Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 44:28 - ಕನ್ನಡ ಸತ್ಯವೇದವು C.L. Bible (BSI)

28 “ಯಾಜಕರಿಗೆ ಇರುವ ಒಂದು ಸೊತ್ತು ಎಂದರೆ ನಾನೇ. ಇಸ್ರಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು. ನಾನೇ ಅವರಿಗೆ ಆಸ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 “ಅವರಿಗೆ ಇದು ಸ್ವಾಸ್ತ್ಯವಾಗುವುದು, ನಾನೇ ಅವರ ಸ್ವತ್ತು; ಇಸ್ರಾಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು; ನಾನೇ ಅವರಿಗೆ ಆಸ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಯಾಜಕರಿಗೆ ಒಂದು ಸ್ವಾಸ್ತ್ಯವಾಗುವದು, ನಾನೇ ಅವರ ಸ್ವಾಸ್ತ್ಯ; ಇಸ್ರಾಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು; ನಾನೇ ಅವರಿಗೆ ಆಸ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 “ಲೇವಿಯರ ಆಸ್ತಿಯು ನಾನೇ, ಇಸ್ರೇಲರೊಳಗೆ ಅವರಿಗೆ ಯಾವ ಆಸ್ತಿಯೂ ಇರುವದಿಲ್ಲ. ನಾನೇ ಅವರ ಸ್ವಾಸ್ತ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ ‘ಅದು ಅವರಿಗೆ ಬಾಧ್ಯತೆಯಾಗಿರುವುದು; ನಾನೇ ಅವರಿಗೆ ಬಾಧ್ಯನಾಗಿರುವೆನು. ನೀವು ಇಸ್ರಾಯೇಲಿನಲ್ಲಿ ಅವರಿಗೆ ಸ್ವಾಸ್ತ್ಯವನ್ನು ಕೊಡಬಾರದು. ಏಕೆಂದರೆ ನಾನೇ ಅವರಿಗೆ ಸ್ವಾಸ್ತ್ಯವಾಗಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 44:28
8 ತಿಳಿವುಗಳ ಹೋಲಿಕೆ  

ಆದರೆ ಲೇವಿಯ ಕುಲಕ್ಕೆ ಮೋಶೆ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನೇ ಅವರ ಸೊತ್ತೆಂದು ವಾಗ್ದಾನ ಮಾಡಲಾಗಿತ್ತು.


ಇದಲ್ಲದೆ ಸರ್ವೇಶ್ವರ ಆರೋನನಿಗೆ ಹೀಗೆಂದರು: “ಇಸ್ರಯೇಲರ ನಾಡಿನಲ್ಲಿ ನಿನ್ನ ಸ್ವಂತ ಸೊತ್ತಾಗಿ ಯಾವ ಆಸ್ತಿಯೂ ಇರುವುದಿಲ್ಲ; ಅವರೊಂದಿಗೆ ನಿನಗೆ ಯಾವ ಪಾಲೂ ಇರುವುದಿಲ್ಲ. ಇಸ್ರಯೇಲರ ನಡುವೆ ನಾನೇ ನಿನಗೆ ಆಸ್ತಿಪಾಸ್ತಿ, ಪಾಲುಪಸುಗೆ.”


ಆದುದರಿಂದ ಮಿಕ್ಕ ಇಸ್ರಯೇಲರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ವಾಸ್ತ್ಯ ದೊರಕಲಿಲ್ಲ. ನಿಮ್ಮ ದೇವರಾದ ಸರ್ವೇಶ್ವರ ಅವರಿಗೆ ಹೇಳಿದಂತೆ ಸರ್ವೇಶ್ವರಸ್ವಾಮಿಯೇ ಅವರ ಸೊತ್ತು.


ಇದು ನಾಡಿನಲ್ಲೇ ಪರಿಶುದ್ಧಭಾಗ; ಇದು ಪವಿತ್ರಾಲಯದ ಅರ್ಚಕರೂ ಸರ್ವೇಶ್ವರನ ಸನ್ನಿಧಿಸೇವಕರೂ ಆದ ಯಾಜಕರಿಗೆ ಸಲ್ಲತಕ್ಕದ್ದು; ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿ ಹಾಗು ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿ ಇರುವುದು.


ಲೇವಿ ಕುಲದವರಿಗೆ ಮಾತ್ರ ಯಾವ ಪಾಲೂ ಸಿಕ್ಕಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನು ಆಜ್ಞಾಪಿಸಿದಂತೆ ಯಜ್ಞಶೇಷವೇ ಅವರ ಸೊತ್ತಾಗಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು