ಯೆಹೆಜ್ಕೇಲನು 40:45 - ಕನ್ನಡ ಸತ್ಯವೇದವು C.L. Bible (BSI)45 ಆಗ ಅವನು ನನಗೆ ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆ ದೇವಾಲಯ ಪಾರುಪತ್ಯವನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201945 ಆಗ ಅವನು ನನಗೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆಯು ದೇವಾಲಯದ ಮೇಲ್ವಿಚಾರಣೆಯನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)45 ಆಗ ಅವನು ನನಗೆ - ತೆಂಕಲಿಗೆ ಅಭಿಮುಖವಾಗಿರುವ ಈ ಕೋಣೆಯು ದೇವಾಲಯದ ಪಾರುಪತ್ಯವನ್ನು ನಡಿಸುವ ಯಾಜಕರಿಗೆ ನೇಮಕವಾಗಿದೆ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್45 ಅವನು, “ದಕ್ಷಿಣಕ್ಕೆ ಅಭಿಮುಖವಾಗಿದ್ದ ಕೋಣೆಯು, ಆಲಯದಲ್ಲಿ ಯಾಜಕ ಉದ್ಯೋಗ ಮಾಡುತ್ತಿರುವ ಯಾಜಕರಿಗಾಗಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ45 ಅವನು ನನಗೆ ಹೇಳಿದ್ದೇನೆಂದರೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ದೇವಾಲಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು. ಅಧ್ಯಾಯವನ್ನು ನೋಡಿ |
ಈ ಯಾಜಕರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸರ್ವೇಶ್ವರನಿಗಾಗಿ ದಹನಬಲಿಗಳನ್ನು ಸಮರ್ಪಿಸುತ್ತಾ, ಸುಗಂಧದ್ರವ್ಯಗಳ ಧೂಪಾರತಿ ಎತ್ತುತ್ತಾ, ಚೊಕ್ಕಬಂಗಾರದ ಮೇಜಿನ ಮೇಲೆ ನೈವೇದ್ಯವಾದ ರೊಟ್ಟಿಗಳನ್ನಿಡುತ್ತಾ, ಪ್ರತೀ ಸಾಯಂಕಾಲ ಬಂಗಾರದ ದೀಪಸ್ತಂಭದ ದೀಪಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ನಾವು ನಮ್ಮ ದೇವರಾದ ಸರ್ವೇಶ್ವರನ ಕಟ್ಟಳೆಗಳನ್ನು ಕೈಕೊಳ್ಳುತ್ತೇವೆ; ನೀವಾದರೋ ಅವರನ್ನು ತೊರೆದುಬಿಟ್ಟವರು.
ಆರೋನನೂ ಅವನ ವಂಶಜರೂ ಸುಗಂಧ ಕಾಣಿಕೆಗಳನ್ನು ಅರ್ಪಿಸುತ್ತಿದ್ದರು. ಬಲಿಪೀಠದ ಮೇಲೆ ಸಮರ್ಪಿಸುವ ಬಲಿಗಳನ್ನು ಅರ್ಪಣೆಮಾಡುತ್ತಿದ್ದರು. ಅತೀ ಪರಿಶುದ್ಧ ಸ್ಥಳದ ಎಲ್ಲ ಆರಾಧನೆಗೂ ಇಸ್ರಯೇಲರ ಕ್ಷಮಾಪಣೆಗಾಗಿ ಸರ್ವೇಶ್ವರ ನೇಮಿಸಿದ ಬಲಿಯರ್ಪಣೆಗಳಿಗೂ ಧೂಪಾರತಿಗೂ ಅವರೇ ಜವಾಬ್ದಾರರು ಆಗಿದ್ದರು. ದೇವರ ಸೇವಕ ಮೋಶೆ ಕೊಟ್ಟ ನಿಯಮಗಳಿಗೆ ಅನುಸಾರವಾಗಿ ಇದೆಲ್ಲವನ್ನೂ ಅವರು ಮಾಡುತ್ತಿದ್ದರು.