Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 42:20 - ಕನ್ನಡ ಸತ್ಯವೇದವು C.L. Bible (BSI)

20 ಆಲಯವನ್ನು ನಾಲ್ಕು ಪಾರ್ಶ್ವಗಳಲ್ಲಿಯೂ ಅಳೆದನು; ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಪ್ರದೇಶಗಳನ್ನು ವಿಂಗಡಿಸುವುದಕ್ಕೆ ಐನೂರಳತೇ ಕೋಲುದ್ದದ, ಐನೂರಳತೇ ಕೋಲಗಲದ ಗೋಡೆ ಸುತ್ತಮುತ್ತಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆಲಯವನ್ನು ನಾಲ್ಕು ಕಡೆಗಳಲ್ಲಿಯೂ ಅಳೆದನು. ಪವಿತ್ರವಾದ ಮತ್ತು ಅಪವಿತ್ರವಾದ ಪ್ರದೇಶಗಳನ್ನು ವಿಂಗಡಿಸುವುದಕ್ಕೆ ಐನೂರು ಕೋಲು ಉದ್ದವಾದ ಮತ್ತು ಐನೂರು ಕೋಲು ಅಗಲವಾದ ಗೋಡೆ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆಲಯವನ್ನು ನಾಲ್ಕು ಪಾರ್ಶ್ವಗಳಲ್ಲಿಯೂ ಅಳೆದನು; ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಪ್ರದೇಶಗಳನ್ನು ವಿಂಗಡಿಸುವದಕ್ಕೆ ಐನೂರಳತೇ ಕೋಲುದ್ದದ ಐನೂರಳತೇ ಕೋಲಗಲದ ಗೋಡೆಯು ಸುತ್ತುಮುತ್ತಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆಲಯದ ಸುತ್ತಲೂ ಇದ್ದ ನಾಲ್ಕು ಗೋಡೆಗಳನ್ನು ಅಳೆದನು. ಆ ಗೋಡೆ ಐನೂರು ಮೊಳ ಉದ್ದವಿದ್ದು ಐನೂರು ಮೊಳ ಅಗಲವಿತ್ತು. ಅದು ಪವಿತ್ರಸ್ಥಳವನ್ನೂ ಬೇರೆ ಸ್ಥಳವನ್ನೂ ಬೇರ್ಪಡಿಸಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅವನು ನಾಲ್ಕು ಕಡೆಗಳಿಂದ ಅಳೆದನು. ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಸ್ಥಳವನ್ನೂ ಪ್ರತ್ಯೇಕಪಡಿಸುವ ಹಾಗೆ ಅದಕ್ಕೆ ಸುತ್ತಲು ಸುಮಾರು 265 ಮೀಟರ್ ಉದ್ದ ಮತ್ತು ಸುಮಾರು 265 ಮೀಟರ್ ಗೋಡೆ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 42:20
18 ತಿಳಿವುಗಳ ಹೋಲಿಕೆ  

ಇದರಲ್ಲಿ 250 ಮೀಟರ್ ಉದ್ದದ, 250 ಮೀಟರ್ ಅಗಲದ ಚಚ್ಚೌಕವಾದ ಸ್ಥಳವು ಪವಿತ್ರಾಲಯಕ್ಕೆ ನಿವೇಶನವಾಗಿರುವುದು; ಅದರ ಸುತ್ತ ಇಪ್ಪತ್ತೈದು ಮೀಟರ್ ಅಗಲ ಉಳದ ಭೂಮಿ ಇರುವುದು.


ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಮೂರು ಮೀಟರ್ ಅಳತೆಕೋಲೊಂದಿತ್ತು. ಆ ಗೋಡೆ ಮೂರು ಮೀಟರ್ ದಪ್ಪ ಹಾಗು ಮೂರು ಮೀಟರ್ ಎತ್ತರ ಇತ್ತು.


ಅಲ್ಲಿನ ಯಾಜಕರು ನನ್ನ ವಿಧಿಗಳನ್ನು ಉಲ್ಲಂಘಿಸಿದ್ದಾರೆ, ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಗೊಳಿಸಿದ್ದಾರೆ; ಮೀಸಲಾದುದಕ್ಕೂ ಮೀಸಲಲ್ಲದ್ದಕ್ಕೂ ಭೇದವೆಣಿಸಲಿಲ್ಲ. ಶುದ್ಧಾ ಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಕಡೆಗಣಿಸಿದ್ದಾರೆ. ಇದರಿಂದ ನಾನು ಅವರ ಮಧ್ಯೆ ಅಪಕೀರ್ತಿಗೆ ಗುರಿಯಾಗಿದ್ದೇನೆ.


ನಾನೇ ಅದರ ಸುತ್ತಮುತ್ತಲು ಅಗ್ನಿ ಪ್ರಾಕಾರವಾಗಿ, ಅದರೊಳಗಿನ ವೈಭವವಾಗಿರುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ,’ ಎಂದ.”


ಹನ್ನೆರಡುವರೆ ಕಿಲೋಮೀಟರ್ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ, (ಮೀಸಲುಪಾಲಿನ ಒಟ್ಟಳತೆಯಲ್ಲಿ), ಮಿಕ್ಕ ಎರಡುವರೆ ಕಿಲೋಮೀಟರ್ ಅಗಲದ ಭೂಮಿ ಮೀಸಲಿಲ್ಲವೆಂದೆಣಿಸಿ, ರಾಜಧಾನಿಗೆ ಅಂದರೆ, ಜನರ ನಿವಾಸಕ್ಕೂ ಸುತ್ತಣ ಪ್ರದೇಶಕ್ಕೂ ಪ್ರತ್ಯೇಕವಾಗಿರಲಿ. ರಾಜಧಾನಿ ಅದರ ಮಧ್ಯದಲ್ಲಿರಲಿ.


“ಮೀಸಲಾಗಿದದ್ದಕ್ಕೂ ಮೀಸಲಲ್ಲದ್ದಕ್ಕೂ ಇರುವ ಭೇದವನ್ನು ನನ್ನ ಜನರಿಗೆ ತೋರಿಸಿ, ಶುದ್ಧಾಶುದ್ಧ ವಿವೇಚನೆಯನ್ನು ಅವರಿಗೆ ಬೋಧಿಸಲಿ.


ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು ನಿನ್ನ ದೇಶದಲಿ ನಾಶವಿನಾಶಗಳ ವಾರ್ತೆಯೇ ಕೇಳಿಬರದು ನಿನ್ನ ಪ್ರಾಂತ್ಯಗಳಲಿ. ಆಗ ಹೆಸರಿಡುವೆ ನಿನ್ನ ಪೌಳಿಗೋಡೆಗೆ ‘ದೈವಮುಕ್ತಿ’ ಎಂದು ನಿನ್ನೀ ಪುರದ್ವಾರಗಳಿಗೆ “ದೈವಸ್ತುತಿ’ ಎಂದು.


ಇದಲ್ಲದೆ: ಅನ್ಯಜನರನ್ನು ಬಿಟ್ಟು ಹೊರಬನ್ನಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ.


ಅಷ್ಟೇ ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿಬರಲೂ ಸಾಧ್ಯವಿಲ್ಲ,’ ಎಂದ.


ಜೆರುಸಲೇಮಿನ ನಿವಾಸಿಗಳೇ, ನಿಮ್ಮ ಕೋಟೆಯ ಗೋಡೆಗಳನ್ನು ಮರಳಿ ಎಬ್ಬಿಸುವ ದಿನ ಬರುವುದು. ಅಂದು ನಿಮ್ಮ ಗಡಿಯ ವಿಸ್ತರಣೆ ಆಗುವುದು.


ಮೀಸಲಾದ ಪೂರ್ಣಕ್ಷೇತ್ರದ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹನ್ನೆರಡುವರೆ ಕಿಲೋಮೀಟರ್; ನೀವು ಮೀಸಲಾಗಿ ಅರ್ಪಿಸುವ ಪವಿತ್ರಕ್ಷೇತ್ರ ರಾಜಧಾನಿಗೆ ಒಳಪಟ್ಟ ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.


ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು : ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.


ಸರ್ವೇಶ್ವರಾ, ನೀನೆನ್ನ ದೇವನು, ಏಕೆನೆ ನೀನು ಸತ್ಯಸ್ವರೂಪನು, ನಿಷ್ಟಾವಂತನು, ಆದಿ ಯೋಜನೆಗಳನು ಪೂರೈಸುವವನು, ಅದ್ಭುತಕಾರ್ಯಗಳನು ಎಸಗಿದಂತವನು. ಘನಪಡಿಸುವೆ ನಾ ನಿನ್ನನು, ಸ್ತುತಿಸುವೆನು ನಿನ್ನ ನಾಮ ಮಹಿಮೆಯನು.


ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲೆಯಂತೆ ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ ಇಣುಕು ಹಾಕುತಿಹನು ಜಾಲಾಂತರಗಳಲಿ.


ದೇವರಿಗೆ ಮೀಸಲಾದ ವಸ್ತ್ರಗಳಾವುವು; ಸಲ್ಲದ ವಸ್ತ್ರಗಳಾವುವು; ಶುದ್ಧ, ಆಶುದ್ಧವಾದುವುಗಳಾವುವು ಎಂಬುದನ್ನು ನೀವು ವಿವೇಚಿಸಬೇಕು.


ದಕ್ಷಿಣ ದಿಕ್ಕಿನಲ್ಲಿ ಉದ್ದಕ್ಕೂ ಅಳತೇಕೋಲಿನಿಂದ ಐನೂರು ಕೋಲಳೆದನು.


ಇದೇ ದೇವಸ್ಥಾನದ ನಿಯಮ. ಪರ್ವತಾಗ್ರದಲ್ಲಿನ ಅದರ ಪ್ರದೇಶವೆಲ್ಲ ಸುತ್ತುಮುತ್ತಲು ಅತಿಪರಿಶುದ್ಧವಾಗಿರಬೇಕು. ಇಗೋ, ದೇವಸ್ಥಾನದ ನಿಯಮ ಇದೇ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು