Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 42:15 - ಕನ್ನಡ ಸತ್ಯವೇದವು C.L. Bible (BSI)

15 ಆ ಪುರುಷನು ಒಳಗಿನ ಮಂದಿರವನ್ನು ಅಳೆದ ನಂತರ ನನ್ನನ್ನು ಪೂರ್ವಹೆಬ್ಬಾಗಿಲ ಮಾರ್ಗವಾಗಿ ಈಚೆಗೆ ಕರೆದುತಂದು ಆಲಯವನ್ನೆಲ್ಲಾ ಸುತ್ತುಮುತ್ತಲು ಅಳೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆ ಪುರುಷನು ಒಳಗಿನ ಆಲಯವನ್ನು ಅಳತೆ ಮಾಡಿದ ನಂತರ ನನ್ನನ್ನು ಪೂರ್ವದ ಹೆಬ್ಬಾಗಿಲಿನ ಮಾರ್ಗವಾಗಿ ಹೊರಗೆ ಕರೆದುಕೊಂಡು ಬಂದು, ಆಲಯದ ಸುತ್ತಲೂ ಅಳತೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆ ಪುರುಷನು ಒಳಗಣ ಮಂದಿರವನ್ನು ಅಳೆದುಬಿಟ್ಟ ನಂತರ ನನ್ನನ್ನು ಮೂಡಣ ಹೆಬ್ಬಾಗಿಲ ಮಾರ್ಗವಾಗಿ ಈಚೆಗೆ ಕರತಂದು ಆಲಯವನ್ನೆಲ್ಲಾ ಸುತ್ತುಮುತ್ತಲು ಅಳೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆಲಯದ ಒಳಭಾಗದ ಅಳತೆಯನ್ನು ಅವನು ತೆಗೆದುಕೊಂಡ ಬಳಿಕ ನನ್ನನ್ನು ಪೂರ್ವದ ದ್ವಾರದಿಂದ ಹೊರತಂದು ಆ ಜಾಗವನ್ನೆಲ್ಲಾ ಅಳೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಹೀಗೆ ಅವನು ಒಳಗಿನ ಆಲಯದ ಅಳತೆಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಿಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 42:15
7 ತಿಳಿವುಗಳ ಹೋಲಿಕೆ  

ಆಮೇಲೆ ಆ ಪುರುಷ ನನ್ನನ್ನು ಪೂರ್ವದ ಬಾಗಿಲಿಗೆ ಬರಮಾಡಿದನು.


ಅವನು ದೀಕ್ಷಿತರ ಪ್ರಾಕಾರದ ಹಿಂದಿನ ಶಾಲೆಯನ್ನು ಆ ಪ್ರಾಕಾರದ ಕಡೆಯಲ್ಲಿ ಅಳೆಯಲು ಅದರ ಉದ್ದ ಎರಡು ಪಕ್ಕದ ಗೋಡೆಗಳ ಸಹಿತ ಐವತ್ತು ಮೀಟರಿತ್ತು.


ಮತ್ತೆ, ಯಾಜಕರ ಪ್ರಾಕಾರವನ್ನೂ ಮಹಾಪ್ರಾಕಾರವನ್ನೂ ಮಾಡಿಸಿ ಮಹಾಪ್ರಾಕಾರಕ್ಕೆ ಬಾಗಿಲುಗಳನ್ನೂ ಇಟ್ಟನು. ಅವುಗಳ ಕದಗಳನ್ನು ಕಂಚಿನ ತಗಡಿನಿಂದ ಹೊದಿಸಿದನು.


ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಮೂರು ಮೀಟರ್ ಅಳತೆಕೋಲೊಂದಿತ್ತು. ಆ ಗೋಡೆ ಮೂರು ಮೀಟರ್ ದಪ್ಪ ಹಾಗು ಮೂರು ಮೀಟರ್ ಎತ್ತರ ಇತ್ತು.


ಇದರಲ್ಲಿ 250 ಮೀಟರ್ ಉದ್ದದ, 250 ಮೀಟರ್ ಅಗಲದ ಚಚ್ಚೌಕವಾದ ಸ್ಥಳವು ಪವಿತ್ರಾಲಯಕ್ಕೆ ನಿವೇಶನವಾಗಿರುವುದು; ಅದರ ಸುತ್ತ ಇಪ್ಪತ್ತೈದು ಮೀಟರ್ ಅಗಲ ಉಳದ ಭೂಮಿ ಇರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು