Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 40:15 - ಕನ್ನಡ ಸತ್ಯವೇದವು C.L. Bible (BSI)

15 ಪ್ರವೇಶಸ್ಥಾನದ ಹೊರಗಡೆಯಿಂದ ಒಳಕೈಸಾಲೆಯ ಕೊನೆಯತನಕ ಹೆಬ್ಬಾಗಿಲು ಇಪ್ಪತ್ತೈದು ಮೀಟರ್ ಉದ್ದವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಪ್ರವೇಶದ ಬಾಗಿಲಿನ ಮುಂದುಗಡೆಯಿಂದ ಒಳ ಬಾಗಿಲಿನ ದ್ವಾರದ ಅಂಗಳದವರೆಗೂ ಐವತ್ತು ಮೊಳ ಉದ್ದವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಪ್ರವೇಶ ಸ್ಥಾನದ ಹೊರಗಡೆಯಿಂದ ಒಳಕೈಸಾಲೆಯ ಕೊನೆಯ ತನಕ ಹೆಬ್ಬಾಗಿಲು ಐವತ್ತು ಮೊಳ ಉದ್ದವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಹೊರಗಿನ ಬಾಗಿಲಿನ ಒಳಭಾಗದ ತುದಿಯಿಂದ ಹಿಡಿದು ಕೈಸಾಲೆಯ ಕೊನೆಯ ತುದಿಯ ತನಕ ಐವತ್ತು ಮೊಳವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಪ್ರವೇಶದ ಬಾಗಿಲಿನ ಮುಂದುಗಡೆಯಿಂದ ಒಳಬಾಗಿಲಿನ ದ್ವಾರದ ಅಂಗಳದವರೆಗೂ ಸುಮಾರು ಇಪ್ಪತ್ತೇಳು ಮೀಟರ್ ದೂರವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 40:15
4 ತಿಳಿವುಗಳ ಹೋಲಿಕೆ  

ಪ್ರಾಕಾರದಲ್ಲಿನ ನಿಲವು ಕಂಬದವರೆಗೆ ನಿಲವುಕಂಬಗಳನ್ನು ಅಳತೆಮಾಡಲು ಮೂವತ್ತು ಮೀಟರ್ ಇದ್ದವು. ಹೆಬ್ಬಾಗಿಲನ್ನು ಸುತ್ತುಮುತ್ತಲು ಅಳೆದನು.


ಗೋಡೇಕೋಣೆಗಳಲ್ಲೂ ಒಳಗಣ ಎರಡು ಕಡೆಯ ನಿಲುವುಕಂಬಗಳಲ್ಲೂ ಕೈಸಾಲೆಗಳಲ್ಲೂ ತೆರೆಯಲಾಗದ ಕಿಟಕಿಗಳು ಹೆಬ್ಬಾಗಿಲೊಳಗೆ ಸುತ್ತಮುತ್ತಲು ಇದ್ದವು; ಹೊರಗಣ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು.


ಅದರೊಳಗೆ ಎರಡು ಕಡೆ ಗೋಡೇ ಕೋಣೆಗಳು ಮೂರು ಮೂರಿದ್ದವು; ಅಲ್ಲಿನ ನಿಲವುಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು. ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.


ತರುವಾಯ ದಾವೀದನು ತನ್ನ ಮಗ ಸೊಲೊಮೋನನಿಗೆ ದೇವಾಲಯದ ಮಂಟಪ, ಉಗ್ರಾಣಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನಮಂದಿರ, ಇವುಗಳ ನಕ್ಷೆಯನ್ನು ಕೊಟ್ಟನು. ಸರ್ವೇಶ್ವರನ ಆಲಯದ ಅಂಗಳಗಳು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು