ಯೆಹೆಜ್ಕೇಲನು 43:13 - ಕನ್ನಡ ಸತ್ಯವೇದವು C.L. Bible (BSI)13 ಬಲಿಪೀಠವು ಮೀಟರ್ ಅಳತೆಯ ಪ್ರಕಾರ ಹೀಗಿರಬೇಕು. ಕೆಳಭಾಗದ ಎತ್ತರ ಐವತ್ತು ಸೆಂಟಿಮೀಟರ್, ಮೇಲಿನ ಬಿಡುವಿನ ಅಗಲವು ಸುತ್ತಲೂ ಐವತ್ತು ಸೆಂಟಿಮೀಟರ್, ಬಿಡುವಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಇಪ್ಪತ್ತೈದು ಸೆಂಟಿಮೀಟರ್; ಇದೇ ಬಲಿವೇದಿಕೆಯ ಪೀಠ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 “ಯಜ್ಞವೇದಿಯ ಅಳತೆಗಳು ಮೊಳದ ಪ್ರಕಾರ ಹೀಗಿರಬೇಕು. (ಉದ್ದ ಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ) ಕೆಳಭಾಗದ ಎತ್ತರ ಒಂದು ಮೊಳ, ಮೇಲಿನ ಅಂಚಿನ ಅಗಲ ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಒಂದು ಗೇಣು; ಇದೇ ಯಜ್ಞವೇದಿಯ ಪೀಠ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಯಜ್ಞವೇದಿಯು ಉದ್ದಮೊಳದ ಅಳತೆಯ ಪ್ರಕಾರ ಹೀಗಿರಬೇಕು (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿಯುದ್ದ) - ಕೆಳಭಾಗದ ಎತ್ತರವು ಒಂದು ಮೊಳ, ಮೇಲಿನ ಬಿಡುವಿನ ಅಗಲವು ಸುತ್ತಲೂ ಒಂದು ಮೊಳ, ಬಿಡುವಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಒಂದು ಗೇಣು; ಇದೇ ಯಜ್ಞವೇದಿಯ ಪೀಠ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 “ಯಜ್ಞವೇದಿಕೆ ಉದ್ದಮೊಳದ ಅಳತೆಯ ಪ್ರಕಾರ ಇರಬೇಕು. ಯಜ್ಞವೇದಿಯ ಅಡಿಪಾಯದ ಸುತ್ತಲೂ ಕಾಲಿವೆ ತೋಡಲ್ಪಟ್ಟಿತ್ತು. ಅದರ ಆಳ ಒಂದು ಮೊಳ. ಪ್ರತಿಯೊಂದು ಕಡೆಯಲ್ಲಿ ಅದರ ಅಗಲ ಒಂದು ಮೊಳ. ಯಜ್ಞವೇದಿಯ ಸುತ್ತ ಒಂದು ಗೇಣುದ್ದದ ಚೌಕಟ್ಟಿತ್ತು. ಇದು ಎತ್ತರವಾದ ಯಜ್ಞವೇದಿಯ ವಿನ್ಯಾಸ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 “ಬಲಿಪೀಠವು ಮೀಟರ್ ಅಳತೆಯ ಪ್ರಕಾರ ಹೀಗಿರಬೇಕು. ಕೆಳಭಾಗದ ಎತ್ತರ ಐವತ್ತು ಸೆಂಟಿಮೀಟರ್, ಮೇಲಿನ ಬಿಡುವಿನ ಅಗಲವು ಸುತ್ತಲೂ ಐವತ್ತು ಸೆಂಟಿಮೀಟರ್, ಬಿಡುವಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಇಪ್ಪತ್ತೈದು ಸೆಂಟಿಮೀಟರ್; ಅಧ್ಯಾಯವನ್ನು ನೋಡಿ |