Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 48:13 - ಕನ್ನಡ ಸತ್ಯವೇದವು C.L. Bible (BSI)

13 ಹನ್ನೆರಡುವರೆ ಕಿಲೋಮೀಟರ್ ಉದ್ದದ, ಐದು ಕಿಲೋಮೀಟರ್ ಅಗಲದ, ಒಂದು ಪಾಲು ಯಾಜಕರ ಪಾಲಿನ ಸರಹದ್ದಿಗೆ ಪಕ್ಕದಲ್ಲಿ, ಲೇವಿಯರಿಗೆ ಸಲ್ಲತಕ್ಕ; ಈ ಎರಡು ಪಾಲುಗಳ ಒಟ್ಟಳತೆ ಎಷ್ಟೆಂದರೆ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹತ್ತು ಕಿಲೋಮೀಟರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಮತ್ತು ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಒಂದು ಪಾಲು ಯಾಜಕರ ಪಾಲಿನ ಮೇರೆಯ ಪಕ್ಕದಲ್ಲಿ ಲೇವಿಯರಿಗೆ ಸಲ್ಲತಕ್ಕದ್ದು. ಈ ಎರಡು ಪಾಲುಗಳ ಒಟ್ಟು ಅಳತೆ ಎಷ್ಟೆಂದರೆ ಉದ್ದವು ಇಪ್ಪತ್ತೈದು ಸಾವಿರ ಮೊಳ ಮತ್ತು ಅಗಲವು ಇಪ್ಪತ್ತು ಸಾವಿರ ಮೊಳವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಮತ್ತು ಇಪ್ಪತ್ತೈದು ಸಾವಿರ ಮೊಳ ಉದ್ದದ, ಹತ್ತು ಸಾವಿರ ಮೊಳ ಅಗಲದ ಒಂದು ಪಾಲು ಯಾಜಕರ ಪಾಲಿನ ಸರಹದ್ದಿಗೆ ಪಕ್ಕದಲ್ಲಿ ಲೇವಿಯರಿಗೆ ಸಲ್ಲತಕ್ಕದ್ದು; [ಈ ಎರಡು ಪಾಲುಗಳ] ಒಟ್ಟಳತೆ ಎಷ್ಟಂದರೆ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತು ಸಾವಿರ ಮೊಳ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 “ಯಾಜಕರ ಭೂಮಿಯ ಪಕ್ಕದಲ್ಲಿ ಲೇವಿಯರ ಪಾಲಿನ ಭೂಮಿ ಇರುವದು. ಇದರ ಉದ್ದ ಇಪ್ಪತ್ತೈದು ಸಾವಿರ ಮೊಳ; ಅಗಲ ಹತ್ತು ಸಾವಿರ ಮೊಳ. ಈ ಎರಡು ಪಾಲುಗಳ ಒಟ್ಟಳತೆ ಇಪ್ಪತ್ತೈದು ಸಾವಿರ ಮೊಳ ಉದ್ದ, ಇಪ್ಪತ್ತು ಸಾವಿರ ಮೊಳ ಅಗಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 “ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಒಟ್ಟು ಉದ್ದ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 48:13
8 ತಿಳಿವುಗಳ ಹೋಲಿಕೆ  

ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು.


ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಐದು ಕಿಲೋಮೀಟರ್ ಅಗಲದ ಕ್ಷೇತ್ರವು ಅವರಿಗೆ ಸೊತ್ತಾಗುವುದು.


ಮೊದಲು ಅಳೆದ ಕ್ಷೇತ್ರದಲ್ಲಿ ಹನ್ನೆರಡುವರೆ ಕಿಲೋಮೀಟರ್ ಉದ್ದದ ಐದು ಕಿಲೋಮೀಟರ್ ಅಗಲದ ಒಂದು ಭಾಗವನ್ನು ಅಳೆ; ಇದರಲ್ಲಿ ಅತಿಪರಿಶುದ್ಧವಾದ ಪವಿತ್ರಾಲಯ ಇರಬೇಕು.


ನೀವು ನಿಮ್ಮ ನಾಡಿನಲ್ಲಿ ಇರುವ ತನಕ ಲೇವಿಯರನ್ನು ಕೈಬಿಡಬಾರದು; ಇದು ನೆನಪಿರಲಿ.


ಲೇವಿಯರ ಪಾಲಿನ ಸರಹದ್ದಿಗೆ ಪಕ್ಕದಲ್ಲಿರುವ ಆ ಕ್ಷೇತ್ರ ಅತಿಪವಿತ್ರವೂ ನಾಡಿನಲ್ಲಿನ ಮೀಸಲಲ್ಲಿ ಮೀಸಲೂ ಆಗಿ ಯಾಜಕರದಾಗಿರುವುದು.


ಆ ಕ್ಷೇತ್ರ ಸರ್ವೇಶ್ವರನಿಗೆ ಮೀಸಲಾದುದರಿಂದ ಅದರಲ್ಲಿ ಯಾವ ಭಾಗವನ್ನೂ ಮಾರಬಾರದು, ಅದಲುಬದಲು ಮಾಡಕೂಡದು. ನಾಡಿನ ಆ ಶ್ರೇಷ್ಠಾಂಶ ಪರರವಶವಾಗದಿರಲಿ.


“ನಿಮ್ಮ ಬೆಳೆಯ ಪ್ರಥಮ ಫಲದಲ್ಲಿ ಅತಿಶ್ರೇಷ್ಠವಾದುದ್ದನ್ನು ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಮಂದಿರಕ್ಕೆ ತರಬೇಕು. "ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.


ಅವರು ತಮ್ಮ ಪೇಟೆಗಳಿಗೆ ಸೇರಿರುವ ಹುಲ್ಲುಗಾವಲನ್ನು ಮಾರಲೇಕೂಡದು. ಅದು ಅವರಿಗೆ ಶಾಶ್ವತವಾದ ಸೊತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು