Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 6:4 - ಕನ್ನಡ ಸತ್ಯವೇದವು C.L. Bible (BSI)

4 ನಿಮ್ಮ ಯಜ್ಞವೇದಿಗಳು ಹಾಳಾಗುವುವು. ನಿಮ್ಮ ಸೂರ್ಯಸ್ತಂಭಗಳು ಚೂರುಚೂರಾಗುವುವು. ನಿಮ್ಮವರು ನಿಮ್ಮ ಬೊಂಬೆಗಳ ಮುಂದೆ ಹತರಾಗಿ ಬೀಳುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 “‘ನಿಮ್ಮ ಯಜ್ಞವೇದಿಗಳು ಹಾಳಾಗುವವು, ನಿಮ್ಮ ಸೂರ್ಯಸ್ತಂಭಗಳು ಒಡೆಯಲ್ಪಡುವವು, ನಿಮ್ಮವರು ನಿಮ್ಮ ವಿಗ್ರಹಗಳ ಮುಂದೆ ಹತರಾಗಿ ಬೀಳುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿಮ್ಮ ಯಜ್ಞವೇದಿಗಳು ಹಾಳಾಗುವವು, ನಿಮ್ಮ ಸೂರ್ಯಸ್ತಂಭಗಳು ಒಡೆಯಲ್ಪಡುವವು, ನಿಮ್ಮವರು ನಿಮ್ಮ ಬೊಂಬೆಗಳ ಮುಂದೆ ಹತರಾಗಿ ಬೀಳುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಿಮ್ಮ ಯಜ್ಞವೇದಿಕೆಗಳು ನಾಶವಾಗುವವು. ನಿಮ್ಮ ಧೂಪವೇದಿಕೆಗಳು ಕೆಡವಲ್ಪಡುವವು. ನಿಮ್ಮ ಹೆಣಗಳನ್ನು ನಿಮ್ಮ ಹೊಲಸು ವಿಗ್ರಹಗಳ ಮುಂದೆ ಬಿಸಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಿಮ್ಮ ಯಜ್ಞವೇದಿಗಳು ಹಾಳಾಗುವುವು. ನಿಮ್ಮ ಧೂಪವೇದಿಗಳು ಚೂರುಚೂರಾಗುವುವು. ನಿಮ್ಮ ಜನರು ನಿಮ್ಮ ವಿಗ್ರಹಗಳ ಮುಂದೆ ಹತರಾಗಿ ಬೀಳುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 6:4
13 ತಿಳಿವುಗಳ ಹೋಲಿಕೆ  

ಜುದೇಯದ ಎಲ್ಲ ಪಟ್ಟಣಗಳಿಂದ ಪೂಜಾಸ್ಥಳಗಳನ್ನೂ ಸೂರ್ಯಸ್ತಂಭಗಳನ್ನೂ ತೆಗೆದು ಹಾಕಿಸಿದನು. ಇವನ ಆಳ್ವಿಕೆಯಲ್ಲಿ ರಾಜ್ಯದೊಳಗೆ ಸಮಾಧಾನ ವಿತ್ತು.


ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು. ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದು ಹಾಕುವೆನು. ನಿಮ್ಮ ಬೊಂಬೆಗಳ ಬುರುಡೆಗಳ ಮೇಲೆ ನಿಮ್ಮ ಬುರುಡೆಗಳನ್ನು ಬಿಸಾಡುವೆನು; ನಿಮ್ಮ ಬಗ್ಗೆ ಅಸಹ್ಯಪಡುವೆನು.


ಆ ವಂಶದವರು ಎತ್ತರವಾದ ಎಲ್ಲಾ ಗುಡ್ಡಗಳ ಮೇಲೆ, ಎಲ್ಲಾ ಬೆಟ್ಟಗಳ ತುದಿಗಳಲ್ಲಿ, ಸೊಂಪಾದ ಎಲ್ಲಾ ಮರಗಳ ಕೆಳಗೆ ಹಾಗು ತಮ್ಮ ಸಮಸ್ತ ವಿಗ್ರಹಗಳಿಗೆ ಸುಗಂಧಹೋಮ ಮಾಡುತ್ತಿದ್ದ ದಟ್ಟವಾದ ಎಲ್ಲಾ ಮರಗಳ ಕೆಳಗೆ ಹತರಾಗಿ, ತಮ್ಮ ಯಜ್ಞವೇದಿಕೆಗಳ ಸುತ್ತಲು ತಮ್ಮ ಬೊಂಬೆಗಳ ನಡುವೆ ಬಿದ್ದಿರುವಾಗ ನಾನೇ ಸರ್ವೇಶ್ವರ ಎಂದು ಗೊತ್ತಾಗುವುದು.


ಬಳಿಕ ಹಾಯಾಗಿ ಅಲ್ಲಿಂದ ಹೊರಟುಹೋಗುವನು. ಅವನು ಈಜಿಪ್ಟ್ ದೇಶದಲ್ಲಿರುವ ಸೂರ್ಯ ದೇವಾಲಯದ ಸ್ತಂಭಗಳನ್ನು ಒಡೆದುಹಾಕುವನು, ಅಲ್ಲಿನ ದೇವತೆಗಳ ಆಲಯಗಳನ್ನು ಸುಟ್ಟುಹಾಕುವನು.”


ಕಲ್ಲುಗಂಬಗಳನ್ನು ಒಡೆದುಹಾಕಿ, ಅಶೇರ ವಿಗ್ರಹಸ್ತಂಭಗಳನ್ನು ಕಡಿದುಬಿಟ್ಟು, ಅವುಗಳಿದ್ದ ಸ್ಥಳವನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.


ಆ ಭಕ್ತನು ಸರ್ವೇಶ್ವರನ ಅಪ್ಪಣೆಯಿಂದ ಆ ಪೀಠವನ್ನು ಉದ್ದೇಶಿಸಿ, “ಎಲೈ ಪೀಠವೇ, ಪೀಠವೇ, ದಾವೀದನ ಸಂತಾನದಲ್ಲಿ ಯೋಷೀಯ ಎಂಬೊಬ್ಬನು ಹುಟ್ಟುವನು. ಅವನು, ನಿನ್ನ ಮೇಲೆ ಧೂಪಸುಡುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು, ಅವರನ್ನು ನಿನ್ನ ಮೇಲೆಯೇ ಬಲಿಕೊಡುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವುದು ಎಂದು ಸರ್ವೇಶ್ವರ ಹೇಳುತ್ತಾರೆ,” ಎಂದನು.


ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆ ಮತ್ತು ಕೈಗಳು ಮುರಿದು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಸರ್ವೇಶ್ವರನ ಮಂಜೂಷದ ಮುಂದೆ ಬಿದ್ದಿತ್ತು.


ಇಂತಿರಲು ಯಕೋಬ್ಯರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗಬೇಕಾದರೆ, ಅವರ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲ ದೊರಕಬೇಕಾದರೆ, ಅವರ ವಿಗ್ರಹಾರಾಧಕ ಬಲಿಪೀಠದ ಕಲ್ಲುಗಳೆಲ್ಲ ಸುಣ್ಣದಂತೆ ಪುಡಿಪುಡಿ ಆಗಬೇಕು; ಆಶೇರಾ ಎಂಬ ವಿಗ್ರಹಸ್ತಂಭಗಳನ್ನೂ ಸೂರ್ಯಸ್ತಂಭಗಳನ್ನೂ ಪ್ರತಿಷ್ಠಾಪಿಸುವುದು ಇನ್ನು ನಿಲ್ಲಬೇಕು.


ಆದ್ದರಿಂದ ಇಗೋ, ಆ ಕಣಿವೆಗೆ ತೋಫೆತ್ ಮತ್ತು ಬೆನ್‍ಹಿನ್ನೋಮ್ ಎಂಬ ಹೆಸರುಗಳು ಹೋಗಿ ಸಂಹಾರದ ಕಣಿವೆ ಎಂದು ಕರೆಯಲಾಗುವ ದಿನಗಳು ಬರಲಿವೆ. ಇನ್ನೆಲ್ಲೂ ಸ್ಥಳವಿಲ್ಲವಾಗಿ ಶವಗಳನ್ನು ಆ ತೋಫೆತಿನಲ್ಲಿ ಹೂಣುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು