Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 33:11 - ಕನ್ನಡ ಸತ್ಯವೇದವು C.L. Bible (BSI)

11 ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲವಲೇಶವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿ, ಬಿಟ್ಟುಬಿಡಿ; ನೀವು ಏಕೆ ಸಾಯಬೇಕು?” ಇದು ಸರ್ವೇಶ್ವರನಾದ ದೇವರ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಸ್ವಲ್ಪವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟುಬಿಡಲಿ; ಇಸ್ರಾಯೇಲಿನ ಮನೆತನದವರೇ ನೀವು ಏಕೆ ಸಾಯಬೇಕು?’” ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ. ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿರಿ, ಬಿಟ್ಟುಬಿಡಿರಿ; ನೀವು ಸಾಯಲೇಕೆ? ಇದು ಕರ್ತನಾದ ಯೇಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅವರಿಗೆ ಹೇಳು, ‘ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷವಾಗುವುದಿಲ್ಲ. ಆದರೆ ಆ ದುಷ್ಟನು ದುರ್ಮಾರ್ಗದಿಂದ ತಿರುಗಿಕೊಂಡು ಜೀವಿಸುವುದಾದರೆ ಅದರಲ್ಲಿಯೇ ನನಗೆ ಸಂತೋಷ ಸಿಗುವುದು; ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿಕೊಳ್ಳಿರಿ. ನೀವು ಸಾಯುವುದು ಏಕೆ? ಇದು ಸಾರ್ವಭೌಮ ಯೆಹೋವ ದೇವರ ವಾಕ್ಯ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 33:11
35 ತಿಳಿವುಗಳ ಹೋಲಿಕೆ  

ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ.


ಕೆಲವರು ಭಾವಿಸುವಂತೆ ಪ್ರಭು ತಮ್ಮ ವಾಗ್ದಾನಗಳನ್ನು ನೆರವೇರಿಸುವುದರಲ್ಲಿ ವಿಳಂಬ ಮಾಡುವವರಲ್ಲ; ಆದರೆ ಅವರು ನಿಮ್ಮ ವಿಷಯದಲ್ಲಿ ದೀರ್ಘಶಾಂತಿ, ಸಹನೆಯುಳ್ಳವರು. ಯಾರೊಬ್ಬನೂ ನಾಶವಾಗಬೇಕೆಂಬುದು ಅವರ ಇಚ್ಛೆಯಲ್ಲ; ಎಲ್ಲರೂ ಪಶ್ಚಾತ್ತಾಪಪಟ್ಟು ತಮಗೆ ಅಭಿಮುಖರಾಗಬೇಕೆಂಬುದೇ ಅವರ ಅಪೇಕ್ಷೆ.


ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು.


ನನಗೆ ತಪ್ಪುಮಾಡುವವನು ತನ್ನಾತ್ಮಕ್ಕೇ ಕೇಡುಮಾಡುತ್ತಾನೆ ನನ್ನನ್ನು ಹಗೆಮಾಡುವವರೆಲ್ಲರು ಮೃತ್ಯುವನ್ನು ಪ್ರೀತಿಸುತ್ತಾರೆ.


ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ.


ನನ್ನ ಎಚ್ಚರಿಕೆಯ ಮಾತಿನತ್ತ ಗಮನಕೊಡಿ; ನನ್ನ ಚೈತನ್ಯವನ್ನು ನಿಮ್ಮ ಮೇಲೆ ಸುರಿಸಿ, ನನ್ನ ನುಡಿಯನ್ನು ನಿಮಗೆ ತಿಳಿಯಪಡಿಸುವೆನು.


ಸರ್ವೇಶ್ವರ : “ಭ್ರಷ್ಟರಾದ ಜನರೇ, ಹಿಂದಿರುಗಿ ಬನ್ನಿ, ನಾನು ನಿಮ್ಮ ಭ್ರಷ್ಟತನವನ್ನು ಪರಿಹರಿಸುವೆನು.”


“ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ?


“ಆದಕಾರಣ ನೀನು ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀವು ನಿಮ್ಮ ವಿಗ್ರಹಗಳನ್ನು ತೊರೆದುಬಿಟ್ಟು ಹಿಂದಿರುಗಿರಿ; ನಿಮ್ಮ ಎಲ್ಲಾ ಅಸಹ್ಯವಸ್ತುಗಳ ಕಡೆಗೆ ಬೆನ್ನುಮಾಡಿರಿ.


ನರಮಾನವರನ್ನು ಹಿಂಸಿಸಿ ದುಃಖಪಡಿಸುವುದು ಆತನಿಗೆ ಎಷ್ಟುಮಾತ್ರಕ್ಕೂ ಇಷ್ಟವಿಲ್ಲ.


ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನಂತೆ ಇದ್ದೇವೆ ನಾವು. ಮನುಷ್ಯರ ಪ್ರಾಣತೆಗೆಯುವುದಕ್ಕೆ ದೇವರಿಗೆ ಇಷ್ಟ ಇಲ್ಲ; ಹೊರದೂಡಲಾದವನು ತಿರುಗಿ ಬಳಿಗೆ ಬರುವ ಹಾಗೆ ಅವರು ಸದುಪಾಯಗಳನ್ನು ಕಲ್ಪಿಸುವವರಾಗಿರುತ್ತಾರೆ.


ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಈ ವಿಪತ್ತೆಲ್ಲಾ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಧರ್ಮಮಾರ್ಗಗಳನ್ನು ತೊರೆದುಬಿಟ್ಟಿದ್ದೇವೆ. ನಿಮ್ಮ ಸತ್ಯೋಪದೇಶವನ್ನು ಗ್ರಹಿಸಿ ನಡೆಯುವಂತೆ ನಮ್ಮ ದೇವರಾದ ಸರ್ವೇಶ್ವರನೆಂಬ ನಿಮ್ಮ ದಯೆಯನ್ನು ಬೇಡಿಕೊಳ್ಳಲಿಲ್ಲ.


“ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ ಅಸಹ್ಯವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಲಸು ಮಾಡಿದ್ದರಿಂದ ಖಂಡಿತವಾಗಿ ನಾನು ಸಹಿಸೆನು, ಕಟಾಕ್ಷಿಸೆನು, ಕ್ಷಮಿಸೆನು.


ದಮಸ್ಕಸ್ ಮೊದಲ್ಗೊಂಡು ಜೆರುಸಲೇಮಿಗೂ ಮತ್ತು ಎಲ್ಲ ಜುದೇಯ ನಾಡಿಗೂ ಹಾಗೂ ಅನ್ಯಧರ್ಮೀಯರಲ್ಲಿಗೂ ಹೋಗಿ, ಜನರು ತಮ್ಮತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೈವಾಭಿಮುಖಿಗಳಾಗಬೇಕೆಂದು ಬೋಧಿಸಿದೆ; ಪಶ್ಚಾತ್ತಾಪ ಸೂಚಕಕಾರ್ಯಗಳನ್ನು ಕೈಗೊಳ್ಳುವಂತೆ ಘೋಷಿಸಿದೆ.


ಆದರೂ ನನ್ನ ಜೀವದಾಣೆ ಸರ್ವೇಶ್ವರನ ಮಹಿಮೆ ಅಖಿಲ ವಿಶ್ವವನ್ನು ತುಂಬಿದೆಯೆಂಬ ಸತ್ಯವಾಕ್ಯದ ಆಣೆ. ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ವಾಗ್ದತ್ತ ನಾಡನ್ನು ನೋಡುವುದಿಲ್ಲ.


ಕಣ್ಣೆತ್ತಿ ಸುತ್ತಮುತ್ತಲು ನೋಡು : ಬರುತಿಹರು ನಿನ್ನ ಬಳಿಗೆ ಅವರೆಲ್ಲರು ಕೂಡಿಕೊಂಡು. ನನ್ನ ಜೀವದಾಣೆ ನಿನಗೆ ಹೇಳುವುದೇನೆಂದರೆ : ‘ವಧುವು ಒಡವೆಗಳನು ಧರಿಸಿಕೊಳ್ಳುವಂತೆ ಅವರಾಗುವರು ನಿನಗೆ ಆಭರಣಗಳಂತೆ.’


ಇಗೋ, ಸೇನಾಧೀಶ್ವರ ಸರ್ವೇಶ ಎಂಬ ಹೆಸರುಳ್ಳ ರಾಜಾಧಿರಾಜನ ನುಡಿ: ‘ಪರ್ವತಗಳನ್ನು ಮೀರುವ ತಾಬೋರ್ ಬೆಟ್ಟದಂತೆ ಸಮುದ್ರದಿಂದೆದ್ದಿರುವ ಕರ್ಮೆಲ್ ಗುಡ್ಡದಂತೆ ಉನ್ನತನೊಬ್ಬನು ಬರುವನು, ನನ್ನ ಜೀವದಾಣೆ.’


ಸರ್ವೇಶ್ವರನ ಮಾತಿದು - “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಕೊನ್ಯನೇ, ನೀನು ನನ್ನ ಬಲಗೈ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುತ್ತಿದ್ದೆ.


ನೀವು ಅವರಿಗೆ ಹೀಗೆ ಹೇಳಬೇಕು: ‘ಸರ್ವೇಶ್ವರ ಹೇಳುವುದೇನೆಂದರೆ - ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಆಡಿಕೊಂಡ ಪ್ರಕಾರವೇ ನಾನು ಮಾಡುತ್ತೇನೆ.


ಇಸ್ರಯೇಲಿನ ಜೀವಂತ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಶ್ಚಯವಾಗಿ ಹೇಳುತ್ತೇನೆ - ಸೊದೋಮಿನ ಗತಿಯೇ ಮೋವಾಬಿನ ಗತಿ ಆಗುವುದು. ಗೊಮೋರಾದ ದುರ್ಗತಿಯೇ ಅಮ್ಮೋನ್ಯರಿಗೆ ಸಂಭವಿಸುವುದು. ಈ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯನಾಶನಕ್ಕೆ ಈಡಾಗುವುವು. ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು; ಅಳಿದುಳಿದ ನನ್ನ ಜನರಿಗೆ ಅವು ಸೊತ್ತಾಗುವುವು.”


ಪವಿತ್ರಗ್ರಂಥದಲ್ಲಿ : ಎಲ್ಲರೂ ನನಗೆ ಸಾಷ್ಟಾಂಗವೆರಗುವರು ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು ಇದಕ್ಕೆ ಜೀವಸ್ವರೂಪನಾದ ನಾನೇ ಸಾಕ್ಷಿ,” ಎಂದು ಸರ್ವೇಶ್ವರಸ್ವಾಮಿ ಹೇಳಿದ್ದಾರೆ.


ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀನೂ ನಿನ್ನ ಕುವರಿಯರೂ ನಡೆದಂತೆ ಸೊದೋಮೆಂಬ ನಿನ್ನ ತಂಗಿಯಾಗಲಿ ಆಕೆಯ ಕುವರಿಯರಾಗಲಿ ನಡೆಯಲಿಲ್ಲ.


ಕಂಡುಹಿಡಿಯಲಾಗದು ಇಂಥ ಸರ್ವಶಕ್ತನನು ನಮ್ಮಿಂದ ಶಕ್ತಿಯಲೂ ಸತ್ಯದಲೂ ಪರಮ ಪರಾಕ್ರಮಿ ಆತ ನ್ಯಾಯಪೂರ್ಣನಾದ ಆತ ದಬ್ಬಾಳಿಕೆ ನಡೆಸುವವನಲ್ಲ ನ್ಯಾಯಕ್ಕಾಗಲೀ ಧರ್ಮಕ್ಕಾಗಲೀ ಆತ ಧಕ್ಕೆ ತರುವವನಲ್ಲ.


ನೀನು ಉತ್ತರ ದಿಕ್ಕಿಗೆ ಹೋಗಿ ಆ ಇಸ್ರಯೇಲಿಗೆ ಈ ಸಂದೇಶವನ್ನು ಸಾರು - ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ; ಭ್ರಷ್ಟಳಾದ ಇಸ್ರಯೇಲೇ, ಹಿಂದಿರುಗು; ನಾನು ಅಷ್ಟು ಕೋಪಮುಖದಿಂದ ನಿನ್ನನ್ನು ನೋಡುವುದಿಲ್ಲ. ನಾನು ಕರುಣಾಮೂರ್ತಿ, ನಿತ್ಯಕೋಪಿಯಲ್ಲ.


“ಹೀಗಿರಲು, ಸೇನಾಧೀಶ್ವರ ಸ್ವಾಮಿಯೂ ಇಸ್ರಯೇಲಿನ ದೇವರೂ ಆದ ಸರ್ವೇಶ್ವರ ಈಗ ಹೇಳುವುದನ್ನು ಕೇಳಿ: ‘ಈ ದೊಡ್ಡ ಕೇಡನ್ನು ನಿಮಗೆ ನೀವೆ ಬರಮಾಡಿಕೊಳ್ಳುವುದು ಸರಿಯೆ? ಈ ದುರಾಚಾರದ ನಿಮಿತ್ತ ಜುದೇಯದ ಗಂಡಸರು, ಹೆಂಗಸರು, ಮಕ್ಕಳು, ಮೊಲೆಕೂಸುಗಳು ನಿರ್ಮೂಲವಾಗುವರು. ನಿಮ್ಮಲ್ಲಿ ಯಾರೂ ಉಳಿಯರು.


ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.”


ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು I ಸಾರುವುದೆನ್ನ ಬಾಯಿ ನಿನ್ನ ನುಡಿಗಳನು II


ಅದಕ್ಕೆ ಪಹರೆಯವನು, “ಹಗಲು ಬರುತ್ತಿದೆ ಮತ್ತೆ ರಾತ್ರಿಯೂ ಬರುತ್ತದೆ. ಬೇಕಾದರೆ ಆಮೇಲೆ ಬಂದು ವಿಚಾರಿಸಿರಿ,” ಎಂದನು.


ಪ್ರವಾಸಿಗಳಾಗಿ ನೀವು ಬಂದಿರುವ ಈಜಿಪ್ಟಿನಲ್ಲಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತುವ ದುಷ್ಕೃತ್ಯವನ್ನು ನಡೆಸುತ್ತಾ ನನ್ನನ್ನು ಕೆಣಕುತ್ತಿದ್ದೀರಿ. ಆದ್ದರಿಂದ ನೀವೂ ನಿರ್ಮೂಲರಾಗಿ ಎಲ್ಲ ಭೂರಾಜ್ಯಗಳ ಶಾಪ, ನಿಂದೆ, ದೂಷಣೆಗಳಿಗೆ ಗುರಿಯಾಗುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು