Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 48:20 - ಕನ್ನಡ ಸತ್ಯವೇದವು C.L. Bible (BSI)

20 ಮೀಸಲಾದ ಪೂರ್ಣಕ್ಷೇತ್ರದ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹನ್ನೆರಡುವರೆ ಕಿಲೋಮೀಟರ್; ನೀವು ಮೀಸಲಾಗಿ ಅರ್ಪಿಸುವ ಪವಿತ್ರಕ್ಷೇತ್ರ ರಾಜಧಾನಿಗೆ ಒಳಪಟ್ಟ ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಮೀಸಲಾದ ಪೂರ್ಣ ಕ್ಷೇತ್ರದ ಉದ್ದ ಇಪ್ಪತ್ತೈದು ಸಾವಿರ ಮೊಳವು, ಅಗಲ ಇಪ್ಪತ್ತೈದು ಸಾವಿರ ಮೊಳ ಮತ್ತು ನೀವು ಮೀಸಲಾಗಿ ಅರ್ಪಿಸುವ ಪವಿತ್ರ ಕ್ಷೇತ್ರವು ಪಟ್ಟಣಕ್ಕೆ ಒಳಪಟ್ಟು, ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಮೀಸಲಾದ ಪೂರ್ಣಕ್ಷೇತ್ರದ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತೈದು ಸಾವಿರ ಮೊಳ; ನೀವು ಮೀಸಲಾಗಿ ಅರ್ಪಿಸುವ ಪವಿತ್ರಕ್ಷೇತ್ರವು ರಾಜಧಾನಿಗೆ ಒಳಪಟ್ಟ ಭೂವಿುಸಹಿತವಾಗಿ ಚಚ್ಚೌಕವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ವಿಶೇಷವಾದ ಈ ಭೂಪ್ರದೇಶವು ಚೌಕವಾಗಿರುವದು. ಇದರ ಉದ್ದ ಮತ್ತು ಇಪ್ಪತ್ತೈದು ಸಾವಿರ ಮೊಳ ಅಗಲ ಇಪ್ಪತ್ತೈದು ಸಾವಿರ ಮೊಳ. ಈ ಪ್ರದೇಶವನ್ನು ನೀನು ಅದರ ವಿಶೇಷವಾದ ಕಾರ್ಯಗಳಿಗಾಗಿ ಮೀಸಲಾಗಿಡಬೇಕು. ಅದರ ಒಂದು ಭಾಗವು ಯಾಜಕರಿಗಾಗಿರುತ್ತದೆ. ಇನ್ನೊಂದು ಭಾಗವು ಲೇವಿಯರಿಗಾಗಿರುತ್ತದೆ; ಮತ್ತೊಂದು ಭಾಗವು ಪಟ್ಟಣಕ್ಕಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಎಲ್ಲಾ ಕಾಣಿಕೆಯ ಸ್ಥಳವು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು. ನೀವು ಪರಿಶುದ್ಧ ವಿಶೇಷ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸೊತ್ತಿನ ಸಂಗಡ ಅರ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 48:20
4 ತಿಳಿವುಗಳ ಹೋಲಿಕೆ  

ಆ ನಗರ ಚಚ್ಚೌಕವಾಗಿತ್ತು. ಅದರ ಚದರ ಅಳತೆ 2,400 ಕಿಲೊಮೀಟರುಗಳಷ್ಟಿತ್ತು.


ಅನಂತರ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯಲು ಕಣ್ಣೀರಿಟ್ಟು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ; ತಂದೆಯ ತೀರ್ಮಾನವನ್ನು ಮಾರ್ಪಡಿಸುವ ಸಾಧ್ಯತೆಯೂ ಇರಲಿಲ್ಲ. ಇದು ನಿಮಗೆ ತಿಳಿದ ವಿಷಯ.


ಅವರು ಇಸ್ರಯೇಲಿನ ಯಾವ ಕುಲಕ್ಕೆ ಸೇರಿದ್ದರೂ ಪುರದಲ್ಲಿ ವಾಸಿಸುತ್ತಾ ಆ ಭೂಮಿಯನ್ನು ಕೃಷಿಮಾಡುವರು.


ಮೀಸಲಾದ ಪವಿತ್ರಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಮಿಕ್ಕ ಭೂಮಿ ರಾಜನ ಪಾಲಾಗಿರಲಿ; ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ರಾಜನದು; ಮೀಸಲಾದ ಪವಿತ್ರಕ್ಷೇತ್ರ ಹಾಗು ಪವಿತ್ರಾಲಯ ಅದರ ಎರಡು ಭಾಗಗಳ ಮಧ್ಯೆ ಇರುವುವು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು