Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 32:4 - ಕನ್ನಡ ಸತ್ಯವೇದವು C.L. Bible (BSI)

4 ಆಕಾಶದ ಪಕ್ಷಿಗಳು ನಿನ್ನ ಮೇಲೆರಗುವಂತೆ, ಸಮಸ್ತ ಭೂಜಂತುಗಳು ನಿನ್ನಿಂದ ತೃಪ್ತಿಗೊಳ್ಳುವಂತೆ, ನಿನ್ನನೆಸೆದುಬಿಡುವೆ ನೆಲದ ಮೇಲೆ ಬಯಲಿಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು; ನಿನ್ನನ್ನು ಬಯಲಿನಲ್ಲಿ ಎಸೆದು ಆಕಾಶದ ಪಕ್ಷಿಗಳೆಲ್ಲಾ ನಿನ್ನ ಮೇಲೆ ಎರಗುವಂತೆ ಮಾಡಿ, ಸಮಸ್ತ ಭೂಜಂತುಗಳನ್ನು ನಿನ್ನಿಂದ ತೃಪ್ತಿಗೊಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು; ನಿನ್ನನ್ನು ಬೈಲಿನಲ್ಲಿ ಎಸೆದು ಆಕಾಶಪಕ್ಷಿಗಳೆಲ್ಲಾ ನಿನ್ನ ಮೇಲೆ ಎರಗುವಂತೆ ಮಾಡಿ ಸಮಸ್ತಭೂಜಂತುಗಳನ್ನು ನಿನ್ನಿಂದ ತೃಪ್ತಿಗೊಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆಮೇಲೆ ನಿನ್ನನ್ನು ಒಣನೆಲದ ಮೇಲೆ ಹಾಕುವೆನು. ಹೊಲದ ಮೇಲೆ ನಿನ್ನನ್ನು ಬಿಸಾಡುವೆನು. ಎಲ್ಲಾ ಪಕ್ಷಿಗಳು ನಿನ್ನನ್ನು ತಿಂದುಬಿಡುವಂತೆ ಮಾಡುವೆನು. ಎಲ್ಲಾ ಕಡೆಗಳಿಂದ ಕಾಡುಮೃಗಗಳು ಬಂದು ನಿನ್ನನ್ನು ಹೊಟ್ಟೆತುಂಬಾ ತಿನ್ನುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು. ಬಯಲಿನ ಮೇಲೆ ಬಿಸಾಡುವೆನು. ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 32:4
19 ತಿಳಿವುಗಳ ಹೋಲಿಕೆ  

ಹೀಗೆ ಕಡಿಯಲ್ಪಟ್ಟವರ ಶವಗಳೆಲ್ಲ ರಣಹದ್ದುಗಳ ಮತ್ತು ಕಾಡುಮೃಗಗಳ ಪಾಲಾಗುವುವು; ಪಕ್ಷಿಗಳಿಗೆ ಬೇಸಿಗೆಯ ಆಹಾರವಾಗುವುವು, ಪ್ರಾಣಿಗಳಿಗೆ ಚಳಿಗಾಲದ ಉಣಿಸಾಗುವುವು.


ನಿನ್ನನ್ನೂ ನಿನ್ನ ಎಲ್ಲ ಮೀನುಗಳನ್ನೂ ಕಾಡುಪಾಲು ಮಾಡುವೆನು; ನೀನು ಬಯಲಿನಲ್ಲಿ ಬಿದ್ದಿರುವೆ; ನಿನ್ನನ್ನು ಯಾರೂ ಹೊರರು, ಹೂಣಿಡರು; ನಿನ್ನನ್ನು ಭೂಜಂತುಗಳಿಗೂ ಆಕಾಶದ ಪಕ್ಷಿಗಳಿಗೂ ಆಹಾರ ಮಾಡಿದ್ದೇನೆ.


“ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ಧಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ.


ಆ ದಿನದಲ್ಲಿ ಸರ್ವೇಶ್ವರನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಿದ್ದಿರುವರು. ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣರು. ಭೂಮಿಯ ಮೇಲೆ ಗೊಬ್ಬರವಾಗಿ ಬಿದ್ದಿರುವರು.


ಅವರು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ, ಪೂಜಿಸಿದ ಸೂರ್ಯ,‍ ಚಂದ್ರ, ತಾರಾಗಣಗಳ ಎದುರಿಗೇ ಆ ಎಲುಬುಗಳನ್ನು ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವುವು.


ಅವರು ಹೊರಟುಹೋಗುವಾಗ ನೋಡುವರು ನನಗೆ ದ್ರೋಹವೆಸಗಿದವರ ಹೆಣಗಳನು ಸಾಯುವುದಿಲ್ಲ ಅವುಗಳನ್ನು ಕಡಿಯುವ ಹುಳು ಆರುವುದಿಲ್ಲ ಅವುಗಳನ್ನು ಸುಡುವ ಬೆಂಕಿಯು ಎಲ್ಲ ಮನುಜರಿಗವು ಅಸಹ್ಯವಾಗಿರುವುವು.”


ನಿನ್ನನ್ನಾದರೊ ಕೊಳೆತ ಕಡ್ಡಿಯಂತೆ ಬಿಸಾಡಿಹರು ಕೆಳಕೆ ಗೋರಿಯಿಲ್ಲದ ನಿನ್ನ ಶವ ಈಡಾಗಿದೆ ಪರರ ತುಳಿತಕ್ಕೆ, ಕತ್ತಿ ತಿವಿದ, ಕಲ್ಲುಗುಂಡಿಗೆ ಪಾಲಾದ ಹೆಣಗಳೇ ನಿನ್ನ ಹೊದಿಕೆ.


ಲೆವಿಯಾತಾನನ ಶಿರಗಳ ಖಂಡನ ಮಾಡಿದವ ನೀನು I ಕಾಡು ಮೃಗಕ್ಕವನನು ಕೂಳಾಗಿಸಿದವ ನೀನು II


ಕತ್ತಿಗವರು ತುತ್ತಾಗುವರು I ನರಿತೋಳಗಳ ಪಾಲಾಗುವರು II


ನಿನ್ನ ಪರ್ವತಗಳನ್ನು ನಿನ್ನವರ ಶವಗಳಿಂದ ತುಂಬಿಸುವೆನು; ಖಡ್ಗಹತರು ನಿನ್ನ ಗುಡ್ಡತಗ್ಗು ತೊರೆಗಳಲ್ಲಿ ಬಿದ್ದುಹೋಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು