ಯೆಹೆಜ್ಕೇಲನು 42:14 - ಕನ್ನಡ ಸತ್ಯವೇದವು C.L. Bible (BSI)14 ಯಾಜಕರು ಪರಿಶುದ್ಧ ಪ್ರಾಕಾರವನ್ನು ಪ್ರವೇಶಿಸಿದ ಮೇಲೆ ಅದನ್ನು ಬಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಕೂಡದು; ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲೇ ತೆಗೆದಿಟ್ಟುಕೊಳ್ಳಬೇಕು, ಅವೂ ಪರಿಶುದ್ಧವಾದುವು. ಆಮೇಲೆ ಬೇರೆ ವಸ್ತ್ರಗಳನ್ನು ಹಾಕಿಕೊಂಡು ಜನಸಾಮಾನ್ಯರ ಪ್ರಾಕಾರಕ್ಕೆ ಬರುತ್ತಾರೆ,’ ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಯಾಜಕರು ಪರಿಶುದ್ಧ ಸ್ಥಳವನ್ನು ಪ್ರವೇಶಿಸಿದ ಮೇಲೆ, ಅದನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು. ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲೇ ತೆಗೆದಿಟ್ಟುಕೊಳ್ಳಬೇಕು, ಅವು ಪರಿಶುದ್ಧವೇ. ಆಮೇಲೆ ಬೇರೆ ವಸ್ತ್ರಗಳನ್ನು ಹಾಕಿಕೊಂಡು ಸಾಮಾನ್ಯ ಜನರ ಅಂಗಳಕ್ಕೆ ಬರಬೇಕು” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಯಾಜಕರು ಪರಿಶುದ್ಧ ಪ್ರಾಕಾರವನ್ನು ಪ್ರವೇಶಿಸಿದ ಮೇಲೆ ಅದನ್ನು ಬಿಟ್ಟು ಹೊರಗಣ ಪ್ರಾಕಾರಕ್ಕೆ ಹೋಗಕೂಡದು; ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲೇ ತೆಗೆದಿಟ್ಟುಕೊಳ್ಳಬೇಕು, ಅವು ಪರಿಶುದ್ಧವೇ; ಆಮೇಲೆ ಬೇರೆ ವಸ್ತ್ರಗಳನ್ನು ಹಾಕಿಕೊಂಡು ಸಾಮಾನ್ಯಜನರ ಪ್ರಾಕಾರಕ್ಕೆ ಬರುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಈ ಪವಿತ್ರಸ್ಥಳಕ್ಕೆ ಪ್ರವೇಶಿಸುವ ಯಾಜಕರು ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲಿಯೇ ತೆಗೆದಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಬೇಕು. ಯಾಕೆಂದರೆ ಆ ವಸ್ತುಗಳು ಪವಿತ್ರವಾದದ್ದು. ಒಬ್ಬ ಯಾಜಕನು ಇತರ ಜನರು ಇರುವ ಸ್ಥಳಕ್ಕೆ ಹೋಗಬೇಕಿದ್ದಲ್ಲಿ ಅವನು ಕೋಣೆಗೆ ಬಂದು ದೀಕ್ಷಾವಸ್ತ್ರಗಳನ್ನು ತೆಗೆದಿಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಂಡು ಹೋಗಬೇಕು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಯಾಜಕರು ಅವುಗಳಲ್ಲಿ ಪ್ರವೇಶಿಸುವಾಗ ಅವರು ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು. ಅವರು ತಾವು ಸೇವೆಗಾಗಿ ಧರಿಸಿದ ವಸ್ತ್ರಗಳನ್ನು ಅಲ್ಲೇ ತೆಗೆದಿಡಬೇಕು. ಏಕೆಂದರೆ ಅವು ಪರಿಶುದ್ಧವಾಗಿವೆ. ಅವರು ಜನರಿಗೆ ಸಂಬಂಧಪಟ್ಟ ಬೇರೆ ವಸ್ತ್ರಗಳನ್ನು ಧರಿಸಿಕೊಂಡು ಸಮೀಪಿಸಬೇಕು,” ಎಂದನು. ಅಧ್ಯಾಯವನ್ನು ನೋಡಿ |