Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 39:15 - ಕನ್ನಡ ಸತ್ಯವೇದವು C.L. Bible (BSI)

15 ದಾರಿಗಳಲ್ಲಿ ಯಾವನೇ ಆಗಲಿ ಪ್ರಯಾಣ ಮಾಡುತ್ತಿರುವಾಗ ಮನುಷ್ಯನ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ನಿಲ್ಲಿಸುವನು; ಹೂಣಿಡುವವರು ಗೋಗನ ಸಮೂಹದ ಕಣಿವೆಯಲ್ಲಿ ಅದನ್ನು ಹೂಣುವ ತನಕ ಆ ಗುರುತು ಹಾಗೇ ನಿಂತಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಪ್ರಯಾಣಿಕರಲ್ಲಿ ಯಾರೇ ಆಗಲಿ ಪ್ರಯಾಣ ಮಾಡುತ್ತಿರುವಾಗ ಮನುಷ್ಯನ ಎಲುಬನ್ನು ನೋಡಿದರೆ, ಅಲ್ಲಿ ಒಂದು ಗುರುತನ್ನು ನಿಲ್ಲಿಸುವರು; ಸಮಾಧಿ ಮಾಡುವವರು ಗೋಗನ ಸಮೂಹದ ಕಣಿವೆಯಲ್ಲಿ ಅದನ್ನು ಸಮಾಧಿ ಮಾಡುವ ತನಕ ಆ ಗುರುತು ಹಾಗೆಯೇ ನಿಂತಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ದಾರಿಗಳಲ್ಲಿ ಯಾವನೇ ಆಗಲಿ ಪ್ರಯಾಣಮಾಡುತ್ತಿರುವಾಗ ಮನುಷ್ಯರ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ನಿಲ್ಲಿಸುವನು; ಹೂಣಿಡುವವರು ಗೋಗನ ಸಮೂಹದ ತಗ್ಗಿನಲ್ಲಿ ಅದನ್ನು ಹೂಣುವ ತನಕ ಆ ಗುರುತು ಹಾಗೇ ನಿಂತಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅವರಲ್ಲೊಬ್ಬನಿಗೆ ಒಂದು ಎಲುಬು ನೋಡಸಿಕ್ಕಿದರೆ ಅವನು ಅಲ್ಲಿ ಒಂದು ಗುರುತನ್ನಿಡುವನು. ಹೂಣಿಡುವವರು ಬಂದು ಆ ಎಲುಬನ್ನು ತೆಗೆದು ಗೋಗನ ಸೈನ್ಯದ ತಗ್ಗಿನಲ್ಲಿ ಹೂಣಿಡುವ ತನಕ ಆ ಗುರುತು ಅಲ್ಲಿಯೇ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಪ್ರಯಾಣಿಕರು ಆ ದೇಶದಲ್ಲಿ ಹಾದುಹೋಗುತ್ತಿರುವಾಗ ಯಾವುದಾದರೊಂದು ಮನುಷ್ಯನ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ಹಾಕುವರು, ಹೂಣಿಡುವವರು ಅದನ್ನು ಹಾಮೋನ್ ಗೋಗಿನ ಕಣಿವೆಯಲ್ಲಿ ಹೂಳಿಡುವ ತನಕ ಆ ಗುರುತು ಹಾಗೆಯೇ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 39:15
4 ತಿಳಿವುಗಳ ಹೋಲಿಕೆ  

ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.


“ಆ ದಿನದಲ್ಲಿ ನಾನು ಇಸ್ರಯೇಲಿನೊಳಗೆ ಲವಣಸಮುದ್ರದ ಪೂರ್ವದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ಕಣಿವೆಯನ್ನು ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು; ಅಲ್ಲಿ ಪ್ರಯಾಣಮಾಡಲು ಆಗುವುದಿಲ್ಲ; ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು; ಅದು ‘ಹಮೋನ್ ಗೋಗ್’ ಕಣಿವೆ ಎನಿಸಿಕೊಳ್ಳುವುದು.


ತರುವಾಯ ಅವರು ನಾಡನ್ನು ಶುದ್ಧಿಮಾಡುವುದಕ್ಕೆ ತಕ್ಕವರನ್ನು ಆರಿಸಿ, ‘ನೀವು ನಾಡಿನಲ್ಲಿ ತಿರುಗಾಡುತ್ತಾ ನೆಲದ ಮೇಲೆ ಉಳಿದಿರುವ ಎಲುಬುಗಳನ್ನು ಹೂಣಿಡಿ’ ಎಂದು ನಿಯತವಾಗಿ ನೇಮಿಸುವರು; ಏಳು ತಿಂಗಳು ಕಳೆದ ಕೂಡಲೆ, ಇವರು ಈ ಹುಡುಕುವ ಕೆಲಸದಲ್ಲಿ ತೊಡಗುವರು.


(ಇದಲ್ಲದೆ ಒಂದು ಪಟ್ಟಣಕ್ಕೆ ‘ಹಮೋನ್’ ಪುರವೆಂದು ಹೆಸರಾಗುವುದು.) ಹೀಗೆ ದೇಶವನ್ನು ಶುದ್ಧಿಮಾಡುವರು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು