Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 46:9 - ಕನ್ನಡ ಸತ್ಯವೇದವು C.L. Bible (BSI)

9 ನಾಡಿನ ಜನರಾದರೋ ಹಬ್ಬಗಳಲ್ಲಿ ಸರ್ವೇಶ್ವರನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿಂದ ಆರಾಧಿಸುವುದಕ್ಕೆ ಪ್ರವೇಸಿಸಿದವರು ದಕ್ಷಿಣ ಬಾಗಿಲಿಂದ ಹೊರಡಲಿ; ದಕ್ಷಿಣ ಬಾಗಿಲಿಂದ ಪ್ರವೇಶಿಸಿದವನು ಉತ್ತರ ಬಾಗಿಲಿಂದ ಹಿಂದಿರುಗದೆ ಬಂದ ಮುಖವಾಗಿಯೇ ಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ದೇಶದ ಜನರಾದರೋ ಹಬ್ಬಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿನಿಂದ ಆರಾಧಿಸುವುದಕ್ಕೆ ಪ್ರವೇಶಿಸಿದವನು ದಕ್ಷಿಣ ಬಾಗಿಲಿಂದ ಹೊರಗೆ ಹೋಗಬೇಕು. ದಕ್ಷಿಣದ ಬಾಗಿಲಿನಿಂದ ಪ್ರವೇಶಿಸಿದವನು ಉತ್ತರ ಬಾಗಿಲಿನಿಂದ ಹೊರಗೆ ಹೋಗಬೇಕು. ತಾನು ಪ್ರವೇಶಿಸಿದ ಬಾಗಿಲಿನಿಂದ ಹಿಂದಿರುಗದೆ ಅದಕ್ಕೆ ಎದುರಾಗಿರುವ ಬಾಗಿಲಿಂದ ಹೊರಗೆ ಹೋಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ದೇಶದ ಜನರಾದರೋ ಹಬ್ಬಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಬಡಗಣ ಬಾಗಿಲಿಂದ ಆರಾಧಿಸುವದಕ್ಕೆ ಪ್ರವೇಶಿಸಿದವನು ತೆಂಕಣ ಬಾಗಿಲಿಂದ ಹೊರಡಲಿ; ತೆಂಕಣ ಬಾಗಿಲಿಂದ ಪ್ರವೇಶಿಸಿದವನು ಬಡಗಣ ಬಾಗಿಲಿಂದ ಹೊರಡಲಿ; ತಾನು ಪ್ರವೇಶಿಸಿದ ಬಾಗಿಲಿಂದ ಹಿಂದಿರುಗದೆ ಬಂದ ಮುಖವಾಗಿಯೇ ಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ಸಾಮಾನ್ಯ ಜನರು ವಿಶೇಷ ಹಬ್ಬದ ದಿವಸಗಳಲ್ಲಿ ಯೆಹೋವನನ್ನು ಸಂಧಿಸಲು ಬರುವಾಗ ಉತ್ತರ ದ್ವಾರದಿಂದ ಬರುವವರು ದಕ್ಷಿಣ ದ್ವಾರದ ಮೂಲಕ ಹೊರಗೆ ಹೋಗಬೇಕು. ದಕ್ಷಿಣದ ದ್ವಾರದಿಂದ ಒಳ ಪ್ರವೇಶಿಸುವವನು ಉತ್ತರ ದ್ವಾರದ ಮೂಲಕ ಹೊರಗೆ ಹೋಗಬೇಕು. ಯಾರೂ ಬಂದ ದಾರಿಯಿಂದ ಹಿಂದೆ ಹೋಗಬಾರದು. ಪ್ರತಿಯೊಬ್ಬನೂ ನೇರವಾಗಿ ಮುಂದಕ್ಕೆ ಹೋಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ ‘ಆದರೆ ದೇಶದ ಜನರು ನಿಶ್ಚಿತ ಹಬ್ಬಗಳಲ್ಲಿ ಯೆಹೋವ ದೇವರ ಮುಂದೆ ಬರುವಾಗ ಉತ್ತರದ ಬಾಗಿಲಿನಿಂದ ಪ್ರವೇಶಿಸಿ ಆರಾಧಿಸಿದ ಮೇಲೆ ಅವನು ದಕ್ಷಿಣದ ಬಾಗಿಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ಮತ್ತು ದಕ್ಷಿಣ ಬಾಗಿಲಿನ ಮಾರ್ಗವಾಗಿ ಪ್ರವೇಶಿಸುವವನು ಉತ್ತರ ಬಾಗಿಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ದಕ್ಷಿಣದ ಬಾಗಿಲಿನ ಮಾರ್ಗವಾಗಿ ಪ್ರವೇಶಿಸಿದ ಬಾಗಿಲಿನ ಮಾರ್ಗವಾಗಿಯೇ ತಿರುಗಿ ಹೊರಗೆ ಹೋಗಬಾರದು. ಆದರೆ ಅದಕ್ಕೆ ಎದುರಾಗಿರುವ ಬಾಗಿಲಿನಿಂದ ಹೊರಗೆ ಹೋಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 46:9
15 ತಿಳಿವುಗಳ ಹೋಲಿಕೆ  

“ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯಲ್ಲಿ, ಪಂಚಾಶತ್ತಮ ದಿನದ ಜಾತ್ರೆಯಲ್ಲಿ, ಕುಟೀರಗಳ ಜಾತ್ರೆಯಲ್ಲಿ, ಹೀಗೆ ವರ್ಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ, ಅವರು ಆರಿಸಿಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಕೈಯಲ್ಲಿ ಕಾಣಿಕೆಯಿಲ್ಲದೆ ಒಬ್ಬರೂ ಅವರ ಸನ್ನಿಧಿಗೆ ಬರಕೂಡದು.


ಸಾಗುಸಾಗುತ್ತಾ ಬೆಳೆವುದಾ ಯಾತ್ರಿಕರ ಚೇತನ I ಪಡೆವರು ಸಿಯೋನ್ ಗಿರಿಯೊಳು ದೇವಾಧಿದೇವನ ದರ್ಶನ II


ವರ್ಷಕ್ಕೆ ಮೂರು ಸಾರಿ ನಿಮ್ಮಲ್ಲಿರುವ ಗಂಡಸರೆಲ್ಲರು ಇಸ್ರಯೇಲರ ದೇವರೂ ಸರ್ವೇಶ್ವರನೂ ಆದ ನನ್ನ ಸನ್ನಿಧಿಯಲ್ಲಿ ಸೇರಬೇಕು.


ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ ಬಾಳುವರು ಅವರು ಹಿಂಜರಿದರಾದರೆ ಮೆಚ್ಚೆನು ನಾನವರನು,” ಎನ್ನುತ್ತದೆ ಪವಿತ್ರಗ್ರಂಥ.


“ನಾನು ನನ್ನ ದಾಸನಾದ ಮೋಶೆಗೆ ಬೋಧಿಸಿದ ಧರ್ಮಶಾಸ್ತ್ರವನ್ನು ಜ್ಞಾಪಕಕ್ಕೆ ತಂದುಕೊಳ್ಳಿ. ಆ ವಿಧಿನಿಯಮಗಳನ್ನು ಆತನಿಗೆ ಹೋರೇಬ್ ಬೆಟ್ಟದಲ್ಲಿ ಕೊಟ್ಟದ್ದು ಇಸ್ರಯೇಲರು ಅವುಗಳನ್ನು ಅನುಸರಿಸಲೆಂದೇ.”


ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು. ಓರೆಯಾಗಿ ಹೊರಳುತ್ತಿರಲಿಲ್ಲ.


ಆ ಜೀವಿಗಳೆಲ್ಲ ಹೊರಟ ಮುಖವಾಗಿಯೇ ಹೋಗುತ್ತಿದ್ದವು; ಹಿಂದಿರುಗಿನೋಡದೆ, ದೇವರಾತ್ಮ ಸಾಗಿಸಿದ ಕಡೆಗೇ ಸಾಗುತ್ತಿದ್ದವು.


ನನ್ನನ್ನು ಸರ್ವೇಶ್ವರನ ಆಲಯದ ಉತ್ತರ ಬಾಗಿಲ ಮುಂದಕ್ಕೆ ಕರೆತಂದರು; ಇಗೋ, ಅಲ್ಲಿ ಹೆಂಗಸರು ‘ತಮ್ಮೂಜ್’ ದೇವತೆಗಾಗಿ ಅಳುತ್ತಾ ಕುಳಿತಿದ್ದರು.


ಆಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು; ಅವನು ಅಲ್ಲಿನ ನಿಲವುಕಂಬಗಳನ್ನೂ ಕೈಸಾಲೆಯನ್ನೂ ಅಳೆಯಲು ಹಿಂದಣ ಅಳತೆಗಳೇ ಕಂಡುಬಂದವು.


ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ, ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡುಹೋಗಲೇ?


ಮೀಸಲಾದ ಮಂದೆಯಂತೆ, ಹಬ್ಬಗಳಲ್ಲಿ ಜೆರುಸಲೇಮಿಗೆ ಬಂದು ಸೇರುವ ಹಿಂಡಿನ ಹಾಗೆ, ಜನರು ಹಾಳುಪಟ್ಟಣಗಳಲ್ಲಿ ಹಿಂಡುಹಿಂಡಾಗಿ ತುಂಬಿಕೊಳ್ಳುವರು. ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ನಿಶ್ಚಯವಾಗುವುದು.”


ವ್ಯಾಜ್ಯವಾಗುವಾಗ ಅದನ್ನು ತೀರಿಸಲು ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್‍ಗಳನ್ನು ಜನರು ಆಚರಿಸುವಂತೆ ನೋಡಿಕೊಳ್ಳಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು