Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 5:15 - ಕನ್ನಡ ಸತ್ಯವೇದವು C.L. Bible (BSI)

15 “ನಾನು ಕೋಪದಿಂದ, ರೋಷದಿಂದ ಹಾಗು ತೀವ್ರ ಖಂಡನೆಯಿಂದ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ ಪರಿಹಾಸ್ಯಗಳಿಗೂ ಬೆರಗು ಬುದ್ಧಿವಾದಗಳಿಗೂ ಆಸ್ಪದವಾಗುವುವು; ಇದು ಸರ್ವೇಶ್ವರನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 “ನಾನು ಕೋಪದಿಂದಲೂ, ರೋಷದಿಂದಲೂ, ಕಠಿಣವಾದ ಖಂಡನೆಯಿಂದಲೂ, ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ, ಪರಿಹಾಸ್ಯಗಳಿಗೂ, ಬುದ್ಧಿವಾದಗಳಿಗೂ ಆಸ್ಪದವಾಗುವವು; ಇದು ಯೆಹೋವನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನಾನು ಕೋಪದಿಂದಲೂ ರೋಷದಿಂದಲೂ ಕಠಿನವಾದ ಖಂಡನೆಯಿಂದಲೂ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣಪರಿಹಾಸಗಳಿಗೂ ಬುದ್ಧಿವಾದಾಶ್ಚರ್ಯಗಳಿಗೂ ಆಸ್ಪದವಾಗುವವು; ಇದು ಯೆಹೋವನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಹೀಗೆ ನಾನು ಕೋಪದಿಂದಲೂ, ರೋಷದಿಂದಲೂ, ಉಗ್ರಖಂಡನೆಯಿಂದಲೂ ನಿಮ್ಮಲ್ಲಿ ನ್ಯಾಯತೀರ್ಪುಗಳನ್ನು ನಡೆಸುವಾಗ, ನಿಮ್ಮ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ, ದೂಷಣೆಯೂ, ಶಿಕ್ಷೆಯೂ, ಭಯವೂ ಆಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 5:15
28 ತಿಳಿವುಗಳ ಹೋಲಿಕೆ  

ಅವರೆಲ್ಲರನ್ನು ಬಹಳವಾಗಿ ಖಂಡಿಸಿ ಮುಯ್ಯಿಗೆ ಮುಯ್ಯಿ ತೀರಿಸುವೆನು; ಹೀಗೆ ಪ್ರತೀಕಾರಮಾಡುವೆನು, ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”


ಇದೆಲ್ಲ ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು.


ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು.


ನಾನು ಕೊಟ್ಟ ನಾಡಿನಿಂದ ಇಸ್ರಯೇಲರನ್ನು ತೆಗೆದುಹಾಕುವೆನು; ನನ್ನ ಹೆಸರಿಗಾಗಿ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ಇಸ್ರಯೇಲರು ಎಲ್ಲಾ ಜನಾಂಗಗಳವರ ಲಾವಣಿಗೂ ನಿಂದೆಪರಿಹಾಸ್ಯಕ್ಕೂ ಗುರಿಯಾಗುವರು.


ಸರ್ವೇಶ್ವರ ಸ್ವಗೌರವವನು ಕಾಪಾಡಿಕೊಳ್ಳುವ ದೇವರು ಮುಯ್ಯಿತೀರಿಸುವ, ಹೌದು, ಕಡುಕೋಪದಿಂದ ಮುಯ್ಯಿತೀರಿಸುವ ದೇವರು. ಸರ್ವೇಶ್ವರ ಮುಯ್ಯಿತೀರಿಸುತ್ತಾರೆ ತನ್ನ ವಿರೋಧಿಗಳಿಗೆ ದೀರ್ಘರೋಷವಿಡುತ್ತಾರೆ, ತಮ್ಮ ಶತ್ರುಗಳ ಮೇಲೆ.


ನಿಂದಾಸ್ಪದರಾದೆವು ನೆರೆಹೊರೆಯ ಜನಾಂಗಗಳಿಗೆ I ಗುರಿಯಾದೆವು ಸುತ್ತಣವರ ಹಾಸ್ಯಕುಚೋದ್ಯಗಳಿಗೆ II


ಇವು ನಿಮಗೂ ನಿಮ್ಮ ಸಂತತಿಯವರಿಗೂ ನಿರಂತರವಾಗಿ ಪ್ರಾಪ್ತವಾಗುವುವು; ಸರ್ವರಿಗೆ ಬೆರಗನ್ನೂ ಎಚ್ಚರಿಕೆಯನ್ನೂ ಉಂಟುಮಾಡುವುವು.


ಪಾಪದ ಪ್ರಯುಕ್ತ ಮಾನವನು ಶಿಕ್ಷಿಸುವಾಗ I ನುಸಿಹತ್ತಿದಂತೆ ನಾಶಪಡಿಸುವೆ ಅವನಾಸ್ಥೆಯನಾಗ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ II


ಎಂದೇ ಗುರಿಮಾಡಿದೆ ಯಕೋಬನ್ನು ಶಾಪಕ್ಕೆ ಈಡುಪಡಿಸಿದೆ ಇಸ್ರಯೇಲನ್ನು ನಿಂದೆದೂಷಣೆಗೆ.”


ನೀವು ನಿಂದೆಗೆ ಗುರಿಯಾಗುವಿರಿ. ಎಂದಿಗೂ ಮರೆಯಲಾಗದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.”


ಆದುದರಿಂದ ಜೆರುಸಲೇಮೇ, ಇಗೋ, ನಾನೇ ನಿನಗೆ ವಿರುದ್ಧವಾಗಿದ್ದೇನೆ. ಜನಾಂಗಗಳ ಕಣ್ಣೆದುರಿಗೆ ನಿನ್ನ ಜನರನ್ನು ದಂಡಿಸುವೆನು; ಇದು ಸರ್ವೇಶ್ವರನಾದ ನನ್ನ ನುಡಿ.


ಆಗ ನಾನು ನಿನ್ನನ್ನು ಹಾಳುಮಾಡಲು ಕ್ಷಾಮವೆಂಬ ವಿನಾಶಕರವಾದ ತೀಕ್ಷ್ಣಬಾಣಗಳನ್ನು ನಿನ್ನ ಮೇಲೆ ಬಿಡುವನು. ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.


ಅವನಿಗೆ ವಿಮುಖನಾಗಿ ಅವನ ದುರ್ಗತಿಯು ಎಚ್ಚರಿಕೆಗೆ ಗುರುತಾಗಿಯೂ ಕಟ್ಟುಗಾದೆಗಳಿಗೆ ವಸ್ತುವಾಗಿಯೂ ಆಗುವಂತೆ ಮಾಡುವೆನು; ಅವನನ್ನು ನನ್ನ ಜನರಿಂದ ಹೊರಹಾಕುವೆನು; ಹೀಗೆ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.


ನೀನು ಗರ್ವಪಡುತ್ತಿದ್ದ ಆ ಕಾಲದಲ್ಲಿ ಸೊದೋಮೆಂಬ ನಿನ್ನ ತಂಗಿಯ ಹೆಸರು ನಿನ್ನ ಬಾಯಲ್ಲಿ ಬರಲೇ ಇಲ್ಲ;


ನೀನು ಸುರಿಸಿದ ರಕ್ತದಿಂದ ಅಪರಾಧಿಯಾಗಿರುವೆ; ಮಾಡಿಕೊಂಡ ವಿಗ್ರಹಗಳಿಂದ ಅಶುದ್ಧವಾಗಿರುವೆ. ಹೀಗೆ ನಿನ್ನ ಸಮಯವನ್ನು ಹತ್ತಿರಕ್ಕೆ ತಂದುಕೊಂಡು ದಂಡನೆಯ ಕಾಲಕ್ಕೆ ಬಂದಿರುವೆ. ಆದಕಾರಣ ನಿನ್ನನ್ನು ಜನಾಂಗಗಳ ದೂಷಣೆಗೂ ಸಕಲ ದೇಶಗಳ ಹಾಸ್ಯಕ್ಕೂ ಗುರಿಮಾಡಿದ್ದೇನೆ.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಆಳವೂ ಅಗಲವೂ ಬಹಳ ಹಿಡಿಯುವುದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲೇ ನೀನೂ ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವೆ. ಸಮಾರಿಯಳೆಂಬ ನಿನ್ನ ಅಕ್ಕನು ಕುಡಿದ ಬೆಚ್ಚುಬೆರಗಿನಾ ಕೊಡದಿಂದಲೇ


ಹೀಗೆ ನಾನು ಈಜಿಪ್ಟರಿಗೆ ದಂಡನೆಗಳನ್ನು ವಿಧಿಸಿ ತೀರಿಸುವಾಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”


ನಾನು ನಿಮ್ಮ ನಾಡನ್ನು ಸಂಪೂರ್ಣವಾಗಿ ಹಾಳುಮಾಡಿದಾಗ ಅದರಲ್ಲಿ ನೆಲಸುವ ಶತ್ರುಗಳು ಅದನ್ನು ನೋಡಿ ಚಕಿತರಾಗುವರು.


ಸರ್ವೇಶ್ವರ ನಿಮ್ಮನ್ನು ಒಯ್ಯಿಸುವ ಜನಾಂಗಗಳಲ್ಲಿ ನೀವು ಭೀಕರತೆಗೂ ನಿಂದೆಲಾವಣಿಗೂ ಪರಿಹಾಸ್ಯಕ್ಕೂ ಗುರಿಯಾಗುವಿರಿ.


ಆದುದರಿಂದ ಸರ್ವೇಶ್ವರ, ಜುದೇಯ ನಾಡಿನ ಮೇಲೂ ಜೆರುಸಲೇಮಿನ ಮೇಲೂ ಕೋಪಗೊಂಡು ಅವುಗಳನ್ನು ಭಯಭೀತಿಗೂ ಹಾಸ್ಯಪರಿಹಾಸ್ಯಗಳಿಗೂ ಆಸ್ಪದವಾಗಿಸಿದ್ದಾರೆ. ಇದಕ್ಕೆ ನೀವೇ ಸಾಕ್ಷಿಗಳು.


ಖಡ್ಗ-ಕ್ಷಾಮ-ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ ಲೋಕದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗಿರುವ ಎಲ್ಲ ರಾಷ್ಟ್ರಗಳಲ್ಲಿ ಅವರು ಶಾಪ, ಪರಿಹಾಸ್ಯ, ದೂಷಣೆಗಳಿಗೆ ಗುರಿಯಾಗುವಂತೆ ಮಾಡುವೆನು.


ಹಾದುಹೋಗುವವರೆಲ್ಲ ಕೈ ತಟ್ಟುತ್ತಾರಲ್ಲಾ ನಿನ್ನನ್ನು ನೋಡಿ ಜೆರುಸಲೇಮ್ ನಗರಿಯಾದ ನಿನ್ನನ್ನು ಗುರುತಿಸಿ ! “ಆಹಾ, ನೀನೇನೋ ಸರ್ವಾಂಗ ಸುಂದರಿ, ವಿಶ್ವಾನಂದದಾಯಕಿ !” ಎಂದು ಮೂದಲಿಸುತ್ತಾರಲ್ಲಾ ತಲೆಯಾಡಿಸಿ, ಸಿಳ್ಳುಹಾಕಿ !


ನಿನ್ನನ್ನು ನೋಡಿ ಶತ್ರುಗಳೆಲ್ಲರು ಕಟಕಟನೆ ಹಲ್ಲು ಕಡಿಯುತ್ತಾರಲ್ಲಾ ಬಾಯಿ ಕಿಸಿದು ! “ಹಾ, ಆಕೆಯನ್ನು ಕಬಳಿಸಿಬಿಟ್ಟೆವು ಈ ದಿನಕ್ಕಾಗಿಯೆ ನಾವು ಕಾದಿದ್ದೆವು ಈಗ ಅದನ್ನು ಕಣ್ಣಾರೆ ಕಂಡೆವು” ಎಂದು ಕೊಚ್ಚಿಕೊಳ್ಳುತ್ತಾರಲ್ಲಾ !


ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು.


ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ಮಾಡುವೆನು; ನೀನು ನಿನ್ನ ಮಿಂಡರಿಗೆ ಇನ್ನು ಬಹುಮಾನ ತರದಂತೆಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು