ಯೆಹೆಜ್ಕೇಲನು 48:22 - ಕನ್ನಡ ಸತ್ಯವೇದವು C.L. Bible (BSI)
22 ರಾಜನ ಪಾಲಿನ ಎರಡು ಭಾಗಗಳ ನಡುವಣ ಲೇವಿಯರ ಪಾಲಿನ ಉತ್ತರದ ಮೇರೆಯಿಂದ ರಾಜಧಾನಿಗೆ ಒಳಪಟ್ಟ ಭೂಮಿಯ ದಕ್ಷಿಣ ಮೇರೆಯ ತನಕ ಅಂದರೆ ಯೆಹೂದ್ಯದ ದಕ್ಷಿಣ ಸರಹದ್ದಿನಿಂದ ಬೆನ್ಯಾಮೀನಿನ ಸರಹದ್ದಿನವರೆಗೆ ರಾಜನ ಪಾಲು ಹರಡಿರುವುದು.
22 ಅರಸನ ಪಾಲಿನ ಎರಡು ಭಾಗಗಳ ಮಧ್ಯದಲ್ಲಿ ಲೇವಿಯರ ಪಾಲಿನ (ಬಡಗಣ) ಮೇರೆಯಿಂದ ಪಟ್ಟಣಕ್ಕೆ ಒಳಪಟ್ಟ ಭೂಮಿಯ (ತೆಂಕಣ) ಮೇರೆಯ ತನಕ ಅಂದರೆ ಯೆಹೂದದ (ತೆಂಕಣ) ಮೇರೆಯಿಂದ ಬೆನ್ಯಾಮೀನಿನ (ಬಡಗಣ) ಮೇರೆಯವರೆಗೆ ಅರಸನ ಪಾಲು ಹರಡಿರುವುದು.
ಮೀಸಲಾದ ಪವಿತ್ರಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಮಿಕ್ಕ ಭೂಮಿ ರಾಜನ ಪಾಲಾಗಿರಲಿ; ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ರಾಜನದು; ಮೀಸಲಾದ ಪವಿತ್ರಕ್ಷೇತ್ರ ಹಾಗು ಪವಿತ್ರಾಲಯ ಅದರ ಎರಡು ಭಾಗಗಳ ಮಧ್ಯೆ ಇರುವುವು;