವರೆಗೂ ಇರಲಿಲ್ಲ; ಇನ್ನು ಮುಂದಕ್ಕೂ ಇರುವುದಿಲ್ಲ.


“ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು.”


ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿದ್ದಾರೆ. ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಖಂಡಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾರೆ. ಜೆರುಸಲೇಮಿಗೆ ಆದಂಥ ಕೇಡು ವಿಶ್ವದಲ್ಲಿ ಎಂದೂ ಆಗಲಿಲ್ಲ.


ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸಮೀಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ಧವಾದ ದುರ್ಗತಿಕಾಲ!


“ನರಪುತ್ರನೇ, ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿಗೆ ಹೀಗೆ ನುಡಿಯುತ್ತಾರೆ: ‘ಪ್ರಳಯ, ಪೂರ್ಣಪ್ರಳಯ ನಾಡಿನ ಚತುರ್ದಿಕ್ಕಿನಲ್ಲೂ ಸಂಭವಿಸಿದೆ.’


“ಸಮಯ ಬಂದಿದೆ, ದಿನ ಹತ್ತಿರವಾಗಿದೆ; ಕೊಂಡುಕೊಳ್ಳುವವನು ಹರ್ಷಿಸದಿರಲಿ, ಮಾರುವವನು ದುಃಖಿಸದಿರಲಿ; ರೋಷಾಗ್ನಿ ಆ ಸಮೂಹದವರೆಲ್ಲರ ಮೇಲೆ ಹತ್ತಿದೆ.


ಸ್ವಾಮಿಯ ಆ ರೌದ್ರದಿನದಂದು, ಅವರ ಬೆಳ್ಳಿಯಾಗಲೀ ಬಂಗಾರವಾಗಲೀ ಅವರನ್ನು ರಕ್ಷಿಸಲಾರದು. ಸ್ವಾಮಿಯ ರೋಷಾಗ್ನಿ ಧರೆಯನ್ನೆಲ್ಲಾ ದಹಿಸಿಬಿಡುವುದು; ಹೌದು, ಭೂನಿವಾಸಿಗಳೆಲ್ಲರನ್ನೂ ತಟ್ಟನೆ ಕೊನೆಗಾಣಿಸುವುದು.


ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು; ಮಂಗಳವು ಸತ್ಪುರುಷರಿಗೆ ಸಿಗುವ ಪ್ರತಿಫಲವು.


ನೀತಿವಂತನು ಏಳುಸಾರಿ ಬಿದ್ದರೂ ಮತ್ತೆ ಏಳುವನು; ದುಷ್ಟನು ಕೇಡುಬಂದಾಗಲೆ ಕುಸಿದು ಬೀಳುವನು.


ಅದಕ್ಕೆ ಪಹರೆಯವನು, “ಹಗಲು ಬರುತ್ತಿದೆ ಮತ್ತೆ ರಾತ್ರಿಯೂ ಬರುತ್ತದೆ. ಬೇಕಾದರೆ ಆಮೇಲೆ ಬಂದು ವಿಚಾರಿಸಿರಿ,” ಎಂದನು.


‘ಜುದೇಯದ ಅರಸರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನ ಸಂದೇಶವನ್ನು ಕೇಳಿರಿ. ಇದು ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ: ಈ ಸ್ಥಳದ ಮೇಲೆ ನಾನು ಕೇಡನ್ನು ಬರಮಾಡುವೆನು. ಅದರ ಸುದ್ದಿಯನ್ನು ಕೇಳುವವರ ಕಿವಿಗಳೂ ನಿಮಿರುವುವು.


ಸರ್ವೇಶ್ವರಸ್ವಾಮಿಯ ದಿನ ಸಮೀಪಿಸಿದೆ. ಆ ದಿನ ಸರ್ವಶಕ್ತನಿಂದ ವಿನಾಶವನ್ನು ತರಲಿದೆ; ಎಂಥಾ ಭಯಂಕರ ದಿನವದು!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು